ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಲೆ ನಡಿಗೆ’ ಸಾಧನೆಗೆ ವಿಶ್ವ ದಾಖಲೆ ಮನ್ನಣೆ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ;  ಸಾಧಿಸಬೇಕೆಂಬ ಛಲ ಮನಸ್ಸಿನಲ್ಲಿ ಇದ್ದರೆ, ಗುರಿಯ ಹಾದಿ ತಲುಪುವುದು ಸುಲಭ. ದೃಢವಿಶ್ವಾಸ, ಸತತ ಪ್ರಯತ್ನದ ಮೂಲಕ ತಾವು ಅಂದುಕೊಂಡ ಕ್ಷೇತ್ರದಲ್ಲಿ  ಸಾಧನೆಗೈದ  ವ್ಯಕ್ತಿಗಳು ಇತಿಹಾಸದ ಪುಟ ಸೇರುತ್ತಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿರುವ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಪುರುಷೋತ್ತಮ ದೇರಾಜೆ   ಅಂತಹ ವಿಶಿಷ್ಟ ಸಾಧನೆಯೊಂದನ್ನು ಮಾಡಿದ್ದಾರೆ. ‘ಅತಿ ವೇಗದ ತಲೆ ನಡಿಗೆ’ಯ (Fastest Head stand Moving) ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಅವರದ್ದು.

ಸಾಧನೆಯ ಹೆಗ್ಗುರುತು 
35ವರ್ಷದ ಪುರುಷೋತ್ತಮ ದೇರಾಜೆ ಮೂಲತಃ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಅರಂತೋಡು ಗ್ರಾಮದವರು. ಕೃಷಿಕ ಕುಟಂಬದ ಸರಸ್ವತಿ – ಸಣ್ಣಯ್ಯಗೌಡ ದಂಪತಿಯ ಪುತ್ರ.

ಒಮ್ಮೆ ಸೋದರನೊಬ್ಬ ಮನೆಯಲ್ಲಿ ತಲೆ ಕೆಳಗೆ ಮಾಡಿ ಅಭ್ಯಾಸ ಮಾಡುತ್ತಿದ್ದುದನ್ನು ಗಮನಿಸಿದ ಪುರೋಷತ್ತಮ ಅದನ್ನೇ ಅನುಕರಿಸಿದರು. ಬಾಲ್ಯದ ತುಂಟಾಟದಲ್ಲಿ ಅನುಕರಣೆಯ ದಾರಿ ಹಿಡಿದ ಅವರು ಮುಂದೆ ತಲೆನಡಿಗೆಯಲ್ಲೇ ದಾಖಲೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ತಲೆಕೆಳಗೆ ಮಾಡಿ ಒಂದು ನಿಮಿಷಕ್ಕೆ ಅತಿವೇಗವಾಗಿ 7ಮೀಟರ್ ದೂರ ಚಲಿಸುವ ಮೂಲಕ ವಿಶ್ವದಾಖಲೆಯ ಪುಟ ಸೇರಿದ್ದಾರೆ. ಪುದುಚೆರಿಯ Assist World Record Research Foundation ಇವರ ಸಾಧನೆಯನ್ನು  ವಿಶ್ವ ದಾಖಲೆಯ ಪಟ್ಟಿಗೆ ಸೇರಿಸಿದೆ.

ಈ ಸಾಧನೆಗಾಗಿ ಅವರು ಅಪಾರ ಪರಿಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಈ ಕಲೆಯನ್ನು ಅಭ್ಯಾಸವಾಗಿ ಮಾಡಿಕೊಂಡಿದ್ದ ಅವರು, ಕಠಿಣ ಪರಿಶ್ರಮದ ಮೂಲಕ ಸಾಧನೆಯ ಶಿಖರ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆ ಸಿದ್ಧಿಸಲು ಯೋಗ ಕೂಡ ಸಹಕಾರಿಯಾಗಿದೆ.

‘ಎಂಟು ವರ್ಷದಿಂದ ಯೋಗಾಸಕ್ತರಿಗೆ  ತರಬೇತಿ ನೀಡುತ್ತಿದ್ದೇನೆ. ನಾನು ಕೂಡ ಸತತವಾಗಿ ಅಭ್ಯಾಸ  ಮಾಡುತ್ತಿದ್ದೇನೆ.  ಒಂದು ನಿಮಿಷಕ್ಕೆ ಏಳು ಮೀಟರ್ ದೂರ ತಲೆಯಿಂದ ಚಲಿಸುವುದು  ಕಷ್ಟದ ಕೆಲಸ. ಆದರೆ, ಛಲ ಬಿಡದಂತೆ ಅಭ್ಯಾಸ ಮಾಡಿದ್ದರಿಂದಲೇ ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು’ ಎಂದು  ಅವರು ಪರಿಶ್ರಮದ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ.

ಯೋಗ ಸಾಧನೆ
‘25 ವರ್ಷ ಹಿಂದೆ  ಭವಾನಿ ಸುಬ್ರಹ್ಮಣ್ಯ ಅವರಿಂದ ಯೋಗ ಕಲಿತೆ. ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಹಾಗಾಗಿ  ಈ ಕ್ಷೇತ್ರದಲ್ಲಿ   ಗುರುತಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಪುರಷೋತ್ತಮ ನಮ್ರತೆಯ ಮಾತುಗಳನ್ನಾಡುತ್ತಾರೆ.

ಯೋಗ ಸಾಧನೆಗಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೂ ಪುರುಷೋತ್ತಮ ಭಾಜನರಾಗಿದ್ದಾರೆ.

2011ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡು ‘ಯೋಗ ಕಿಂಗ್’ ಎನ್ನುವ ಬಿರುದು ಕೂಡ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT