ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆಕಾಳು ಬಿತ್ತನೆ ಹೆಚ್ಚಳ ಧಾರಣೆ ಇಳಿಕೆ ನಿರೀಕ್ಷೆ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಜತೆಗೆ ಬೇಳೆಕಾಳುಗಳ ಧಾರಣೆಯೂ ಗರಿಷ್ಠ ಮಟ್ಟದಲ್ಲಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಬೇಳೆಕಾಳುಗಳ ಬಿತ್ತನೆ ರೈತರು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ.

ಈವರೆಗೆ ಒಟ್ಟು 139 ಲಕ್ಷ ಹೆಕ್ಟೇರ್‌ಗಳಲ್ಲಿ ಬೇಳೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷವಿದ್ದ 103 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ ಈ ಬಾರಿ ಬಿತ್ತನೆಯಲ್ಲಿ  ಶೇ 34ರಷ್ಟು ಏರಿಕೆಯಾಗಿದೆ. ಹೀಗಾಗಿ ಉತ್ಪಾದನೆ ಪ್ರಮಾಣದಲ್ಲಿ ಏರಿಕೆಯಾಗಿ, ಬೆಲೆ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

2016–17ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್‌ ಅವಧಿ) ಬೇಳೆಕಾಳುಗಳ ಉತ್ಪಾದನೆ 164 ಲಕ್ಷ ಟನ್‌ಗಳಿಂದ 200 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎನ್ನುವುದು ಸರ್ಕಾರದ ನಿರೀಕ್ಷೆಯಾಗಿದೆ.

ಭತ್ತ ಬಿತ್ತನೆ ಪ್ರಮಾಣ ಅಲ್ಪ ಏರಿಕೆ ಕಂಡಿದೆ. ಅಂದರೆ 352 ಲಕ್ಷ ಹೆಕ್ಟೇರ್‌ಗಳಿಂದ 363 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ಏಕದಳಧಾನ್ಯಗಳ ಬಿತ್ತನೆ ಸಹ 173 ಲಕ್ಷ ಹೆಕ್ಟೇರ್‌ಗಳಿಂದ 183 ಲಕ್ಷ ಹೆಕ್ಟೇರ್‌ಗಳಿಗೆ ಹೆಚ್ಚಾಗಿದೆ. 178 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ.

ಕಬ್ಬು, ಹತ್ತಿ ಬಿತ್ತನೆ ಇಳಿಕೆ: ಈ ಬಾರಿ ಕಬ್ಬು ಬಿತ್ತನೆ ಪ್ರಮಾಣವು 50 ಲಕ್ಷ ಹೆಕ್ಟೇರ್‌ಗಳಿಂದ 46 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆಯಾಗಿದೆ. ಹತ್ತಿ ಬಿತ್ತನೆಯೂ 113 ಲಕ್ಷ ಹೆಕ್ಟೇರ್‌ಗಳಿಂದ 103 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆ ಕಂಡಿದೆ. ಕಳೆದ ಎರಡೂ ಬೆಳೆ ವರ್ಷಗಳಲ್ಲಿ (2014–15, 2015–16) 25 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯಗಳು ಉತ್ಪಾದನೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT