ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌: ಏಪ್ರಿಲ್‌ 7ರಿಂದ ಪರಿಷ್ಕೃತ ಮಾರಾಟ ಶುಲ್ಕ ಜಾರಿ

Published 23 ಮಾರ್ಚ್ 2024, 15:47 IST
Last Updated 23 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ಇ–ಕಾಮರ್ಸ್‌ ವೇದಿಕೆಯಾದ ಅಮೆಜಾನ್‌ನಲ್ಲಿ ಉತ್ಪನ್ನಗಳ ಮಾರಾಟಕ್ಕೆ ವಿಧಿಸುವ ಶುಲ್ಕದ ಪರಿಷ್ಕರಣೆಗೆ ಅಮೆಜಾನ್ ಇಂಡಿಯಾ ನಿರ್ಧರಿಸಿದೆ.

ಅಮೆಜಾನ್‌ನಲ್ಲಿ ಮಾರಾಟ ಮಾಡುವ ಪ್ರತಿ ಉತ್ಪನ್ನಕ್ಕೂ ಮಾರಾಟಗಾರರಿಗೆ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕಗಳೇ ಕಂಪನಿಯ ಆದಾಯದ ಮೂಲಗಳಾಗಿವೆ. ಇದರಿಂದ ಕೆಲವು ನಿರ್ದಿಷ್ಟ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಅಮೆಜಾನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ.

ಹಣದುಬ್ಬರ, ಬಡ್ಡಿದರ, ಸಾಗಣೆ ವೆಚ್ಚ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಕೈಗಾರಿಕಾ ಚಾಲ್ತಿ ಶುಲ್ಕವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾರಾಟ ಶುಲ್ಕವನ್ನು ಪರಿಷ್ಕರಿಸಲಾಗುತ್ತಿದೆ. ಜೊತೆಗೆ, ಉತ್ಪನ್ನಗಳ ನಿರ್ವಹಣೆಗೆ ಶುಲ್ಕ ಏರಿಕೆಯು ಅನಿವಾರ್ಯವಾಗಿದೆ ಎಂದು ಕಂಪನಿಯು ಶನಿವಾರ ತಿಳಿಸಿದೆ.

ಅಮೆಜಾನ್‌ನಲ್ಲಿ ಏಪ್ರಿಲ್‌ 7ರಿಂದ ಈ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ರೆಫರಲ್‌ ಶುಲ್ಕ, ಮುಕ್ತಾಯ ಶುಲ್ಕ, ತೂಕ ನಿರ್ವಹಣೆ ಶುಲ್ಕದಲ್ಲಿ ಏರಿಕೆಯಾಗಲಿದೆ.

ಉಡುಪು, ಬೆಡ್‌ಶೀಟ್ಸ್‌, ಕುಷನ್‌ ಕವರ್‌, ಡಿನ್ನರ್‌ವೇರ್ ವಿಭಾಗದಲ್ಲಿ ರೆಫರಲ್‌ ಶುಲ್ಕ ಕಡಿತಗೊಳ್ಳಲಿದೆ. ವ್ಯಾಪಾರ ಮತ್ತು ವೈಜ್ಞಾನಿಕ ಪರಿಕರಗಳು, ಚಿಮಣಿ, ಲ್ಯಾಪ್‌ಟಾಪ್‌ ಬ್ಯಾಗ್‌ಗಳ ವಿಭಾಗದಲ್ಲಿ ಶುಲ್ಕ ಏರಿಕೆಯಾಗಲಿದೆ ಎಂದು ತಿಳಿಸಿದೆ.

₹1 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳ ಮಾರಾಟಕ್ಕೆ ₹3 ಮುಕ್ತಾಯ ಶುಲ್ಕ ಹೆಚ್ಚಿಸಲಾಗಿದೆ. ತೂಕ ನಿರ್ವಹಣೆಗೆ ₹2 ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ಉತ್ಪನ್ನಗಳ ಸಾಗಣೆ ವೆಚ್ಚದ ಶುಲ್ಕವನ್ನೂ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.

‘ಉತ್ಪನ್ನಗಳ ಮಾರಾಟಕ್ಕೆ ಅಮೆಜಾನ್‌ ಸೂಕ್ತ ವೇದಿಕೆಯಾಗಿದ್ದು, ಮಾರಾಟಗಾರರ ಬೆಳವಣಿಗೆಗೂ ಪೂರಕವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT