ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷಣದೊಂದಿಗೆ ನಾಮಪದ

ಇಂಗ್ಲಿಷ್‌ ವ್ಯಾಕರಣ - 46
Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಈಗಾಗಲೇ ನಾಮಪದ ಮತ್ತು ಕ್ರಿಯಾಪದಗಳನ್ನು ವಿಶೇಷಣಗಳನ್ನಾಗಿ ರೂಪಿಸುವುದು ಗೊತ್ತಾಗಿದೆ. ಇದರೊಂದಿಗೆ, ಇನ್ನೊಂದು ವಿಷಯ ವೇನೆಂದರೆ, ಒಂದು ವಿಶೇಷಣದಿಂದ ಇನ್ನೊಂದು ವಿಶೇಷಣವನ್ನು ರೂಪಿಸುವುದು. ಇದಕ್ಕೆ ಸಂಬಂಧಪಟ್ಟಂತೆ, ಯಾವುದೇ ನಿಶ್ಚಿತ ಕ್ರಮ ಅಥವಾ ನಿಯಮವಿಲ್ಲ. ಆದ್ದರಿಂದ ಕೇವಲ ಅಭ್ಯಾಸ ಬಲದಿಂದ ಇವುಗಳನ್ನು ಗುರ್ತಿಸಿಲು ಸಾಧ್ಯ. ಯಾವ ವಿಧದ ವಿಶೇಷಣವು ಯಾವ ನಾಮಪದದ ಮೊದಲಿಗೆ ಬರುತ್ತದೆ ಎಂಬುದು ಭಾಷೆ  ಬಳಕೆಯಿಂದ ತಿಳಿಯಲು ಸಾಧ್ಯ.

ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ(ಟೇಬಲ್‌ ನೋಡಿ).
ಈ ಕೆಳಗಿನ ವಾಕ್ಯಗಳಲ್ಲಿ, ನಾಮಪದಗಳಿಂದ ರೂಪಾಂತರಗೊಂಡ ವಿಶೇಷಣಗಳನ್ನು ಉಪಯೋಗಿಸಲಾಗಿದೆ.
ಗಣಕಯಂತ್ರವು ಖಚಿತವಾದ ಫಲಿತಾಂಶಗಳನ್ನು ನೀಡುತ್ತದೆ. A computer gives accurate results
ಅವನು ನಂಬಲರ್ಹವಾದ ಸೇವಕ
/He is a beliveble servant
ಅದು ಸತ್ತುಹೋದ ಹುಲಿ/It is a dead tiger
ಎಲ್.ಕೆ. ಅಡ್ವಾನಿ ವೃದ್ಧನಾದ ರಾಜಕಾರಣಿ/L.K. Advani is an older politician
ಅವಳು ಪ್ರಖ್ಯಾತ ಗಾಯಕಿ /She is a famous singer
ಈ ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳಿಂದ ರೂಪಿತವಾದ ವಿಶೇಷಣಗಳನ್ನು ಉಪಯೋಗಿಸಲಾಗಿದೆ.
ಸಂಸ್ಕೃತವು ಕಲಿಯಬಹುದಾದ ಭಾಷೆ/Sanskrit is a learnable language.
ಅವು ವಲಸೆಹೋಗುವ ಹಕ್ಕಿಗಳು/They are migratory birds
ರಾಜು ನಿರ್ಲಕ್ಷ್ಯದ ವ್ಯಕ್ತಿ/Raju is a negligent person
ಅದು ನಿರ್ವಹಿಸಬಹುದಾದ ಸಂಖ್ಯೆ/It is a manageable organization/organisation
ಈ ಸೀಸೆ ಸಂಸ್ಕರಿಸಿದ ಕೊಬ್ಬರಿ ಎಣ್ಣೆಯನ್ನು ಒಳಗೊಂಡಿದೆ/The bottle contains refined coconut oil\


ಈ ಕೆಳಗಿನ ವಾಕ್ಯಗಳಲ್ಲಿ ವಿಶೇಷಣಗಳಿಂದ ರೂಪಿತವಾದ ವಿಭಿನ್ನ ರೂಪದ ವಿಶೇಷಣಗಳನ್ನು ಉಪಯೋಗಿಸಲಾಗಿದೆ.
1)ರಾಗಿಣಿಯು ಸಿದ್ಧಉಡುಪನ್ನು ಧರಿಸುತ್ತಾಳೆ/Ragini wears a readymade dress
2)ಆ ಗೂಢಚಾರಿ ರಹಸ್ಯಾತ್ಮಕ ಮಾಹಿತಿಯನ್ನು ಹೊರಗೆಡುವಲಿಲ್ಲ/The spy does not reveal a secretive information
3)ಆಕೆಯು ಮುಚ್ಚುಮರೆಯಿಲ್ಲದ ಮಾತುಗಾತಿ/She is a stright forward speaker
4)ಆ ಅಧಿಕಾರಿಯು ಗೌಪ್ಯವಾದ ವರದಿಯನ್ನು ಸಲ್ಲಿಸುತ್ತಾನೆ/The officer submits confidential report.
5)ಒಥೆಲೋ ಒಂದು ದುಃಖಾಂತ ನಾಟಕ/ Othelo is a tragical drama
6)ಆ ಮಾಲೀಕನು ಒಪ್ಪುವಂತಹ ಕರಾರುಗಳನ್ನು ಪ್ರಕಟಿಸುತ್ತಾನೆ/The owner anounces agreeable terms.
7)ಆ ಸಂಪಾದಕನು ವಿಸ್ತರಿಸಬಹುದಾದ ಲೇಖನವನ್ನು ಒಪ್ಪಿಕೊಳ್ಳುವುದಿಲ್ಲ/The editor does not accept an expandable article
8)ಅಶೋಕನು ಪಾವತಿಸಬಹುದಾದ ಮೂರು ಕಂತುಗಳನ್ನು ಬಾಕಿ ಇಟ್ಟುಕೊಳ್ಳುತ್ತಾನೆ/Ashoka owes three payable instalments

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT