ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚಾ ವಿಧಾನ ಸಿದ್ಧತಾ ತಂತ್ರ

Published 24 ಡಿಸೆಂಬರ್ 2023, 22:36 IST
Last Updated 24 ಡಿಸೆಂಬರ್ 2023, 22:36 IST
ಅಕ್ಷರ ಗಾತ್ರ

ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕ, ಕಳವಳ, ಗೊಂದಲಗಳು ಹೆಚ್ಚಾಗುವುದು ಸಹಜ. ಇವು ಪರೀಕ್ಷೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ನಿರೀಕ್ಷಿತ ಫಲಿತಾಂಶ ತಲುಪಲು ಸಾಧ್ಯವಾಗದಿರಬಹುದು. ಇಂತಹ ವೇಳೆ ಪರೀಕ್ಷಾರ್ಥಿಗಳಿಗೆ ಅತ್ಯಂತ ಆಪ್ತಮಿತ್ರನಾಗುವ ಸಿದ್ಧತಾ ತಂತ್ರ ಎಂದರೆ ಚರ್ಚಾ ವಿಧಾನ.

ಚರ್ಚಾ ವಿಧಾನವು ಕೇವಲ ಪರೀಕ್ಷಾ ಸಿದ್ದತೆಗೆ ಮಾತ್ರವಲ್ಲ. ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾದ ಚಿಂತನೆ, ವಿಮರ್ಶೆ, ಸಮಸ್ಯೆಗೆ ಪರಿಹಾರ, ತಿಳಿವಳಿಕೆ ಅಥವಾ ಸಾಹಿತ್ಯಿಕ ಮೆಚ್ಚುಗೆಯನ್ನು ಹೆಚ್ಚಿಸುವ ಉದ್ದೇಶಗಳನ್ನು ಹೊಂದಿದೆ. ಚರ್ಚೆಯು ಶಿಕ್ಷಕ-ವಿದ್ಯಾರ್ಥಿಗಳ ನಡುವೆ ಅಥವಾ ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಮುಕ್ತವಾದ ವಿಷಯ ಹಾಗೂ ವಿಚಾರಗಳ ವಿನಿಮಯಕ್ಕಾಗಿ ಮೀಸಲಿರುವ ವೇದಿಕೆಯಾಗಿದೆ. ಚರ್ಚೆಯಲ್ಲಿ ಭಾಗವಹಿಸುವವರು ಪ್ರಸ್ತುತಪÀಡಿಸುವ ವಿಭಿನ್ನ ದೃಷ್ಟಿಕೋನಗಳು ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಕಲಿಕಾರ್ಥಿಗಳ ಜ್ಞಾನ, ತಿಳಿವಳಿಕೆ ಮತ್ತು ಅನ್ವಯ ಕೌಶಲ್ಯಗಳು ವೃದ್ದಿಯಾಗುತ್ತವೆ.

ಚರ್ಚಾ ವಿಧಾನ ಯಾಕೆ ಬೇಕೆಂದರೆ,,,,,,,, :

ಜ್ಞಾನದ ಬಲವರ್ಧನೆ: ವಿಷಯವನ್ನು ಇತರರೊಂದಿಗೆ ಚರ್ಚಿಸುವುದರಿಂದ ಕಲಿಕಾಂಶದ ಬಗ್ಗೆ ಇರುವ ಸ್ವಂತ ತಿಳಿವಳಿಕೆಯನ್ನು ಬಲಗೊಳ್ಳುತ್ತದೆ. ಬೇರೆಯವರಿಗೆ ಪರಿಕಲ್ಪನೆಯನ್ನು ವಿವರಿಸಿದಾಗ, ನಿಮ್ಮ ಆಲೋಚನೆಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ ಮತ್ತು ಮಾಹಿತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದಾಗ ಮನಸ್ಸಿನಲ್ಲಿರುವ ಮಾಹಿತಿಯು ಗಟ್ಟಿಗೊಳ್ಳುತ್ತದೆ.

ಸಕ್ರಿಯ ತೊಡಗಿಸಿಕೊಳ್ಳುವಿಕೆ: ಚರ್ಚೆಯಲ್ಲಿ ಭಾಗವಹಿಸುವಿಕೆಯು ನಿಮ್ಮಲ್ಲಿ ಸಕ್ರಿಯತೆಯನ್ನು ಉದ್ದೀಪಿಸುತ್ತದೆ. ಚರ್ಚೆಯಲ್ಲಿ ವಿಭಿನ್ನವಾಗಿ ವಿಷಯವನ್ನು ಪ್ರಸ್ತುಪಡಿಸಬೇಕಾಗಿರುವುದರಿಂದ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಮತ್ತು ಇತರರಿಗಿಂತ ಭಿನ್ನವಾಗಿ ಮಂಡಿಸಲು ತಯಾರಿ ಮಾಡಿಕೊಳ್ಳಲು ಸಕ್ರಿಯವಾಗಿ ತೊಡಗಿಕೊಳ್ಳುವಿರಿ.

ಕಲಿಕಾ ಕೊರತೆಯನ್ನು ನೀಗಿಸುತ್ತದೆ: ಚರ್ಚೆಯಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿನ ಕಲಿಕಾಂಶದ ಕೊರತೆ ನೀಗುತ್ತದೆ. ಜ್ಞಾನದ ಕೊರತೆ ಇರುವ ಕಲಿಕಾಂಶಗಳ ಮೇಲೆ ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಕಂಡುಕೊಳ್ಳಲು ಅವಕಾಶವಿದೆ. ಕಲಿಕಾ ಕೊರತೆಯ ಅಂಶಗಳ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸಲು ಇದು ಸಹಾಯ ಮಾಡುತ್ತದೆ.

ಪರೀಕ್ಷೆಯ ಆತಂಕವನ್ನು ಕಡಿಮೆ ಮಾಡುತ್ತದೆ: ವಿಷಯಾಧಾರಿತವಾಗಿ ಚರ್ಚಿಸುವುದರಿಂದ ಪರೀಕ್ಷೆಗೆ ಸಂಬAಧಿಸಿದ ಕಳವಳ, ಆತಂಕಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಪರೀಕ್ಷಾ ತಯಾರಿಗೆ ಇತರರಿಂದ ಬೆಂಬಲವನ್ನು ಪಡೆಯುವ ಅವಕಾಶವನ್ನು ಚರ್ಚೆಯು ಒದಗಿಸುತ್ತದೆ.

ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ: ಪರೀಕ್ಷೆಯ ವಿಷಯಗಳನ್ನು ಇತರರೊಂದಿಗೆ ಚರ್ಚಿಸುವುದರಿಂದ ನಿಮ್ಮ ಸ್ಮರಣೆಯಲ್ಲಿನ ವಿಷಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಷಯವನ್ನು ಅಥವಾ ಪರಿಕಲ್ಪನೆಯನ್ನು ಹಲವಾರು ಬಾರಿ ಪರಿಶೀಲಿಸಲು ಮತ್ತು ಅಭ್ಯಾಸ ಮಾಡಲು ಇದು ಉತ್ತೇಜಿಸುತ್ತದೆ. ಇದರಿಂದಾಗಿ ಕಲಿತ ಮಾಹಿತಿ ಸ್ಮರಣೆಯಲ್ಲಿ ಉಳಿಯುತ್ತದೆ.

ವಿಭಿನ್ನ ದೃಷ್ಟಿಕೋನಗಳು: ಚರ್ಚೆಯ ಸಮಯದಲ್ಲಿ, ವಿಷಯ/ಪರಿಕಲ್ಪನೆ ಕುರಿತ ವಿಭಿನ್ನ ದೃಷ್ಟಿಕೋನಗಳು ಮತ್ತು ಕಲಿಕಾ ವಿಧಾನಗಳ ಪರಿಚಯವಾಗುತ್ತದೆ. ಇದು ವಿಷಯದ ಬಗ್ಗೆ ತಿಳಿವಳಿಕೆಯನ್ನು ವಿಸ್ತರಿಸುತ್ತದೆ ಮತ್ತು ಇದುವರೆಗೂ ಪರಿಗಣಿಸದಿರುವ ಹೊಸ ಒಳನೋಟಗಳನ್ನು ಒದಗಿಸುತ್ತದೆ.

ಸ್ಪಷ್ಟೀಕರಣ: ಚರ್ಚೆಯಲ್ಲಿ ತೊಡಗಿದಾಗ, ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅಥವಾ ಗೊಂದಲಗಳಿAದ ಕೂಡಿದ ಪ್ರಶ್ನೆಗಳಿಗೆ ಸ್ಪಷ್ಟೀಕರಣ ದೊರೆಯುತ್ತದೆ. ಇದು ಪರೀಕ್ಷಾ ತಯಾರಿಯಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅಭ್ಯಾಸ: ಚರ್ಚೆಯಲ್ಲಿ ಭಾಗವಹಿಸುವುದರಿಂದ ಪರೀಕ್ಷೆಗೆ ಅಮೂಲ್ಯವಾದ ಅಭ್ಯಾಸವನ್ನು ಗಳಿಸುವಿರಿ. ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಲಿಖಿತ ಅಥವಾ ಮೌಖಿಕ ಪರೀಕ್ಷೆಯಲ್ಲಿ ನಿಮ್ಮ ಆಲೋಚನೆಗಳು ಮತ್ತು ಜ್ಞಾನವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಅಗತ್ಯವಿರುವ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಿದ್ದೀರಿ.

ಸಂವಹನ ಕೌಶಲ್ಯವನ್ನು ಗಟ್ಟಿಗೊಳಿಸುತ್ತದೆ: ಚರ್ಚೆಯ ವಿಧಾನವು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ವಿಚಾರಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡುವ ಮೂಲಕ, ನೀವು ಪರಿಣಾಮಕಾರಿಯಾದ ಸಂವಹನಕಾರರಾಗಲು ಹೆಚ್ಚು ಸೂಕ್ತವಾಗಿದೆ. ಇದು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಉಪಯುಕ್ತವಾಗಿದೆ.

ಚರ್ಚಾ ವಿಧಾನದ ಸುಲಭ ಅಳವಡಿಕೆ

ಚರ್ಚಾವಿಧಾನ ಅಳವಡಿಕೆಯ ತುಂಬಾ ಸುಲಭ. ಆದರೆ ಇದಕ್ಕೊಂದಿಷ್ಟು ಪೂರ್ವ ತಯಾರಿ ಅಗತ್ಯ. ಚರ್ಚೆಯಲ್ಲಿ ಭಾಗವಹಿಸುವವರ ಪಟ್ಟಿ. ಸ್ಥಳ, ಸಮಯ ಮುಂತಾದ ಮಾಹಿತಿಯನ್ನು ಸಿದ್ದಪಡಿಸಕೊಳ್ಳಬೇಕು. ಬಹಳ ಮುಖ್ಯವಾಗಿ ಚರ್ಚಿಸಬಹುದಾದ ಚರ್ಚೆಯ ವಿಷಯಗಳ ಪಟ್ಟಿ ಸಿದ್ದಪಡಿಸಿಕೊಳ್ಳಬೇಕು. ಆದಷ್ಟೂ ಕಲಿಕೆಗೆ ಕಠಿಣ ಎನಿಸುವಂತಹ ಕಲಿಕಾಂಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಶಾಲೆಯಲ್ಲಿ ಚರ್ಚಾ ವಿಧಾನ ಸಂಘಟಿಸುವುದಾದರೆ ಶಿಕ್ಷಕರ ಉಪಸ್ಥಿತಿ ಅಗತ್ಯ. ಶಿಕ್ಷಕರು ಚರ್ಚೆಯನ್ನು ಆಯೋಜನೆ ಮಾಡುವುದಾದರೆ ತರಗತಿಯಲ್ಲಿನ ಎಲ್ಲ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ನಾಲ್ಕರಿಂದ ಆರು ವಿದ್ಯಾರ್ಥಿಗಳ ಗುಂಪು ಮಾಡಿ ವಿಷಯಗಳನ್ನು ನೀಡಿ ಚರ್ಚೆಗೆ ಅವಕಾಶ ನೀಡಬಹುದು. ಗುಂಪು ದೊಡ್ಡದಾದರೆ ವಿಷಯದ ಸ್ಪಷ್ಟತೆ ಲಭ್ಯವಾಗುವುದಿಲ್ಲ.
ಚರ್ಚೆಗೆ ಪೂರಕವಾದ ವಿಷಯಗಳನ್ನು ಮುಂಚಿತವಾಗಿ ನೀಡಬೇಕು. ಇದರಿಂದ ವಿಷಯದ ಕುರಿತ ಮಾಹಿತಿಗಳನ್ನು ವಿವಿಧ ಆಯಾಮಗಳಿಂದ ಸಂಗ್ರಹಿಸಿ ಪ್ರಸ್ತುತಪಡಿಸಲು ಸಹಾಯವಾಗುತ್ತದೆ.
ಪ್ರಶ್ನೋತ್ತರ ವೇಳೆಯಲ್ಲಿ ಎಲ್ಲಾ ಕಲಿಕಾರ್ಥಿಗಳು ಭಾಗವಹಿಸಲು ಮುಕ್ತ ಅವಕಾಶ ಒದಗಿಸಬೇಕು. ಇದರಿಂದ ಅವರಲ್ಲಿದ್ದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ.

ಚರ್ಚೆಯ ನಂತರ ಪ್ರತಿಯೊಬ್ಬ ಕಲಿಕಾರ್ಥಿ ಅಲ್ಲಿ ಕಲಿತ ಅಂಶಗಳನ್ನು ದಾಖಲು ಮಾಡಿಕೊಳ್ಳಬೇಕು. ಇದರಿಂದ ಅವರ ಕಲಿಕೆಯ ಕೊರತೆ ನೀಗುತ್ತದೆ ಮತ್ತು ಹೊಸ ಕಲಿಕೆಗೆ ಪೂರಕವಾಗುತ್ತದೆ.
ವಿಜ್ಞಾನ, ಗಣಿತ, ಸಮಾಜವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿನ ಕಲಿಕಾಂಶಗಳನ್ನು ಚರ್ಚೆಗೆ ಬಳಸಿಕೊಳ್ಳವುದರಿಂದ ಕಲಿಕಾರ್ಥಿಗಳಲ್ಲಿ ಆತಂಕ ದೂರವಾಗುತ್ತದೆ. ಚರ್ಚೆಗೆ ಆಯ್ದುಕೊಳ್ಳುವ ವಿಷಯಗಳು ಕಲಿಕಾರ್ಥಿಗಳ ಮಾನಸಿಕ ಮಟ್ಟಕ್ಕನುಗುಣವಾಗಿಬೇಕು.

ಒಟ್ಟಾರೆಯಾಗಿ, ಚರ್ಚಾ ವಿಧಾನವು ಪರೀಕ್ಷೆಯ ತಯಾರಿಗಾಗಿ ಉಪಯುಕ್ತ ತಂತ್ರÀವಾಗಿದೆ, ಏಕೆಂದರೆ ಇದು ವಿಷಯದ ತಿಳಿವಳಿಕೆಯನ್ನು ಬಲಪಡಿಸಲು, ಮಾಹಿತಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಹೊಸ ದೃಷ್ಟಿಕೋನಗಳನ್ನು ಪಡೆಯಲು ಮತ್ತು ಸುಧಾರಣಾ ಕ್ಷೇತ್ರಗಳನ್ನು ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕಲಿಕೆಯನ್ನು ಬಲಪಡಿಸುತ್ತದೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ. ಅಂತೆಯೇ ಜ್ಞಾನದ ಅಂತರವನ್ನು ಗುರುತಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಅವಕಾಶವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT