ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಂಜನ ಓದುಗರಿಗೆ ಬದ್ಧರಾಗಿದ್ದ ಲೇಖಕ’

Last Updated 5 ನವೆಂಬರ್ 2014, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ನಿರಂಜನ ಅವರು ಓದು­ಗ­ರಿಗೆ ಬದ್ಧರಾಗಿದ್ದರು. ಜನರಿಗೆ ಬೌದ್ಧಿ­ಕ­­­ವಾಗಿ ಅಗತ್ಯವಿರುವ ಸಾಹಿತ್ಯವನ್ನು ಸೃಷ್ಟಿ­ಸಿದ ಅಪರೂಪದ ಲೇಖಕ’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಕನ್ನಡ ವಿಕಿಪೀಡಿಯ ಸಮುದಾ­ಯವು  ಸಾಹಿತಿ ನಿರಂಜನ ಅವರ ಪುಸ್ತ­­ಕ­­ಗಳನ್ನು ವಿಕಿಪೀಡಿಯದಲ್ಲಿ ಬಿಡು­ಗಡೆ ಮಾಡಲು ಬುಧವಾರ ಏರ್ಪ­ಡಿ­ಸಿದ್ದ ಕಾರ್ಯ­ಕ್ರಮ­ದಲ್ಲಿ ಮಾತನಾಡಿದರು.

‘ನಾನು ಸಾಹಿತ್ಯ ರಚನೆಗೆ ತೊಡ­ಗು­ವು­­­­­­ದಕ್ಕೂ ಹಿಂದೆಯೇ ನಿರಂಜನ ಅವರು ತಮ್ಮ ಲೇಖನಗಳ ಮೂಲಕ ದೊಡ್ಡ ಪ್ರಭಾ­­­­­ವಳಿಯನ್ನು ಸೃಷ್ಟಿಸಿದ್ದರು. ಅವ­ರೊಂ­­­ದಿಗೆ ಹೆಚ್ಚು ಬೆರೆಯಲು ಸಾಧ್ಯ­ವಾ­ಗ­­­ಲಿಲ್ಲ. ಆದರೆ, ಅವರ ಮೇಲೆ ಗೌರವ ಇದೆ’ ಎಂದರು.

ಹೊಸತು ಪತ್ರಿಕೆಯ ಸಂಪಾದಕ ಡಾ.­ಸಿದ್ದನಗೌಡ ಪಾಟೀಲ ಮಾತ­ನಾಡಿ, ‘ನಿರಂಜನ ಅವರು ಸಾಹಿತ್ಯ ರಚನೆ­ಯನ್ನು ಗುರಿಯಾ­ಗಿಸಿ­ಕೊಂಡ­ವ­ರಲ್ಲ. ಸಾಹಿತ್ಯ­ವನ್ನು ಮಾಧ್ಯಮವನ್ನಾಗಿ ಬಳಸಿ­ಕೊಂಡು ಸಾಮಾಜಿಕ ಬದ­ಲಾ­ವಣೆಗೆ ಬೇಕಾದ ಅಂಶಗಳನ್ನು ತಮ್ಮ ಕೃತಿಗಳ ಮೂಲಕ ನೀಡಿದರು’ ಎಂದರು.

‘ಅವರ 13ನೇ ವಯಸ್ಸಿನಲ್ಲಿ ಮೊದಲ ಕಥಾ ಸಂಕಲನ ಪ್ರಕಟ­ವಾ­ಯಿತು. 19ನೇ ವಯಸ್ಸಿನಲ್ಲಿ ಪತ್ರ­ಕರ್ತ­ರಾಗಿ ವೃತ್ತಿ ಆರಂಭಿಸಿದರು. ಬದುಕೇ ಅವರ ವಿಶ್ವವಿದ್ಯಾಲಯವಾಗಿತ್ತು. 23 ಕಾದಂಬರಿ, 10 ಕಥಾ ಸಂಕಲನ ಮತ್ತು 2 ಸಾವಿರ ಅಂಕಣ ಬರಹ­ಗ­ಳನ್ನು ಬರೆ­ದಿ­ದ್ದಾರೆ’ ಎಂದರು.

ನಿರಂಜನ ಅವರ ಪುತ್ರಿ ಡಾ.­ತೇಜ­ಸ್ವಿನಿ ಅವರು ನಿರಂಜನ ಅವರ 55 ಕೃತಿ­ಗ­ಳನ್ನು ಕ್ರಿಯೇ­ಟಿವ್‌ ಕಾಮನ್ಸ್‌ ಪರ­ವಾ­ನಗಿ­ಯೊಂ­ದಿಗೆ ವಿಕಿಪೀಡಿ­ಯ­ದಲ್ಲಿ ಪ್ರಕಟ ಮಾಡಲು ಸಹಿ ಹಾಕಿದರು. ‘ಪ್ರಜಾವಾಣಿ’ಯ ಮುಖ್ಯ ಉಪ­ಸಂಪಾ­ದಕ ಎನ್‌.­ಎ.ಎಂ.ಇಸ್ಮಾಯಿಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT