ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ಹರಳು, ಆಭರಣ ರಫ್ತು ಶೇ 21ರಷ್ಟು ವೃದ್ಧಿ

Last Updated 14 ಜುಲೈ 2022, 16:16 IST
ಅಕ್ಷರ ಗಾತ್ರ

ಮುಂಬೈ: ಹರಳು ಮತ್ತು ಆಭರಣ ರಫ್ತು 2021ರ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಶೇಕಡ 21.41ರಷ್ಟು ಹೆಚ್ಚಾಗಿದೆ.

ಮೌಲ್ಯದ ಲೆಕ್ಕದಲ್ಲಿ ₹ 20,835 ಕೋಟಿಯಿಂದ ₹ 25,295 ಕೋಟಿಗೆ ಏರಿಕೆ ಆಗಿದೆ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಪ್ರಕಟಣೆ ತಿಳಿಸಿದೆ. ಚಿನ್ನಾಭರಣ ರಫ್ತು ₹ 4,171 ಕೋಟಿಯಿಂದ ₹ 5,641 ಕೋಟಿಗೆ (ಶೇ 35ರಷ್ಟು) ಏರಿಕೆ ಕಂಡಿದೆ.

2022ರ ಏಪ್ರಿಲ್‌–ಜೂನ್ ಅವಧಿಯಲ್ಲಿ ರಫ್ತು ವಹಿವಾಟು ಶೇ 14.6ರಷ್ಟು ಹೆಚ್ಚಾಗಿ ₹ 77,049 ಕೋಟಿಗೆ ತಲುಪಿದೆ. 2021ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹ 67,231 ಕೋಟಿ ಮೌಲ್ಯದ ರಫ್ತು ಆಗಿತ್ತು.

ಯುಎಇ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಬಳಿಕ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ ಎಂದು ಮಂಡಳಿಯು ಹೇಳಿದೆ.

ಯುಎಇಗೆ 2021ರ ಜೂನ್‌ನಲ್ಲಿ ರಫ್ತು ₹ 8,904 ಕೋಟಿ ಇತ್ತು. 2022ರ ಜೂನ್‌ನಲ್ಲಿ ₹ 9,802 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT