ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುರಿತ ಸುಬ್ರಮಣಿಯನ್‌ ಹೇಳಿಕೆಗೆ ಐಎಂಎಫ್‌ ಆಕ್ಷೇಪ

Published 5 ಏಪ್ರಿಲ್ 2024, 14:16 IST
Last Updated 5 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತದ ಆರ್ಥಿಕತೆ ಬೆಳವಣಿಗೆ ಕುರಿತಂತೆ ಐಎಂಎಫ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್‌ ನೀಡಿರುವ ಹೇಳಿಕೆಯು ವೈಯಕ್ತಿಕ ನೆಲೆಗಟ್ಟಿನದ್ದಾಗಿದೆ. ಅದು ಐಎಂಎಫ್‌ನ ಅಧಿಕೃತ ಹೇಳಿಕೆಯಲ್ಲ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವಕ್ತಾರೆ ಜೂಲಿ ಕೊಜಾಕ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಉತ್ತಮ ನೀತಿಗಳನ್ನು ರೂಪಿಸಿದ್ದು, ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇವುಗಳನ್ನು ದುಪ್ಪಟ್ಟುಗೊಳಿಸಿ ಮುಂದುವರಿದರೆ 2047ರ ವರೆಗೆ ಭಾರತದ ಜಿಡಿಪಿಯು ಶೇ 8ರಷ್ಟು ಪ್ರಗತಿ ಕಾಣಲಿದೆ ಎಂದು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯು ಚರ್ಚೆಗೆ ಗ್ರಾಸವಾಗಿತ್ತು.

‘ಸುಬ್ರಮಣಿಯನ್‌ ಅವರು ಐಎಂಎಫ್‌ನಲ್ಲಿ ಭಾರತವನ್ನಷ್ಟೇ ಪ್ರತಿನಿಧಿಸುತ್ತಾರೆ. ಅವರ ಹೇಳಿಕೆಯು ಐಎಂಎಫ್‌ನ ದೃಷ್ಟಿಕೋನಗಳನ್ನು ಪ್ರತಿನಿಧಿಸುವುದಿಲ್ಲ’ ಎಂದು ಜೂಲಿ ಹೇಳಿದ್ದಾರೆ.

ಕಾರ್ಯಕಾರಿ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕರು ಆಯಾ ರಾಷ್ಟ್ರಗಳಷ್ಟೇ ಪ್ರತಿನಿಧಿಸುತ್ತಾರೆ. ಶೀಘ್ರವೇ, ವಿಶ್ವ ಆರ್ಥಿಕತೆಯ ಮುನ್ನೋಟ ಕುರಿತ ಪರಿಷ್ಕೃತ ವರದಿಯನ್ನು ಐಎಂಎಫ್‌ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT