ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Amazon layoffs: ಅಮೆಜಾನ್‌ ಅಲೆಕ್ಸಾ ಘಟಕದಲ್ಲಿ ಉದ್ಯೋಗ ಕಡಿತ

Published 18 ನವೆಂಬರ್ 2023, 2:43 IST
Last Updated 18 ನವೆಂಬರ್ 2023, 2:43 IST
ಅಕ್ಷರ ಗಾತ್ರ

ನವದೆಹಲಿ: ಇ–ಕಾಮರ್ಸ್‌ ದಿ‌ಗ್ಗಜ ಅಮೆಜಾನ್‌ ಕಂಪನಿಯು ತನ್ನ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಘಟಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ನೂರಾರು ನೌಕರರನ್ನು ತೆಗೆದುಹಾಕಲಾಗುವುದು ಎಂದು ಹೇಳಲಾಗಿದೆ. ಒಟ್ಟು ಎಷ್ಟು ಮಂದಿಯನ್ನು ಕೆಲಸದಿಂದ ತೆಗೆಯಲಾಗುವುದು ಎಂಬುದನ್ನು ಹೇಳಲು ಕಂಪನಿಯ ವಕ್ತಾರರು ನಿರಾಕರಿಸಿದ್ದಾರೆ.

ಅಲೆಕ್ಸಾ ಘಟಕದಲ್ಲಿರುವ ಉದ್ಯೋಗಿಗಳನ್ನು ಮಾತ್ರ ಕೆಲಸದಿಂದ ತೆಗೆಯಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಎಐ ಬಳಕೆ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೊಸ ತಂತ್ರಜ್ಞಾನ ನೀಡುವುದು ಹಾಗೂ ಹೊಸ ಬದಲಾವಣೆಗಳಿಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಅಲೆಕ್ಸಾ ಮತ್ತು ಫೈರ್ ಟಿವಿಯ ಉಪಾಧ್ಯಕ್ಷ ಡೇನಿಯಲ್ ರೌಶ್ ಮೇಲ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT