ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜಿಡಿಪಿ ಶೇ 6.3ರಷ್ಟು: ಐಎಂಎಫ್‌ ಅಂದಾಜು

Published 10 ಅಕ್ಟೋಬರ್ 2023, 16:20 IST
Last Updated 10 ಅಕ್ಟೋಬರ್ 2023, 16:20 IST
ಅಕ್ಷರ ಗಾತ್ರ

ನವದೆಹಲಿ : ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 0.2ರಷ್ಟು ಹೆಚ್ಚಿಸಿದ್ದು, ಶೇ 6.3ರಷ್ಟು ಆಗಲಿದೆ ಎಂದು ಹೇಳಿದೆ.

2023–24ರಲ್ಲಿ ಭಾರತದ ಆರ್ಥಿಕತೆಯು ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಎಂದು ಜುಲೈನಲ್ಲಿ ಐಎಂಎಫ್‌ ಅಂದಾಜು ಮಾಡಿತ್ತು.

ಏಪ್ರಿಲ್‌–ಜೂನ್‌ನಲ್ಲಿ ಜನರ ಖರೀದಿ ಸಾಮರ್ಥ್ಯವು ನಿರೀಕ್ಷೆಗಿಂತಲೂ ಹೆಚ್ಚಿನದ್ದಾಗಿದೆ. ಹೀಗಾಗಿ ಜಿಡಿಪಿ ಬೆಳವಣಿಗೆಯ ಅಂದಾಜಿನಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಐಎಂಎಫ್‌ ಈಗ ಮಾಡಿರುವ ಅಂದಾಜು ಆರ್‌ಬಿಐ ಈಚೆಗೆ ಮಾಡಿರುವ ಅಂದಾಜಿಗಿಂತಲೂ (ಶೇ 6.5) ಕಡಿಮೆ ಇದೆ. ಹೀಗಿದ್ದರೂ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಆಗಿರುವ ಚೀನಾದ ಜಿಡಿಪಿ ಬೆಳವಣಿಗೆಗಿಂತಲೂ ಹೆಚ್ಚಿಗೆ ಇರಲಿದೆ ಎಂದು ತಿಳಿಸಿದೆ.

ಚೀನಾದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್‌ ಹೇಳಿದೆ. ಚೀನಾದ ಆಸ್ತಿ ಮಾರುಕಟ್ಟೆಯಲ್ಲಿ ಎದುರಾಗಿರುವ ಬಿಕ್ಕಟ್ಟಿನಿಂದಾಗಿ ಅಲ್ಲಿನ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 0.2ರಷ್ಟು ಕಡಿಮೆ ಮಾಡಿರುವುದಾಗಿ ತಿಳಿಸಿದೆ.

ಕಳೆದ ವಾರ, ವಿಶ್ವಬ್ಯಾಂಕ್‌ ಸಹ ಭಾರತದ ಜಿಡಿಪಿ ಬೆಳವಣಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.3ರಷ್ಟು ಆಗುವ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT