ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದದ ಅರ್ಥ ತಿಳಿಯಿರಿ: ಪೇಜಾವರ ಶ್ರೀ

Last Updated 26 ಸೆಪ್ಟೆಂಬರ್ 2016, 5:17 IST
ಅಕ್ಷರ ಗಾತ್ರ

ಉಡುಪಿ: ವೇದವನ್ನು ಉಳಿಸಿ ಬೆಳೆಸುವು ದರ ಜೊತೆಗೆ ವೇದದ ಅರ್ಥವನ್ನು ತಿಳಿಯುವ ಪ್ರವೃತ್ತಿ ನಮ್ಮಲ್ಲಿ ಬೆಳೆಯ ಬೇಕು ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ ಹಾಗೂ ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ರಾಜಾಂಗಣ ದಲ್ಲಿ ಭಾನುವಾರ ನಡೆದ ‘ಶ್ರುತಿಮೀ ಮಾಂಸಾ’ ಎಂಬ ವಿಷಯದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾ ಟಿಸಿ ಮಾತನಾಡಿದರು.

ವೇದ ತತ್ವದ ಬಗ್ಗೆ ಸಾಕಷ್ಟು ಗ್ರಂಥಗಳು ರಚನೆಯಾಗಿ ದ್ದರೂ, ವೇದ ಬಗ್ಗೆ ಸರಿಯಾದ ವಿಮರ್ಶೆ ನಡೆಯಲಿಲ್ಲ. ಆದರೆ, ವೇದ ಅಧ್ಯಯನ ಪರಂಪರೆಯಿಂದಾಗಿ ಇಂದಿಗೂ ವೇದ ಉಳಿದುಕೊಂಡಿದೆ ಎಂದರು. 

ವೇದಾಧ್ಯಯನಕ್ಕೆ ಅರ್ಥವಿಲ್ಲ ಎನ್ನುವುದು ತಪ್ಪು ಕಲ್ಪನೆ. ರಾಮಾ ಯಣ, ಮಹಾಭಾರತ ಸೇರಿದಂತೆ ಪುರಾಣಗಳು ಸರಿಯಾಗಿಲ್ಲ, ವೇದಗಳ ಲ್ಲಿಯೂ ಹುರುಳಿಲ್ಲ ಎನ್ನುವ ಆರೋಪ ಗಳು 800 ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ಇದೆಲ್ಲವನ್ನೂ ಮೀರಿ ವೇದಾಧ್ಯಯನ ಪರಂಪರೆ ಮೂಲಕ ಇಂದಿಗೂ ವೇದ ಉಳಿದುಕೊಂಡಿರು ವುದು ಸಂತಸದ ವಿಚಾರ. ಆಧುನಿಕ ಯುಗದಲ್ಲಿಯೂ ವೇದದ ಕುರಿತು ಬೆಳಕು ಹರಿಯುವ ಕೆಲಸವಾಗುತ್ತಿರು ವುದು ಶ್ಲಾಘನೀಯ ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ವೈಜ್ಞಾನಿಕ ಯುಗದಲ್ಲಿ ವೇದಗಳ ಅಧ್ಯಯನ ಕಡಿಮೆ ಯಾಗುತ್ತಿದೆ ಎನ್ನುವ ಆರೋಪಕ್ಕೆ ವ್ಯತಿರಿಕ್ತವಾಗಿ ವೇದ ಅಭ್ಯಾಸ ನಡೆಯುತ್ತಿ ರುವುದು ನಮ್ಮ ಭಾಗ್ಯ. ವೇದಗಳಲ್ಲಿನ ಸ್ವರೂಪ ಹಾಗೂ ಉಚ್ಛಾರಣೆಯ ರೀತಿ ಅನೇಕ ಕಡೆಗಳಲ್ಲಿ ಬದಲಾಗಿದೆ. ಇದು ಸರಿಯೇ ಎನ್ನುವ ಗೊಂದಲವೂ ಇದೆ. ಆದರೆ, ವೇದಗಳ ಕುರಿತು ನಿರಂತರ ಅಧ್ಯಯನದೊಂದಿಗೆ ಸಾಧುತ್ವದ ನಿಷ್ಕ ರ್ಷೆಯಾದರೆ ಪಕ್ವತೆ ಬರುತ್ತದೆ ಎಂದರು.

ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿ ಆರ್‌. ಗಣೇಶ್‌, ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಎನ್‌. ಲಕ್ಷ್ಮೀನಾರಾಯಣ ಭಟ್‌ ಉಪಸ್ಥಿತರಿದ್ದರು. ಹೆರ್ಗ ಹರಿಪ್ರಸಾದ್‌ ಭಟ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT