ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕೊಟ್ಟ ನೆಚ್ಚಿನ ನಗರ

ಬೆಂಗಳೂರು ಅಂದ್ರೆ ನಂಗಿಷ್ಟ
Last Updated 22 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು ನನ್ನ ಅಚ್ಚುಮೆಚ್ಚಿನ ನಗರ. ನಲವತ್ತೆರಡು ವರ್ಷಗಳಿಂದ ಈ ನಗರವನ್ನು ನೋಡುತ್ತಿದ್ದೇನೆ.  ಜನಸಂಖ್ಯೆ ಹೆಚ್ಚಾಗಿ, ಮರಗಿಡಗಳು ಕಡಿಮೆಯಾಗಿವೆ. ಕಾಂಕ್ರೀಟ್ ಕಾಡಾಗಿದೆ. ವಾಹನಗಳು, ಹೆಚ್ಚಾಗಿ ಸಂಚಾರ ದಟ್ಟಣೆ ಬಹುದೊಡ್ಡ ಸಮಸ್ಯೆಯಾಗಿದೆ. ಜಲ, ವಾಯು, ಶಬ್ದಮಾಲಿನ್ಯ ಹೆಚ್ಚಾಗುತ್ತಿವೆ.

ಮಹಾನಗರವಾದರೂ ಇಲ್ಲಿನ ಜನರಲ್ಲಿ ಇನ್ನೂ ಮಾನವೀಯತೆ ಉಳಿದಿದೆ. ಅಕ್ಕಪಕ್ಕದ ಜನರ ನೋವಿಗೆ ಸ್ಪಂದಿಸುವ ಸಹೃದಯಿಗಳಿದ್ದಾರೆ. ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು  ಇನ್ನೂ ಉಳಿದುಕೊಂಡಿವೆ.

ಇಲ್ಲಿ ತಪ್ಪದೇ ನಡೆಯುವ ಕರಗ, ಕಡಲೆಕಾಯಿ ಪರಿಷೆ, ಊರು ಹಬ್ಬ, ಜಾತ್ರೆ, ಗಣೇಶೋತ್ಸವ, ರಾಜ್ಯೋತ್ಸವ, ರಾಮನವಮಿ ಸಂಗೀತೋತ್ಸವ, ಹಾಸ್ಯೋತ್ಸವ... ಹೀಗೆ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಜನರು ಒಂದೆಡೆ ಸೇರಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದ್ದಾರೆ.

ಈ ನಗರ ನನಗೆ ಬದುಕು ಕೊಟ್ಟಿದೆ. ಇಲ್ಲಿನ ಹವಾಮಾನ ಬೇರೆ ನಗರಗಳಲ್ಲಿ ಕಾಣವುದು ಕಷ್ಟ.  ಇಲ್ಲಿನ ಜನರು ಸ್ನೇಹ ಪ್ರಿಯರು. ಯಾರೇ ಅಪರಿಚಿತರು  ವಿಳಾಸ ಕೇಳಿದರೆ ತಾಳ್ಮೆಯಿಂದ ಉತ್ತರಿಸುವ ಸಾಧ್ಯವಾದರೆ ಆ ವಿಳಾಸಕ್ಕೆ ತಲುಪಿಸುವವರೂ ಇದ್ದಾರೆ.

ಈ ನಗರ ಉದ್ಯೋಗ ಬಯಸಿ ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಂಡು ಉಪಚರಿಸಿದೆ. ಸತ್ಕರಿಸಿದೆ. ಬಂದವರಾರು ಹೋಗುವ ಮನಸ್ಸು ಮಾಡದಷ್ಟು  ಪ್ರಿಯವಾಗುತ್ತದೆ ನಗರ.

ಇಡೀ ಜಗತ್ತಿಗೆ ಬೆಂಗಳೂರು ಆಕರ್ಷಣೆ ಕೇಂದ್ರ. ನನಗೂ ಈ ನಗರದೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT