ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರೆಯರ ಜೊತೆ ನಾಯಿಗಳು

Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಉದ್ದನೆಯ ರ್‌್್ಯಾಂಪ್‌ ಇದ್ದ ಸಭಾಂಗಣವನ್ನು ನೀಲಿ ಬಣ್ಣದ ಛಾಯೆ ಆವರಿಸಿಕೊಂಡಿತ್ತು. ಎಲ್ಲರೂ ಫ್ಯಾಷನ್‌ ಷೋ ಯಾವಾಗ ಶುರುವಾಗಲಿದೆಯೋ ಎಂದು ಕಾತರದಿಂದ ಕಾಯುತ್ತಿದ್ದರು. ಅಷ್ಟರಲ್ಲಿ ಒಬ್ಬ ವ್ಯಕ್ತಿ ತನ್ನ ಏರು ಧ್ವನಿಯಲ್ಲಿ ‘ಇನ್ನೇನು ಷೋ ಶುರುವಾಗಲಿದೆ’ ಎಂದರು. ಫ್ಯಾಷನ್‌ಪ್ರಿಯರೆಲ್ಲಾ ಕಣ್ಣರಳಿಸಿ ರ್‍್ಯಾಂಪ್‌ ಕಡೆ ನೋಡತೊಡಗಿದರು. ಮರುಕ್ಷಣ ಪ್ರೇಕ್ಷಕರ ಸಾಲಿನಿಂದ ‘ವ್ಹಾವ್’ ಎನ್ನುವ ಉದ್ಗಾರ.

ಈ ಷೋ ಅಷ್ಟೊಂದು ಕುತೂಹಲ ಮೂಡಿಸಲು ವಿಶೇಷ ಕಾರಣವೊಂದಿತ್ತು. ಮಾಮೂಲಿಗಿಂತ ಭಿನ್ನ ಫ್ಯಾಷನ್ ಷೋ ಇದು. ಅಂದರೆ, ಇಲ್ಲಿ ಚೆಂದುಳ್ಳಿ ಚೆಲುವೆಯರ ಜೊತೆಗೆ ಹೈಬ್ರೀಡ್‌ ತಳಿಯ ನಾಯಿಗಳೂ ಜನರನ್ನು ರಂಜಿಸಲು ಬಂದಿದ್ದವು. ಪ್ರಾಣಿಪ್ರಿಯರೂ, ನಟರೂ ಆದ ಅಕ್ಷಯ್‌ ಕುಮಾರ್‌ ಹಾಗೂ ತಮನ್ನಾ ಭಾಟಿಯಾ ತಮ್ಮಿಷ್ಟದ ನಾಯಿಯನ್ನು ಹಿಡಿದುಕೊಂಡು ಕ್ಯಾಟ್‌ವಾಕ್‌ ಮಾಡಿ ಷೋಗೆ ಮತ್ತಷ್ಟು ಕಳೆಕಟ್ಟಲಿದ್ದಾರೆ ಎಂಬ ವಿಚಾರ ತಿಳಿದಿದ್ದರಿಂದ ಷೋ ನೋಡಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದರು.

ನಾಯಿಗಳ ರ್‍್ಯಾಂಪಾಟ
ಇಷ್ಟುದ್ದದ ನಾಲಗೆಯನ್ನು ಹೊರಚಾಚಿ, ಅತ್ತಿತ್ತ ಕಣ್ಣರಳಿಸುತ್ತಾ ರ್‌್್ಯಾಂಪ್‌ ಮೇಲೆ ನಡೆದಾಡಿದ ಡಾಗ್‌ಗಳನ್ನು ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದು ಕೇಕೆ ಹಾಕಿದರು. ಫ್ಯಾಷನ್ ಲೋಕದ ಸುಂದರಿಯರು ಲ್ಯಾಬ್ರಿಡಾರ್‌, ಗೋಲ್ಡನ್‌ ರಿಟ್ರೈವರ್‌ ಮುಂತಾದ ಜಾತಿಯ ನಾಯಿಗಳ ಜೊತೆ ಕ್ಯಾಟ್‌ವಾಕ್‌ ಮಾಡಿದ ನಡಿಗೆಯ ಲಾಲಿತ್ಯ ಸೊಗಸಾಗಿತ್ತು.

ರೂಪದರ್ಶಿಯೊಬ್ಬಳು ಹಿಡಿದುಕೊಂಡು ಬಂದ ನಾಯಿ ರ್‍್ಯಾಂಪ್‌ನ ಮೇಲೆ ಹೆಜ್ಜೆ ಹಾಕುವ ಬದಲು ಪ್ರೇಕ್ಷಕರ ಕಡೆಗೆ ಬರಲು ಹವಣಿಸುತ್ತಿದ್ದುದು ನೋಡಲು ಮಜವಾಗಿತ್ತು. ಆಗ ಆಕೆ ಆ ನಾಯಿಯನ್ನು ಮಗುವಿನಂತೆ ಎತ್ತಿಕೊಂಡು ಹೆಜ್ಜೆ ಹಾಕಿದರು. ಕಪ್ಪು ಬಣ್ಣದ ಉಡುಗೆ ತೊಟ್ಟ ಏಳು ನೀರೆಯರು ರ್‍್ಯಾಂಪ್‌ ಮೇಲೆ ವಯ್ಯಾರದಿಂದ ನಡೆದು, ಫ್ಯಾಷನ್‌ಪ್ರಿಯರ ಮೆಚ್ಚುಗೆಗೆ ಪಾತ್ರರಾದರು. 
ತಮನ್ನಾ ಮೋಡಿ

ಈ ಷೋನ ಪ್ರಮುಖ ಆಕರ್ಷಣೆಯಾಗಿ ಮೊದಲಿಗೆ ನಟಿ ತಮನ್ನಾ ಭಾಟಿಯಾ ಕೇಸರಿ ಹಾಗೂ ಕಪ್ಪು ಉಡುಪುನಲ್ಲಿ ನಾಯಿಯ ಜೊತೆ ರ್‍್ಯಾಂಪ್‌ನಲ್ಲಿ ಬಳುಕುತ್ತ ಹೆಜ್ಜೆ ಹಾಕಿದರು. ಫಾರ್ಮಲ್‌ ಉಡುಪು ಧರಿಸಿದ್ದ ನಟ ಅಕ್ಷಯ್‌ಕುಮಾರ್‌ ಇವರ ಜೊತೆಗೆ ರ್‌್ಯಾಂಪ್‌ ಮೇಲೆ ಮಿಂಚು ಹರಿಸಿದರು. ‘ಎಂಟರ್‌ಟೇನ್‌ಮೆಂಟ್‌’ಚಿತ್ರದಲ್ಲಿ ನಟಿಸಿದ ಗೋಲ್ಡನ್‌ ರಿಟ್ರೈವರ್‌ ಜಾತಿಯ ನಾಯಿ ಜೊತೆ ಹೆಜ್ಜೆ ಹಾಕಿದರು. ಆ ನಂತರ ಮಾತನಾಡಿದ ತಮನ್ನಾ, ‘ಈ ಫ್ಯಾಷನ್ ಷೋನಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವಾಯಿತು. ಹಲವು ಸಮಯದ ನಂತರ ಇಂತಹ ಷೋನಲ್ಲಿ ಹೆಜ್ಜೆ ಹಾಕಿದೆ’ ಎಂದರು. ಆನಂತರ ಅಕ್ಷಯ್‌ಕುಮಾರ್‌ ಮಾತನಾಡಿ, ‘ನಾಯಿಗಳು ಸ್ನೇಹಜೀವಿಗಳು. ಎಲ್ಲರೂ ನಾಯಿಗಳನ್ನು ದತ್ತು ತೆಗೆದುಕೊಂಡು ಸಾಕಬೇಕು. ನಾಯಿಗಳಿಂದ ಮಾನವನಿಗೆ ಯಾವುದೇ ತೊಂದರೆ ಇಲ್ಲ ಎಂದು ಸಂಶೋಧನೆಯಿಂದ ಸಾಬೀತಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT