ಪ್ರಶ್ನೆಯುಂಟೆ ಉತ್ತರ ಕರ್ನಾಟಕದ ತಿಂಡಿಗಳ ರುಚಿಗೆ?
ಉತ್ತರಕರ್ನಾಟಕದ ಭಾಷೆಯಷ್ಟೇ ತಿಂಡಿಗಳೂ ಚೆಂದ. ಇಲ್ಲಿನ ಜನರು ವಿಭಿನ್ನವಾದ ತಿಂಡಿಗಳನ್ನು ಮಾಡಲು ಹೆಸರುವಾಸಿ. ಥಾಲಿಪಟ್ಟಿನಂತಹ ತಿಂಡಿಗಳನ್ನು ಕರ್ನಾಟಕದ ಜನರಿಗೆ ಪರಿಚಯಿಸಿದ್ದು ಇವರೇ. ಮಹರಾಷ್ಟ್ರದ ವಡಾ ಪಾವ್ನಂತಹ ತಿಂಡಿಗಳ ಅಸಲಿ ರುಚಿಯನ್ನು ಸವಿಯಬೇಕು ಎಂದರೆ ನೀವು ಉತ್ತರ ಕರ್ನಾಟಕದ ಕಡೆಗೆ ಹೋಗಬೇಕು. ಉತ್ತರ ಕರ್ನಾಟಕ ಶೈಲಿಯ ಕೆಲವು ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸುವ ವಿಧಾನ ಇಲ್ಲಿದೆ.Last Updated 13 ಜುಲೈ 2018, 19:30 IST