ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎರಡು ದಿನದಲ್ಲಿ ಮನೆ ಸ್ವಾಧೀನ’

ಮಗನಿಂದ ವಂಚನೆ–ವಿಶಾಲಾಕ್ಷಮ್ಮಗೆ ಕೊನೆಗೂ ಸಿಕ್ಕಿತು ನ್ಯಾಯ
Last Updated 18 ಮೇ 2015, 19:30 IST
ಅಕ್ಷರ ಗಾತ್ರ

ಉಡುಪಿ: ಮಗನಿಂದಲೇ  ವಂಚನೆ ಗೊಳ ಗಾಗಿ ಮನೆ ಕಳೆದುಕೊಂಡಿದ್ದ ಬೆಂಗಳೂ ರಿನ ಗೊಟ್ಟಿಗೆರೆಯ ವಿಶಾಲಾಕ್ಷಮ್ಮ ಅವ ರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಮಗನ ಸುಪರ್ದಿಯಲ್ಲಿರುವ ಮನೆಯನ್ನು ವಿಶಾ ಲಾಕ್ಷಮ್ಮ ಅವರ ವಶಕ್ಕೆ ನೀಡುವಂತೆ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಬೆಂಗಳೂರಿನ ಆಗ್ನೇಯ ವಿಭಾಗದ ಉಪ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್‌ ಹೇಳಿದರು.

ವಿಶಾಲಾಕ್ಷಮ್ಮ ಅವರ ಮನೆಯನ್ನು ಬಲವಂತವಾಗಿ ತನ್ನ ಹೆಸರಿಗೆ ಬರೆಯಿ ಸಿಕೊಂಡಿದ್ದ ಮಗ, ಅವರನ್ನು ಮನೆ ಯಿಂದ ಹೊರದೂಡಿದ್ದ. ಮನೆಯನ್ನು ವಾಪಸ್‌ ಪಡೆಯಲು ಅವರು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯ ಅನ್ವಯ ಉಪ ವಿಭಾಗಾಧಿಕಾರಿ ನ್ಯಾಯಾ ಲಯಕ್ಕೆ ಮೊರೆ ಹೋಗಿದ್ದರು. 90 ದಿನ ದಲ್ಲಿ ಆದೇಶ ನೀಡಬೇಕು ಎಂಬುದು ನಿಯಮ. ಆದರೆ, ಸುಮಾರು ಒಂದು ವರ್ಷದ ನಂತರ ದೂರುದಾರರ ಪರ ವಾಗಿ ಆದೇಶ ಬಂದಿತ್ತು ಎಂದು ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪ ವಿಭಾಗಾಧಿಕಾರಿ ನ್ಯಾಯಾ ಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು, ಆದರೆ, ಜಿಲ್ಲಾಧಿಕಾರಿ ಅವರು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರು.

ಈ ಬಗ್ಗೆ ಸಚಿವೆ ಉಮಾಶ್ರೀ ಅವರಿಗೆ ಪತ್ರ  ಬರೆಯಲಾ ಗಿತ್ತು. ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆಯ ನಿರ್ದೇಶಕರ ಗಮನಕ್ಕೂ ತರಲಾಗಿತ್ತು.

ನಿರ್ದೇಶಕರು ಈಗ ಉಪ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿ ದ್ದಾರೆ. ಇನ್ನೆರಡು ದಿನಗಳಲ್ಲಿ ಮನೆಯನ್ನು ವಿಶಾಲಾಕ್ಷಮ್ಮ ಸ್ವಾಧೀನಕ್ಕೆ ಪಡೆಯಲಿ ದ್ದಾರೆ ಎಂದರು.

‘ಮಗ ಮನೆಯನ್ನು ಮೊಮ್ಮಗನ ಹೆಸರಿಗೆ ಬರೆದಿದ್ದಾನೆ. ಆತ ಸಹ ನನಗೆ ನೋಟಿಸ್‌ ನೀಡಿದ್ದ. ಆದರೆ, ಕಾನೂನಿನ ಪ್ರಕಾರ ಬೇರೆಯವರ ಹೆಸರಿಗೆ ಮನೆ ಯನ್ನು ನೋಂದಣಿ ಮಾಡಲು ಬರುವು ದಿಲ್ಲ’ ಎಂದು ವಿಶಾಲಾಕ್ಷಮ್ಮ ಹೇಳಿದರು.

ಭರವಸೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ರಜನೀಶ್‌ ಗೋಯಲ್‌ ಅವರು ನನ್ನ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದರು. ನೊಂದ ಹಿರಿಯ ನಾಗರಿಕರ ಪರವಾಗಿ ಕೆಲಸ ಮಾಡುವು ದಾದರೆ ಇಲಾಖೆಯಲ್ಲಿಯೇ ಕೊಠಡಿ ನೀಡುವುದಾಗಿ ಅವರು ಭರವಸೆ ನೀಡಿದ್ದರು ಎಂದು ಮಗನಿಂದ ವಂಚನೆಗೊಳಗಾದ ವಿಶಾಲಾಕ್ಷಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT