ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಲ್ಲಿ ಅರಳಿದ ಕಲಾಕೃತಿ

ಹವ್ಯಾಸದ ಹಾದಿ
Last Updated 11 ಮೇ 2016, 19:44 IST
ಅಕ್ಷರ ಗಾತ್ರ

ಇಬ್ಬರು ಮಕ್ಕಳ ಆಟಪಾಠಗಳ ನಡುವೆ  ಸಮಯ ಓಡುತ್ತಿದ್ದರೂ, ಅದರ ನಡುವೆಯೂ ಏನಾದರೂ ಕ್ರಿಯಾಶೀಲವಾದಂಥ ಕೆಲಸ ಮಾಡಬೇಕು ಎಂಬ ಹಂಬಲ ಭಾರತಿ ಅವರಲ್ಲಿ ಸದಾ ಇಣುಕುತ್ತಲೇ ಇತ್ತು.

ಮುಂಚಿನಿಂದಲೂ ಕುಸುರಿ ಕಲೆ ಎಂದರೆ ಇಷ್ಟವಿದ್ದ ಭಾರತಿ ಅವರಿಗೆ ಆ ದಾರಿ ಹುಡುಕಿಕೊಳ್ಳುವುದು ಕಷ್ಟವೇನೂ ಅನ್ನಿಸಲಿಲ್ಲ. ಸಮಯವನ್ನು ಒಳ್ಳೆ ರೀತಿ ಬಳಸಿಕೊಳ್ಳುವಂತೆ ಪ್ರೇರೇಪಿಸುವ ಹಲವು ಹಾದಿಗಳು ಅವರ ಮುಂದಿದ್ದವು. ಇವುಗಳಲ್ಲಿ ಅವರನ್ನು ಸೆಳೆದಿದ್ದು ಬಳಕೆಗೆ ಬಾರದ ವಸ್ತುಗಳಿಂದ ಉಡುಗೊರೆ ನೀಡುವ ಸಾಮಗ್ರಿಗಳನ್ನು ವಿನ್ಯಾಸಗೊಳಿಸುವ ಕಲೆ.

ತ್ಯಾಜ್ಯ ಎಂದು ಎಸೆದ ವಸ್ತುಗಳಲ್ಲಿ ಸೌಂದರ್ಯ ಅರಸುವ ಕೆಲಸ ಅವರಿಗೆ ಖುಷಿಯನ್ನೂ ಕೊಟ್ಟಿತ್ತು.  ಪ್ರತಿದಿನ ತಮ್ಮ ಎರಡು ಮಕ್ಕಳ  ಆರೈಕೆಯೊಂದಿಗೆ ಈ ಕಲೆಯ ಹಿಡಿತವನ್ನೂ ಬಿಡದೆ ಮುಂದುವರೆಸಿದರು. ಅದರ ಬಗ್ಗೆ ಭಾರತಿ ಹೇಳಿಕೊಳ್ಳುವುದು ಹೀಗೆ...

2009ರಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದೆ. ಇಬ್ಬರು ಗಂಡು ಮಕ್ಕಳಿದ್ದಾರೆ.  ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಎರಡು ವರ್ಷ ಕಳೆದೇ ಹೋಗಿತ್ತು. ಆಗಾಗ ನನಗೆ ನಾನೇ ಸಮಯ ಮೀಸಲಿಡಬೇಕು ಅನ್ನಿಸುತ್ತಿತ್ತು. ಆಗ ವಿನ್ಯಾಸ ಹವ್ಯಾಸ ನನ್ನ ಜೊತೆ ಸೇರಿತು.

ಮಕ್ಕಳ ಹುಟ್ಟುಹಬ್ಬಕ್ಕೆ ಇವರೇ ನೆನಪುಗಳನ್ನು ಮರುಕಳಿಸುವಂಥ ಫೋಟೊ ಆಲ್ಬಂ ಮಾಡಿದೆ. ಅದನ್ನು ನೋಡಿದ ಕುಟುಂಬ ಸದಸ್ಯರು ಹಾಗೂ ಗೆಳೆಯರು ಅಚ್ಚರಿ ಪಟ್ಟು ಈ ಕಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.

ಈ ಪ್ರೋತ್ಸಾಹದ ನುಡಿ ಇನ್ನಷ್ಟು ಪ್ರೇರಣೆ ನೀಡಿತು. ಹೊಸತನ್ನು ಮಾಡಿದಾಗಲೆಲ್ಲಾ ಅವುಗಳ ಚಿತ್ರವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಲು ಆರಂಭಿಸಿದೆ. ಅವು ಗಮನ ಸೆಳೆಯಲು ಹೆಚ್ಚು ದಿನಗಳು ಹಿಡಿಯಲಿಲ್ಲ. ಪ್ರತಿ ಚಿತ್ರಗಳಿಗೂ ಅದ್ಭುತ ಪ್ರತಿಕ್ರಿಯೆಗಳು ಬರಲಾರಂಭಿಸಿತು.  ಇವು ಇನ್ನಷ್ಟು ಪ್ರೋತ್ಸಾಹ ನೀಡಿದವು.

ಉಡುಗೊರೆಗಳಷ್ಟೇ ಅಲ್ಲ, ಹಲವು ಬಗೆಯ ಪೇಂಟಿಂಗ್‌ ಮಾಡುವುದನ್ನೂ ರೂಢಿಸಿಕೊಂಡಿದ್ದೇನೆ. ತಂಜಾವೂರ್, ಭಿತ್ತಿಚಿತ್ರ, ಬಟ್ಟೆಯ ಮೇಲೆ ವರ್ಣ ಚಿತ್ರಗಳನ್ನು ಬಿಡಿಸುತ್ತೇನೆ. ಚಿತ್ರಕಲೆಗಿಂತಲೂ ತ್ಯಾಜ್ಯದಿಂದ ಉಡುಗೊರೆ ವಸ್ತುಗಳನ್ನು ತಯಾರಿಸುವುದು ಮೆಚ್ಚಿನ ಕೆಲಸ. ಒಣ ಕಸದಿಂದ ವಿವಿಧ ನಮೂನೆಯ ಸಾಮಗ್ರಿಗಳನ್ನು ತಯಾರಿಸುವೆ.

ಫೋಟೊ ಆಲ್ಬಂ, ಸ್ಕ್ರಾಪ್ ಬುಕ್, ನೇಮ್‌ ಪ್ಲೇಟ್‌, ಫೋಟೊ ಫ್ರೇಂ ಮಾಡುವುದನ್ನು ಕಲಿತರು. ಕಡಿಮೆ ತೂಕದ ಪ್ಲೈವುಡ್‌ಗಳಿಂದ ಸುಂದರ ಫೋಟೊ ಫ್ರೇಂ, ನೇಮ್‌ಪ್ಲೇಟ್‌ಗಳನ್ನು ಮಾಡಿರುವೆ. ಇದಕ್ಕಾಗಿ ಕಾರ್ಪೆಂಟರ್‌ ಒಬ್ಬರನ್ನು ನೇಮಿಸಿಕೊಳ್ಳಬೇಕಾಯಿತು.

ನಮ್ಮಲ್ಲಿ ಸಂದರ್ಭಗಳಿಗೆ ತಕ್ಕಂತೆ ಉಡುಗೊರೆ ವಸ್ತುಗಳು ಲಭ್ಯ. ಹುಟ್ಟಿದ ಹಬ್ಬ, ವಾರ್ಷಿಕೋತ್ಸವ, ಗೃಹಪ್ರವೇಶ ಹೀಗೆ ಸಂದರ್ಭಗಳಾನುಸಾರ, ಗ್ರಾಹಕರ ಅವಶ್ಯಕತೆಗಳಿಗೆ  ವಿನ್ಯಾಸ ಮಾಡಿಕೊಡುತ್ತೇವೆ.

ತ್ಯಾಜ್ಯ ವಸ್ತುಗಳಿಂದ ಉಡುಗೊರೆ ವಸ್ತುಗಳನ್ನು ಸಿದ್ಧಪಡಿಸುವುದು ದೊಡ್ಡ ಸವಾಲು. ಅದಕ್ಕಾಗಿ ಬಣ್ಣ ಸಹಾಯ ಬೇಕಾಗುತ್ತದೆ. ಭಿನ್ನ ಶೇಡ್‌ ಹಾಗೂ ಟೆಕ್ಸ್‌ಚರ್‌ಗಳೊಂದಿಗೆ­ ಬಣ್ಣಗಳನ್ನು ಹದವಾಗಿ ಬೆರೆಸಿ ಸುಂದರ ಉಡುಗೊರೆ ಸಿದ್ಧಗೊಳಿಸಲಾಗುವುದು.

ಕಲೆಯ ಜೀವ
ಮಕ್ಕಳು ರಾತ್ರಿ ಮಲಗಿದ ನಂತರದ 2 ಗಂಟೆಯನ್ನು ಪೇಂಟಿಂಗ್ ಮತ್ತು ಕ್ರಾಫ್ಟ್‌ಗೆ ಮೀಸಲಿಟ್ಟಿದ್ದಾರೆ. ಟಿಷ್ಯೂ ರೋಲ್‌, ಪ್ಲಾಸ್ಟಿಕ್ ಬಾಟಲಿ ಮತ್ತು ಇನ್ನಿತರ ತ್ಯಾಜ್ಯಗಳಿಗೆ ಕಲೆಯ ಮೂಲಕ ಜೀವ ತುಂಬುವ ಹವ್ಯಾಸ ನೆಚ್ಚಿಕೊಂಡಿದ್ದಾರೆ.

*
ಅಂಗಡಿಗಳಲ್ಲಿ ಸಿಗುವ ರೆಡಿಮೇಡ್ ಉಡುಗೊರೆಗಳನ್ನು ಖರೀದಿಸುವುದಕ್ಕೂ,  ನಾವೇ ಇಷ್ಟಪಟ್ಟ  ಉಡುಗೊರೆಗಳನ್ನು ರೂಪಿಸಿ ನೀಡುವುದಕ್ಕೂ ವ್ಯತ್ಯಾಸವಿದೆ.
-ಭಾರತಿ ಗೋಯೆಲ್, ವಿಭಾಗದ ಹಿರಿಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT