ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ನೋಂದಣಿ ಕರಡು ಪ್ರಕಟ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧ ಪಟ್ಟಂತೆ ನೋಂದಣಿ, ಬೆಲೆಪಟ್ಟಿ ಮತ್ತು ಪಾವತಿ ಕುರಿತು ತೆರಿಗೆ ಸಚಿವಾಲಯವು ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ.

ಜಿಎಸ್‌ಟಿ ಮಂಡಳಿಯ ಮೊದಲ ಸಭೆ  ನಡೆದ ಒಂದು ವಾರದ ಅವಧಿಯೊಳಗೆ  ಈ ಕ್ರಮ ಕೈಗೊಳ್ಳಲಾಗಿದೆ. ಈ ಕರಡು ನಿಯಮಗಳ ಕುರಿತು ಬುಧವಾರದ ಒಳಗೆ ಅಭಿಪ್ರಾಯಗಳನ್ನು  ಸಲ್ಲಿಸಲು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಇಸಿ) ಕೇಳಿಕೊಂಡಿದೆ.

ಭಾರತೀಯರು ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ಆನ್‌ಲೈನ್‌ ನೋಂದಣಿ ಒದಗಿಸಲಾಗುವುದು. ಜಿಎಸ್‌ಟಿ ವ್ಯಾಪ್ತಿಗೆ ಬರುವ ಅನಿವಾಸಿ ಭಾರತೀಯರು ವಹಿವಾಟು ಆರಂಭಿಸುವ ಕನಿಷ್ಠ ಐದು ದಿನಗಳ ಮುಂಚೆ ಅರ್ಜಿ ಸಲ್ಲಿಸಬೇಕು ಮತ್ತು ಮುಂಗಡವಾಗಿಯೇ ತೆರಿಗೆಯನ್ನು ಠೇವಣಿ ಇರಿಸಬೇಕು.

ನೋಂದಣಿ ಬಯಸುವವರು ಪ್ಯಾನ್‌, ಮೊಬೈಲ್‌ ಸಂಖ್ಯೆ, ಇ–ಮೇಲ್‌ ವಿಳಾಸಗಳನ್ನು ಕಡ್ಡಾಯವಾಗಿ ಒದಗಿಸಬೇಕು. ನೋಂದಣಿ ಅರ್ಜಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಯು ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ, ನೋಂದಣಿ ಅರ್ಜಿ ಅನುಮೋದನೆಗೊಂಡಿದೆ ಎಂದೇ ಪರಿಗಣಿಸಲಾಗುವುದು.

ಪ್ಯಾನ್‌, ಒಂದು ಬಾರಿ ರಹಸ್ಯ ಸಂಖ್ಯೆ (ಒಟಿಪಿ)  ಮತ್ತು ಆಧಾರ್‌  ಆಧರಿಸಿ ತೆರಿಗೆ ಅಧಿಕಾರಿಗಳು ಅರ್ಜಿದಾರರ ವಿವರಗಳನ್ನು ದೃಢೀಕರಿಸಿಕೊಳ್ಳುತ್ತಾರೆ. ವಿವರಗಳೆಲ್ಲ ಸರಿಯಾಗಿದ್ದರೆ, ಅರ್ಜಿ ಸಲ್ಲಿಸಿದ ನಂತರದ ಮೂರು ಕೆಲಸದ ದಿನಗಳಲ್ಲಿ ನೋಂದಣಿ ಅನುಮೋದಿಸಬೇಕಾಗುತ್ತದೆ.

ವಿವರಗಳಲ್ಲಿ ದೋಷಗಳಿದ್ದರೆ ಮೂರು ದಿನಗಳಲ್ಲಿ ಅರ್ಜಿದಾರರ ಗಮನಕ್ಕೆ ತರಬೇಕು. ವಿವರಣೆ ಸ್ವೀಕರಿಸಿದ ನಂತರ  7 ದಿನಗಳಲ್ಲಿ ನೋಂದಣಿ ಅನುಮೋದಿಸಬೇಕು ಎಂದು ಕರಡು ನಿಯಮದಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT