ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌: ಬಚ್ಚನ್ ಹಿಂದಿಕ್ಕಿದ ಮೋದಿ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದುವ ಮೂಲಕ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಹಿಂದಿಕ್ಕಿದ್ದಾರೆ.

ಆಗಸ್ಟ್‌ 25ರ ಲೆಕ್ಕಾಚಾರದ ಪ್ರಕಾರ ಬಚ್ಚನ್ ಅವರನ್ನು 2 .20ಕೋಟಿ ಜನರು ಹಿಂಬಾಲಿಸುತ್ತಿದ್ದರು. ಮೋದಿ ಅವರು 2.21ಕೋಟಿ ಹಿಂಬಾಲಕರ ಮೂಲಕ ಸಣ್ಣ ಅಂತರದಿಂದ ಮುಂದಿದ್ದಾರೆ. ಇದೇ ಜನವರಿಯಲ್ಲಿ 1.73 ಕೋಟಿ ಹಿಂಬಾಲಕರನ್ನು ಹೊಂದಿದ್ದ ಶಾರುಖ್ ಖಾನ್ ಅವರನ್ನು ಮೋದಿ 1.74 ಕೋಟಿ ಹಿಂಬಾಲಕರನ್ನು ಪಡೆದು ಹಿಂದಿಕ್ಕಿದ್ದರು. ಸದ್ಯ 2.09 ಕೋಟಿ ಹಿಂಬಾಲಕರನ್ನು ಹೊಂದಿರು ಶಾರುಖ್  ಮೂರನೇ ಸ್ಥಾನದಲ್ಲಿದ್ದಾರೆ.

ಮೋದಿ ಅವರ (@narendramodi) ಖಾತೆಯನ್ನು 2015ರಲ್ಲಿ ಪ್ರತಿ ಎರಡು ತಿಂಗಳಿಗೆ 10 ಲಕ್ಷ ಜನರು ಫಾಲೊ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ 1.5 ಕೋಟಿ, ನವೆಂಬರ್‌ನಲ್ಲಿ 1.6 ಕೋಟಿ ಹಿಂಬಾಲಕರಿದ್ದರು. 2016ರ ಎಂಟು ತಿಂಗಳ ಅವಧಿಯಲ್ಲಿ ಸುಮಾರು 50 ಲಕ್ಷ ಜನರು ಈ ಪಟ್ಟಿಗೆ ಸೇರ್ಪಡೆಯಾಗಿದ್ದರು. 2009ರಿಂದ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಮೋದಿ ಅವರು ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಗತ್ತಿನ ರಾಜಕಾರಣಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಒಬಾಮ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT