ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾಕ್ಕೆ ಐಎಂಎಫ್‌ ಪ್ಯಾಕೇಜ್‌ ಅನಿವಾರ್ಯ: ನಂದಲಾಲ್ ವೀರಸಿಂಘೆಂ

Published 30 ಡಿಸೆಂಬರ್ 2023, 16:01 IST
Last Updated 30 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ಕೊಲಂಬೊ: ‘ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಆರ್ಥಿಕತೆಯ ಸುಧಾರಣೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪ್ರಕಟಿಸಿರುವ ₹24 ಸಾವಿರ ಕೋಟಿ ನೆರವನ್ನು ಅವಲಂಬಿಸದೆ ಪರ್ಯಾಯ ಮಾರ್ಗವಿಲ್ಲ’ ಎಂದು ಶ್ರೀಲಂಕಾದ ಸೆಂಟ್ರಲ್‌ ಬ್ಯಾಂಕ್‌ನ ಗವರ್ನರ್ ನಂದಲಾಲ್ ವೀರಸಿಂಘೆಂ ಹೇಳಿದ್ದಾರೆ. 

ಐಎಂಎಫ್‌ ಘೋಷಿಸಿರುವ ಪ್ಯಾಕೇಜ್‌ನ ಷರತ್ತುಗಳ ಬಗ್ಗೆ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಆರ್ಥಿಕ ನೆರವಿನ ಪರ್ಯಾಯ ಮಾರ್ಗಗಳ ಬಗ್ಗೆ ಪ್ರಯತ್ನಿಸಿದ್ದರೆ ನಾವೇಕೆ ದಿವಾಳಿಯಾಗುತ್ತಿದ್ದೆವು? ಹಾಗಾಗಿ, ಐಎಂಎಫ್‌ನ ನೆರವು ಸ್ವೀಕರಿಸದೆ ಬೇರೆ ಮಾರ್ಗವಿಲ್ಲ’ ಎಂದು ಹೇಳಿದ್ದಾರೆ. 

ಪ್ಯಾಕೇಜ್‌ನಡಿ ಘೋಷಿಸಿರುವ ಮೊತ್ತದ ಪೈಕಿ ಎರಡನೇ ಹಂತದಲ್ಲಿ ₹2,805 ಕೋಟಿ ಬಿಡುಗಡೆಗೆ ಈ ತಿಂಗಳ ಆರಂಭದಲ್ಲಿ ಐಎಂಎಫ್‌ ಅನುಮೋದನೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT