ಹಿಂದಿನ ವರ್ಷ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಮಕ್ಕಳು ಆಯ್ಕೆಯಾಗಿದ್ದರು. ಈ ವರ್ಷವೂ ಉತ್ತಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದಾರೆ.ವಾಲಿಬಾಲ್, ಕಬಡ್ಡಿ, ಕೊಕ್ಕೊ ಆಟ ಸೇರಿದಂತೆ ಗುಂಡು ಎಸೆತ, ಓಟ, ಎತ್ತರ ಹಾಗೂ ಉದ್ದ ಜಿಗಿತದಲ್ಲಿಯೂ ಬಹುಮಾನವನ್ನು ಪಡೆದಿದ್ದಾರೆ ಎಂದು ವಿಜ್ಞಾನ ಶಿಕ್ಷಕಿ ಎನ್.ಪಿ.ವಿದ್ಯಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಯತ್ನಳ್ಳಿ ಹೇಳಿದರು.