ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರುಳಿ ಕಾಗದದ ಕಲೆಯ ಸೂಜಿಗಲ್ಲು

ಹವ್ಯಾಸ
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಎಲ್ಲರೂ ಹಳೇ ಕಾಗದ, ಮ್ಯಾಗಜಿನ್‌ಗಳನ್ನು ಸಾಮಾನ್ಯವಾಗಿ ರದ್ದಿಗೆ ಹಾಕಿ  ಸ್ವಲ್ಪ ಹಣ  ಪಡೆಯುತ್ತಾರೆ. ಆದರೆ ಹೀಗೆ ರದ್ದಿ ಸೇರುವ ಹಳೇ ಪೇಪರ್‌ ಹಾಗೂ ಬಣ್ಣ ಬಣ್ಣದ ಮ್ಯಾಗಜಿನ್‌ ಪೇಪರ್‌ ಬಳಸಿ ಅಲಂಕಾರಿಕ ವಸ್ತುಗಳು ಹಾಗೂ ಫ್ಯಾನ್ಸಿ ಆಭರಣಗಳನ್ನು ತಯಾರಿಸುವವರೂ ಇದ್ದಾರೆ. ಅದರಲ್ಲೂ ಕಾಗದಗಳನ್ನು ಸಣ್ಣ ಸಣ್ಣ ಎಳೆಗಳಾಗಿ ಕತ್ತಿರಿಸಿ, ಅವುಗಳನ್ನು ಸುರಳಿ ಆಕಾರದಲ್ಲಿ ಸುತ್ತಿ ಆಕರ್ಷಕವಾಗಿ ವಸ್ತುಗಳನ್ನು ತಯಾರಿಸುವ ಮಹಿಳೆ ಇಲ್ಲಿದ್ದಾರೆ.

ಬಣ್ಣ ಬಣ್ಣದ ಮ್ಯಾಗಜಿನ್‌ ಕಾಗದಗಳನ್ನು ತೀರಾ ಸಣ್ಣದಾಗಿ ಕತ್ತರಿಸಿ ಸುರಳಿ ಸುತ್ತುವ ಮೂಲಕ ಫ್ಯಾನ್ಸಿ ಆಭರಣಗಳು, ಫ್ರಿಡ್ಜ್‌ ಮ್ಯಾಗನೆಟ್‌, ಗೋಡೆಗೆ ನೇತುಹಾಕುವ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು ವಿ. ಸ್ವರ್ಣಾ ಅವರ ಹವ್ಯಾಸ.

ನಗರದ ನಿವಾಸಿ ಸ್ವರ್ಣಾ ಅವರು ಯೂಟ್ಯೂಬ್‌ ಹಾಗೂ ಅಂತರ್ಜಾಲದಲ್ಲಿ ವಿಡಿಯೊಗಳನ್ನು ನೋಡುವ ಮೂಲಕ ಈ ಕಾಗದಗಳನ್ನು ಸುರಳಿಯಾಗಿ ಸುತ್ತಿ ವಸ್ತುಗಳನ್ನು ತಯಾರಿಸುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದಾರೆ. ಅದಕ್ಕಾಗಿ ಯಾವ ತರಬೇತಿಯನ್ನೂ ಪಡೆದುಕೊಂಡಿಲ್ಲ. ಕೇವಲ ಹವ್ಯಾಸವಾಗಿ ಪ್ರಾರಂಭವಾದ ಈ ಕಲೆ ಈಗ ಅವರ ಫುಲ್‌ ಟೈಮ್ ಕೆಲಸವಾಗಿದೆ.

‘ನನಗೆ ಚಿಕ್ಕಂದಿನಿಂದಲೂ ‘ಆರ್ಟ್‌ ಅಂಡ್‌ ಕ್ರಾಫ್ಟ್‌’ನಲ್ಲಿ ತುಂಬಾ ಆಸಕ್ತಿ. ಹೀಗಾಗಿ ಆಗಿನಿಂದಲೇ ಹಲವಾರು ರೀತಿಯ ಅಲಂಕಾರಿಕ ವಸ್ತುಗಳು ಹಾಗೂ ಕುಸುರಿ ಕೆಲಸಗಳನ್ನು ಮಾಡುತ್ತಿದ್ದೆ. ಇದರಲ್ಲಿ ನನ್ನದೇ ಆದ ತಂತ್ರವನ್ನು ಪ್ರಯೋಗ ಮಾಡಿ ನಾನಾ ರೀತಿಯ ಸಂಶೋಧನೆ ಮಾಡುತ್ತಿದ್ದೆ. ಆದರೆ 2008ರಲ್ಲಿ ನಾನು ಏನೋ ಹುಡುಕಾಡ ನಡೆಸುವಾಗ ನನ್ನ ಕಣ್ಣಿಗೆ ಬಿದ್ದದ್ದು ಪೇಪರ್ ಅನ್ನು ಸುರಳಿ ಸುತ್ತುವ ಕಲೆ. ಆಗ ಈ ಕಲೆ ನನ್ನನ್ನು ತುಂಬಾ ಆಕರ್ಷಿಸಿತು. ಆಗಿನಿಂದ ಇದನ್ನು ಕಲಿಯಲು ಪ್ರಾರಂಭಿಸಿದೆ. ಆನ್‌ಲೈನ್‌ನಲ್ಲಿ ವಿಡಿಯೋ ನೋಡುವ ಮೂಲಕ ಇದನ್ನು ‍ಪ್ರಾರಂಭಿಸಿದೆ’ ಎನ್ನುತ್ತಾರೆ ಸ್ವರ್ಣಾ.

‘ಒಂದು ಸಣ್ಣ ಎಳೆಯ ಕಾಗದದಿಂದ ಇಷ್ಟೊಂದು ಸುಂದರ ಕಲಾಕೃತಿ ಹಾಗೂ ವಸ್ತುಗಳನ್ನು ತಯಾರಿಸಲು ಸಾಧ್ಯವೇ ಎಂದು ಮೊದಮೊದಲು ನನಗೆ ಆಶ್ಚರ್ಯವಾಗಿತ್ತು. ಹೀಗಾಗಿ ಇದನ್ನು ಹವ್ಯಾಸವನ್ನಾಗಿ ಮಾಡಿಕೊಂಡೆ. ಆದರೆ 2012ರವರೆಗೆ ‌ಇದು ಕೇವಲ ಹವ್ಯಾಸವಾಗಿ ಉಳಿದಿತ್ತು. ನಂತರ ಇದೇ ನನ್ನ ವೃತ್ತಿಯಾಯಿತು. ಹೀಗಾಗಿ 2012ರಲ್ಲಿ ‘ಕ್ರಾಫ್ಟಿ ವೇವ್ಸ್’ ಸಂಸ್ಥೆಯನ್ನು ಪ್ರಾರಂಭಿಸಿದೆ.

ಇದಕ್ಕೂ ಮುನ್ನ ನಾನು ಏನು ಮಾಡಬೇಕು ಎಂದು ಗೊಂದಲದಲ್ಲಿದ್ದೆ. ಯಾವಾಗ ಪೇಪರ್‌ ಆರ್ಟ್‌ ಕಣ್ಣಿಗೆ ಬಿತ್ತೋ, ಆಗಿನಿಂದ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ. ಮೊದಲು ಕೇಲವ ಬಣ್ಣದ ಕಾಗದ ಬಳಸುತ್ತಿದ್ದ ನಾನು ಈಗ 3ಡಿ ಕಾಗದಗಳನ್ನು ಬಳಸಲು ಪ್ರಾರಂಭಿಸಿದ್ದೇನೆ’ ಎನ್ನುತ್ತಾರೆ ಅವರು.  

ಕೇವಲ ಗೋಡೆಗೆ ನೇತುಹಾಕುವ ಅಲಂಕಾರಿಕ ವಸ್ತುಗಳಿಂದ ಪ್ರಾರಂಭವಾದ ‘ಕ್ರಾಫ್ಟಿ ವೇವ್ಸ್‌’ನಲ್ಲಿ ಈಗ ಕಾಗದದಿಂದ ಮಾಡಿದ ಫೋಟೋ ಫ್ರೇಮ್‌, ಗಿಫ್ಟ್‌ ಬಾಕ್ಸ್‌, ಫ್ಯಾನ್ಸಿ ಆಭರಣಗಳು, ಫ್ರಿಡ್ಜ್‌ ಮ್ಯಾಗ್ನೆಟ್ಸ್‌ಗಳೂ ಲಭ್ಯ ಇವೆ. ಸದ್ಯಕ್ಕೆ ಕರಗತಗೊಳಿಸಿಕೊಂಡಿರುವ ಕಲೆಯೊಂದಿಗೆ ಮುಂದಿನ ದಿನಗಳಲ್ಲಿ ಸ್ಟ್ಯಾಂಪಿಂಗ್‌ ಹಾಗೂ ಸ್ಕ್ಯ್ರಾಪ್‌ ಬುಕ್ಕಿಂಗ್‌ ತಂತ್ರಜ್ಞಾನವನ್ನು ಕಲಿಯುವ ಆಸಕ್ತಿಯೂ ಸ್ವರ್ಣಾ ಅವರಿಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT