ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರ್ಫಾನ್ ಖಾನ್ ಜೊತೆ ನಟಿಸಲು ಪುಳಕಗೊಂಡ ನಟಿ ಪರಿಣಿತಿ ಚೋಪ್ರಾ

Last Updated 26 ಸೆಪ್ಟೆಂಬರ್ 2016, 16:29 IST
ಅಕ್ಷರ ಗಾತ್ರ

ಮುಂಬೈ: ಹೋಮೀ ಅದಜಾನಿಯಾ ಅವರ ಮುಂದಿನ ಚಿತ್ರ ‘ತಕದುಮ್’ ನಲ್ಲಿ ಇರ್ಫಾನ್ ಖಾನ್ ಅವರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿರುವ ನಟಿ ಪರಿಣಿತಿ ಚೋಪ್ರಾ ಪುಳಕಗೊಂಡಿದ್ದಾರೆ.

‘ಇರ್ಫಾನ್ ಖಾನ್ ಅವರಂತಹ ಮೇರು ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ, ಅವರೊಡನೆ ತೆರೆ ಮೇಲೆ ಕಾಣಿಸಿಕೊಳ್ಳುವ ಕ್ಷಣವನ್ನು ಕಾತರದಿಂದ ಎದುರುನೋಡುತ್ತಿದ್ದೇನೆ. ಜೊತೆಗೆ ಮನದಲ್ಲಿ ಕೊಂಚ ಭಯವೂ ಕಾಡುತ್ತಿದೆ’ ಎಂದು ನಟಿ ಪರಿಣಿತಿ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ ‘ಶುದ್ದ್ ದೇಸಿ ರೊಮ್ಯಾನ್ಸ್’ ಚಿತ್ರದ ನಂತರ ಮತ್ತೊಮ್ಮೆ ಸುಶಾಂತ್ ಸಿಂಗ್ ರಜಪೂತ್ ಅವರೊಡನೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT