ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾಭಾರತ’ ದರ್ಶನ ಮಾಡಿಸಿದ ವಿದ್ವಾಂಸರು!

Last Updated 18 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ‘ಎಲೆ ನರಾಧಮ, ನಿಮ್ಮ ಭಾರತ ವರ್ಷಭೂಮಿಯೊಳೊಂದು
ವರ್ಷಾಂತರ ನಪುಂಸಕನಾಗಿ ಚಲಿಸು ನಿರಂತರ,
ಹರಿಯ ಮೊರೆ ಹೋಗು ಹರನ ನೀನನುಸರಿಸು...’ 
–‘ಕುಮಾರವ್ಯಾಸ ಭಾರತ’ದ ‘ಅರಣ್ಯ ಪರ್ವ’ದಲ್ಲಿ ಇಂದ್ರಲೋಕದ ಅಪ್ಸರೆ ಊರ್ವಶಿಯು ಅರ್ಜುನನಿಗೆ ಶಾಪ ನೀಡುವ ಪ್ರಸಂಗವು ಶನಿವಾರ ಕಣ್ಮುಂದೆ ಬಂದು ನಿಂತಂತಾಗಿತ್ತು.

ಲೇಖಕಿ ತಮಿಳ್ ಸೆಲ್ವಿ ಅವರ ವಿಶೇಷ ಭಾವ, ಭಾಷಾಭಿನಯದ ಸಾಮರ್ಥ್ಯ­ದಿಂದ ಹಳಗನ್ನಡದ ಈ ಪ್ರಸಂಗವು ಎಲ್ಲರ ಮನಕ್ಕೂ ಮುಟ್ಟಿತು. ‘ಊರ್ವಶಿ­–­ಅರ್ಜುನ’ನ ಸಂಭಾಷಣೆ­ಯನ್ನು ವಿಶಿಷ್ಟ ಶೈಲಿಯಲ್ಲಿ ಪಸ್ತುತಪ­ಡಿಸಿದ ಸೆಲ್ವಿಯವರಿಗೆ ಚಪ್ಪಾಳೆ, ಹರ್ಷೋ­ದ್ಘಾರ, ಮೆಚ್ಚು­ಗೆಯ ಪ್ರವಾಹವೇ ಹರಿದುಬಂತು.
‘ಸಾಹಿತ್ಯ ಸಂಭ್ರಮ’ದಲ್ಲಿ ಶನಿವಾರ ಸಂಜೆ ಮಹಾಭಾರತ ಪರಂಪರೆ ಓದು ಗೋಷ್ಠಿಯಲ್ಲಿ ಅವರ ನಿರೂಪಣಾ ಶೈಲಿಗೆ ಸೇರಿದ್ದವರೆಲ್ಲ ತಲೆದೂಗಿದರು. ಸಮಯ ಮೀರಿದರೂ ಓದಿ, ಇನ್ನಷ್ಟು ಹೇಳಿ ಎಂಬ ಪ್ರೋತ್ಸಾಹದ ನುಡಿಗಳು ಕೇಳಿಬಂದವು.

ಅರ್ಜುನನು ಪಾಶುಪತಾಸ್ತ್ರ ಗಳಿಸಲು ಶಿವನೊಂದಿಗೆ ಯುದ್ಧ ಮಾಡುತ್ತಾನೆ. ದೇವಾನುದೇವತೆಗಳು ಆ ಯುದ್ಧವನ್ನು ನೋಡುತ್ತಾರೆ. ಪಾಶುಪತಾಸ್ತ್ರ ಗಳಿಸಿದ ನಂತರ ದಣಿದ ಅರ್ಜುನನ್ನು ಆಯಾಸ ಪರಿಹಾರಕ್ಕಾಗಿ ಇಂದ್ರನು ದೇವಲೋಕಕ್ಕೆ ಕರೆದು­ಕೊಂಡು ಹೋಗುತ್ತಾನೆ. ಅಲ್ಲಿ ಅಪ್ಸರೆಯರ ನೃತ್ಯವನ್ನು ಏರ್ಪಡಿಸು ತ್ತಾನೆ. ಅದರಲ್ಲಿ ಊರ್ವಶಿಯನ್ನು ಅರ್ಜುನನು ಎವೆಯಿಕ್ಕದೇ ನೋಡುತ್ತಿರುತ್ತಾನೆ. ಪಾಂಡವರ ಪೂರ್ವಜ ಪುರು ಮತ್ತು ಊವರ್ಶಿಯ ಸಮ್ಮಿಲನದಿಂದ ತನ್ನ ವಂಶವೃದ್ಧಿಯಾಗಿದ್ದನ್ನು ನೆನಪಿಸಿ ಕೊಂಡಿರುತ್ತಾನೆ. ಊರ್ವಶಿಯನ್ನು ಜನನಿಯ ಗೌರವ ಭಾವನೆಯಿಂದ ಆತ ನೋಡುತ್ತಿರುತ್ತಾನೆ. ಆದರೆ ಇಂದ್ರ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಆಕೆಯನ್ನು ಅರ್ಜುನನ ಬಳಿಗೆ ಹೋಗು ವಂತೆ ಆದೇಶಿಸುತ್ತಾನೆ. ಆಕೆ ಸಂಪೂರ್ಣ ಸಿಂಗಾರಗೊಂಡು ಅರ್ಜು­ನನ ಬಳಿಗೆ ಹೋಗುತ್ತಾಳೆ. ಆ ಸಂದ ರ್ಭದಲ್ಲಿ ನಡೆದ ಸಂಭಾಷಣೆ ಮತ್ತು ಊರ್ವಶಿ ನೀಡುವ ಶಾಪವನ್ನು ಕವ ನದ ರೂಪದಲ್ಲಿ ಸೆಲ್ವಿ ಪ್ರಸ್ತುಪಡಿಸಿದರು.
ನಡು ನಡುವೆ ಅಗತ್ಯವಿದ್ದಾಗ ಹೊಸಗನ್ನಡ ದಲ್ಲಿ  ಅರ್ಥವನ್ನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT