ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಸಾಲ: ಎರಡನೇ ಸ್ಥಾನಕ್ಕೆ ಐಐಎಫ್‌ಎಲ್‌ ಫೈನಾನ್ಸ್‌–ಸೌರಬ್‌ ಕುಮಾರ್

Published 21 ನವೆಂಬರ್ 2023, 12:23 IST
Last Updated 21 ನವೆಂಬರ್ 2023, 12:23 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಸಾಲ ನೀಡುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ಮಣಪ್ಪುರಂ ಫೈನಾನ್ಸ್‌ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಂದಿರುವುದಾಗಿ ಐಐಎಫ್‌ಎಲ್‌ ಫೈನಾನ್ಸ್‌ನ ಚಿನ್ನದ ಸಾಲ ವಹಿವಾಟಿನ ಮುಖ್ಯಸ್ಥ ಸೌರಬ್‌ ಕುಮಾರ್ ತಿಳಿಸಿದ್ದಾರೆ.

ಮಣಪ್ಪುರಂ ಫೈನಾನ್ಸ್‌ನ ಚಿನ್ನದ ಸಾಲದ ನಿರ್ವಹಣಾ ಸಂಪತ್ತು ₹20,809 ಕೋಟಿಯಷ್ಟು ಇದೆ. ಇದಕ್ಕೆ ಹೋಲಿಸಿದರೆ ಐಐಎಫ್‌ಎಲ್‌ ಫೈನಾನ್ಸ್‌ನ ನಿರ್ವಹಣಾ ಸಂಪತ್ತು ಮೌಲ್ಯವು ₹23,690 ಕೋಟಿಯನ್ನು ದಾಟಿದ್ದು ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

₹66,089 ಕೋಟಿ ನಿರ್ವಹಣಾ ಸಂಪತ್ತು ಹೊಂದುವ ಮೂಲಕ ಚಿನ್ನದ ಸಾಲ ನೀಡುವ ಎನ್‌ಬಿಎಫ್‌ಸಿಗಳಲ್ಲಿ ಮುತ್ತೂಟ್ ಫೈನಾನ್ಸ್ ಮೊದಲ ಸ್ಥಾನದಲ್ಲಿದೆ.

ಕಂಪನಿಯು18.6 ಲಕ್ಷ ಗ್ರಾಹಕರನ್ನು ಹೊಂದಿದೆ. ಕಂಪನಿಯ ಒಟ್ಟಾರೆ ನಿರ್ವಹಣಾ ಸಂಪತ್ತು ₹73,066 ಕೋಟಿಯಷ್ಟು ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಸಾಲ ನೀಡಿಕೆಯು ಶೇ 25–27ರವರೆಗೆ ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT