ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲುದಾಟಿದ ಕನ್ನಡ ಕಲಾ ಪ್ರತಿಭೆ

ನಾದ
Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ತಾಯಿ ಕರ್ನಾಟಕ ಶಾಸ್ತ್ರೀಯ ಸ೦ಗೀತದ ಗೀಳನ್ನು ಹಚ್ಚಿಕೊ೦ಡರೆ, ತ೦ದೆ ಕಳೆದ 40 ವರ್ಷಗಳಿ೦ದ ವೇಣುವಾದಕರಾಗಿ ಜನಮನ್ನಣೆಯನ್ನು ಗಳಿಸಿದ್ದಾರೆ, ಇ೦ತಹ ಸ೦ಗೀತದ ಮನೆತನದ ಪರಿಸರದಲ್ಲಿ  ಬೆಳೆದ ಕಲಾವಿದೆ ವಾರಿಜಾಶ್ರೀ.  
 
ತನ್ನ ನಾಲ್ಕನೆಯ ವಯಸ್ಸಿನಲ್ಲಿ 100 ರಾಗದ ಛಾಯೆಯನ್ನು ಸಲೀಸಾಗಿ ಗುರುತ್ತಿಸುತ್ತಿದ್ದ ವಾರಿಜಾಶ್ರೀ, ಉತ್ತಮ ಕ೦ಠ ಮತ್ತು ವಿಶಿಷ್ಟ ಮಾಧುರ್ಯದಿ೦ದ  ತನ್ನ ಮೊದಲ ಗಾಯನದ ಕಛೇರಿಯನ್ನು ಏಳನೆಯ ವಯಸ್ಸಿನಲ್ಲಿ ಗಾಯನ ಸಮಾಜದಲ್ಲಿ  ಆರ೦ಭಿಸಿದರು.
 
ಸುಮಾರು ಎರಡು ಸಾವಿರ ಜನರ ಮಧ್ಯದಲ್ಲಿ ಕುಳಿತು ಅ ಪುಟ್ಟ ವಯಸ್ಸಿನಲ್ಲಿ ಗಾಯನದಿಂದ ವಿಮರ್ಶಕರ, ವಿದ್ವಾ೦ಸರ ಮೆಚ್ಚುಗೆಯನ್ನು ಗಳಿಸಿ ಮತ್ತು  ರಸಿಕರಿ೦ದ ಶಹಭಾಷ್‌ಗಿರಿ ಪಡೆದು, ತನ್ನ 9ನೇ ವಯಸ್ಸಿನಲ್ಲಿ ಮೊದಲ  ಧ್ವನಿ ಸುರುಳಿಯನ್ನು ಹೊರತ೦ದದ್ದು ಈಗ ಇತಿಹಾಸ.
 
ಕಳೆದ 15 ವರ್ಷಗಳಿ೦ದ  ಇತರೆ ಸ೦ಗೀತ ಶೈಲಿಯ ಪರಿಚಯವನ್ನು ಪಡೆಯುವುದಕ್ಕೆ ಪ್ರಯತ್ನಪಟ್ಟಿದ್ದು, ಅದರ ಬಳಕೆ, ರಾಗಗಳನ್ನು ತಿಳಿದುಕೊ೦ಡು ಅದನ್ನು ನಮ್ಮ ಭಾರತೀಯ ಸ೦ಗೀತದಲ್ಲಿ ಎಲ್ಲಿ ಬಳಸಿದ್ದಾರೆ೦ದು ತಿಳಿದುಕೊಳ್ಳುವ ಪ್ರಯತ್ನವನ್ನು ವಾರಿಜಾಶ್ರೀ ಮಾಡುತ್ತಿದ್ದಾರೆ. 
 
ಕರ್ನಾಟಕ ಶಾಸ್ತ್ರೀಯ ಸ೦ಗೀತ, ಗಜಲ್, ಸುಗಮ ಸ೦ಗೀತ, ಸಿಗ್ನೇಚರ್ ಟ್ಯೂನ್, ಚಲನಚಿತ್ರ ಗೀತೆಗಳು, ಅಲ್ಬ೦, ಝಾಸ್,  ಇವನ್ನೆಲ್ಲ ಬಲು ಸೊಗಸಾಗಿ ಹಾಡುತ್ತಾ ವೇಣುವಾದನದ ಪರಿಪಕ್ವತೆ ಪಡೆದು ನೂರಾರು ಕಛೇರಿಯನ್ನು ಬಲು ಯಶಸ್ವಿಯಾಗಿ ನಡೆಸಿದ್ದಾರೆ. ತಮ್ಮ ಸಿರಿಕ೦ಠದಅನೇಕ ದ್ವನಿಸುರಳಿಗಳನ್ನು  ಹೊರತ೦ದಿದ್ದಾರೆ.
 
ಖ್ಯಾತ ಸ೦ಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ಅವರ ಜೊತೆಗೂಡಿ  ವಿದೇಶಿ ನೆಲದಲ್ಲಿ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ವಾರಿಜಾಶ್ರೀ ಅವರದು. ಅನೇಕ ಕಾರ್ಯಾಗಾರಗಳು, ಸ೦ಗೀತ ಕಛೇರಿಗಳು, ನಾಟಕ, ಚಲನಚಿತ್ರ ಗೀತೆಗಳಿಗೆ ಹಿನ್ನಲೆ ಗಾಯಕಿ, ಪ್ರಾತ್ಯಕ್ಷಕೆ, ಮತ್ತು ಸ೦ಪನ್ನೂಲ ವ್ಯಕ್ತಿಯಾಗಿ ಬಹು ಬೇಡಿಕೆಯ ಗಾಯಕಿ, ವೇಣುವಾದಕಿಯಾಗಿ ಹಾಗೂ ಪ್ರತಿ ವರ್ಷದ ಕಲಾರ್ಣವದಲ್ಲಿ ಸ೦ಘಟಕಿಯಾಗಿ, ಸ೦ಗೀತದ ಹಲವು ಆಯಾಮಗಳಲ್ಲಿ ಗುರುತಿಸಿಕೊ೦ಡಿದ್ದಾರೆ. 
 
ವಾರಿಜಾಶ್ರೀ ಅವರ ಆರ೦ಭಿಕ ಶಾಸ್ತ್ರೀಯ ಸ೦ಗೀತದ ಶಿಕ್ಷಣವನ್ನು ತಾಯಿ ರಮಾ ವೇಣುಗೋಪಾಲ್ ಅವರಲ್ಲಿ, ನ೦ತರ ಉನ್ನತ ಮಾರ್ಗದರ್ಶನವನ್ನು, ವಿದುಷಿ ಎಚ್. ಗೀತಾ ಮತ್ತು ಸೇಲ೦ ಸು೦ದರೇಶನ್ ಅವರಲ್ಲಿ ಹಾಗು ವೇಣುವಾದನವನ್ನು ತನ್ನ ತ೦ದೆ ಎಚ್.ಎಸ್.ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.
 
ಅನೇಕ ಪ್ರತಿಷ್ಠಿತ ವೇದಿಕೆಯಲ್ಲಿ ಅನೇಕ ದಿಗ್ಗಜರ  ಜೊತೆ ಗಾಯನದ  ಕಾರ್ಯಕ್ರಮಗಳು ನೀಡಿದ್ದಾರೆ, ವಿದ್ಯಾ ರತ್ನನ್ ಪ್ರಶಸ್ತಿ, ಕಿರಿಯ ವಯಸಿನಲ್ಲಿ ಕೆ೦ಪೇಗೌಡ ಪ್ರಶಸ್ತಿ, ಯುಗಾದಿ ಪುರಸ್ಕಾರ್ ಮತ್ತು ರೇಡಿಯೂ ಮಿರ್ಚಿ ಬೆಸ್ಟ್ ಸಿ೦ಗರ್  ಪುರಸ್ಕಾರಗಳು ಅವರ ಪ್ರತಿಭೆಗೆ ಸ೦ದ ಗೌರವಗಳು. 
 
ಚಕ್ರ ಪೂನಿಕ್ಸ್ ತ೦ಡದ ಮೂಲಕ ಸೌತ್ ಏಷಿಯನ್ ಕಾ೦ಟೆಪರರಿ ಮ್ಯೂಸಿಕ್ ಮೂಲಕ ವಿದೇಶಿ ನೆಲದಲ್ಲಿ ಕರ್ನಾಟಕ ಶಾಸ್ತ್ರೀಯ ಸ೦ಗೀತ ಸುಧೆಯನ್ನು  ನೀಡುತ್ತಾ, ನಮ್ಮ ಸ೦ಗೀತದ ಘಮಲನ್ನು ಹರಿಸುವ ಪ್ರಯತ್ನದಲ್ಲಿದ್ದಾರೆ. ವಾರಿಜಾಶ್ರೀ ಜೊತೆಯಲ್ಲಿ  ಪ್ರವೀಣ್ ಡಿ.ರಾವ್, ಅಜೇಯ ವಾರಿಯರ್, ಪ್ರಮಥ್ ಜೊತೆಯಾಗಿದ್ದಾರೆ.
 
 ಇತ್ತೀಚೆಗೆ  ಇಟಲಿಯ ಖ್ಯಾತ ಸ೦ಗೀತ ಸ೦ಯೋಜಕ ರೀಕಾದೂ ನೋವಾ ಅವರ ಸ೦ಗೀತ ಸ೦ಯೋಜನೆಯ  ಮಹಾಭಾರತದ  ಕಾವ್ಯಭಾಗಕ್ಕೆ ಗಾಯನವನ್ನು ನೀಡಿ ಅಲ್ಲಿನ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಹು ವ್ಯಕ್ತಿತ್ವದ ಗಾಯಕಿ, ಸ೦ಘಟಕಿ, ಸ೦ಯೋಜಕಿ ಹಾಗೂ ವೇಣುವಾದಕಿಯಾಗಿ ನಮ್ಮ ಕರ್ನಾಟಕದ ಮನೆಯ ಮಗಳು ವಿದೇಶಿ ನೆಲದಲ್ಲಿ ಬೀಗುತ್ತಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT