ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರಾತತ್ವಶಾಸ್ತ್ರಜ್ಞನೂ ವಿಜ್ಞಾನಿಯಂತೆ’

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಹಳೆಯ ವಸ್ತುಗಳು ಶ್ರೀ ಸಾಮಾನ್ಯ ಹಾಗೂ ಪುರಾತತ್ವ­ಶಾಸ್ತ್ರಜ್ಞ­ನಿಗೆ  ವಿಭಿನ್ನವಾಗಿ ಕಾಣು­ತ್ತವೆ’ ಎಂದು ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್‌.ರಾವತ್‌ ಅಭಿಪ್ರಾಯಪಟ್ಟರು.

ಜೈನ್‌  ವಿಶ್ವವಿದ್ಯಾಲಯ, ಕೆನರಾ ಬ್ಯಾಂಕ್‌,  ಭಾರತೀಯ ಪುರಾತತ್ವ ಇಲಾಖೆ, ನಿಯಾಸ್‌್್, ಇಂಗ್ಲೆಂಡ್‌ನ ಎಕ್ಸೆಟೆರ್‌್್ ವಿಶ್ವವಿದ್ಯಾಲಯ ಸಹ­ಭಾಗಿತ್ವ­ದಲ್ಲಿ ನಗರದಲ್ಲಿ ಶುಕ್ರವಾರ ನಡೆದ ‘ವಸ್ತು ಸಂಸ್ಕೃತಿಯ  ಕುರಿತ 3 ದಿನಗಳ ಅಂತರರಾಷ್ಟ್ರೀಯ ಕಮ್ಮಟ ಕಾರ್ಯಾ­ಗಾರ’ದಲ್ಲಿ ಅವರು ಮಾತನಾಡಿದರು.

‘ಒಬ್ಬ ಶ್ರೀಸಾಮಾನ್ಯ ಹಳೆಯ ವಸ್ತುಗಳ ಇತಿಹಾಸವನ್ನು ಸಂಪ್ರದಾಯ ಮನೋಭಾವದಿಂದ ಗ್ರಹಿಸಿದರೆ, ಪುರಾತತ್ವಶಾಸ್ತ್ರಜ್ಞ ಇತಿಹಾಸವನ್ನು ಸಂಶೋಧಿಸಿ, ಒಬ್ಬ ವಿಜ್ಞಾನಿಯಂತೆ ಸತ್ಯವನ್ನು ಬಯಲಿಗಿಡುತ್ತಾನೆ’ ಎಂದರು.

ನಮ್ಮ ಸಮಾಜ, ಸಂಸ್ಕೃತಿ ಮತ್ತು ಇನ್ನಿತರ ವಸ್ತುಗಳು ವಿಜ್ಞಾನಿಗೆ, ಕಲಾವಿದನಿಗೆ, ಪುರಾತತ್ವಶಾಸ್ತ್ರಜ್ಞನಿಗೆ, ತಂತ್ರಜ್ಞಾನಿಗೆ, ಪತ್ತೇದಾರನಿಗೆ ಹಲವು ಸ್ತರಗಳಲ್ಲಿ ಹಲವು ರೀತಿಯಲ್ಲಿ ಗೋಚರಿಸುತ್ತದೆ’ ಎಂದು ಹೇಳಿದರು.

ಕಲಾವಿದ ಎಸ್‌.ಜಿ ವಾಸುದೇವ್‌ ಮಾತನಾಡಿ, ‘ಇಂದಿನ ಯುವಜನತೆ ಕಲೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಚಿತ್ರಗಾರಿಕೆ ನನ್ನ ಕೈ ಹಿಡಿದಿದೆ. ಚಿತ್ರಗಾರಿಕೆಯ ಹಲವು ತಂತ್ರಗಳು ಮತ್ತು ನೂತನ ರಚನೆಯ ಬಗೆಗೆ ಇಂದಿನ ಯುವ ಕಲಾವಿದರು ಅಧ್ಯಯನ ಕೈಗೊಳ್ಳಬೇಕು’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಯೂನಿವರ್ಸಿಟಿ ಆಫ್‌ ಎಕ್ಸ್‌ಟೇರ್‌ ಪುರಾತತ್ವ ಇಲಾಖೆಯ ಪ್ರೊ. ಡಾ.ಗಿಲಿಯನ್‌ ಜೂಲೆಫ್‌,  ಬೆಂಗಳೂರು ವೃತ್ತದ ಭಾರತೀಯ ಪುರಾತತ್ವ ಇಲಾಖೆಯ  ಪುರಾತತ್ವಶಾಸ್ತ್ರಜ್ಞ ಟಿ.ಎಂ. ಕೇಶವ, ಪುಣೆಯ ಡೆಕ್ಕನ್‌ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಜಿ.ಬಿ.­ ದೆಗ್ಲೂಲ್ಕ, ಜೈನ್‌ ವಿಶ್ವವಿದ್ಯಾಲಯದ ಅಧ್ಯಕ್ಷ  ಡಾ. ಚೆನ್‌­ರಾಜ್‌ ರಾಯ್‌ಚಂದ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT