ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವಿವಾದ: ತಮಿಳುನಾಡಿಗೆ 3 ದಿನಗಳ ಕಾಲ ತಲಾ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಆದೇಶ

Last Updated 27 ಸೆಪ್ಟೆಂಬರ್ 2016, 10:39 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆದಿದೆ.

ಸೆಪ್ಟೆಂಬರ್‌ ತಿಂಗಳಲ್ಲೇ ಮೂರು ಬಾರಿ ಹಿನ್ನಡೆ ಅನುಭವಿಸಿರುವ ಕರ್ನಾಟಕ, ನೀರು ಹರಿಸುವಂತೆ ಸೆ. 20ರಂದು ನೀಡಿರುವ ಆದೇಶ ಮಾರ್ಪಡಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.  ಕರ್ನಾಟಕದ ಪರವಾಗಿ ವಾದ ಮಂಡಿಸಿದ ಫಾಲಿ ನಾರಿಮನ್, ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇತ್ತ, ನೀರು ಬಿಡುವವರೆಗೂ ಕರ್ನಾಟಕದ ವಾದವನ್ನು ಆಲಿಸಬಾರದು ಎಂದು ವಿಚಾರಣೆ ವೇಳೆ ತಮಿಳುನಾಡು ವಾದ ಮಂಡಿಸಿತ್ತು.

ಏತನ್ಮಧ್ಯೆ, ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಯಾಕೆ ಪಾಲಿಸಲಿಲ್ಲ? ಎಂದು ಕೋರ್ಟ್ ಕರ್ನಾಟಕವನ್ನು ಪ್ರಶ್ನಿಸಿದೆ.

ಆದಾಗ್ಯೂ, ನಿಮ್ಮ ನಿರ್ಣಯ ಏನೇ ಇದ್ದರೂ ಮೊದಲು ನೀರು ಬಿಡಿ ಎಂದು ಸುಪ್ರೀಂ ವಿಭಾಗೀಯ ನ್ಯಾಯಪೀಠ ಹೇಳಿದೆ.

ಉಭಯ ರಾಜ್ಯಗಳ ವಾದವನ್ನು ಆಲಿಸಿದ ನ್ಯಾಯಾಲಯವು ಕಾವೇರಿ ವಿವಾದ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.

ಅದಲ್ಲದೆ ಸೆ.28, 29 ಮತ್ತು ಸೆ. 30ರಂದು ತಮಿಳುನಾಡಿಗೆ ತಲಾ 6 ಸಾವಿರ ಕ್ಯೂಸೆಕ್ (ಒಟ್ಟು 18 ಸಾವಿರ ಕ್ಯೂಸೆಕ್) ನೀರು ಹರಿಯಬಿಡಬೇಕೆಂದು ಎಚ್ಚರಿಕೆ ದನಿಯಲ್ಲಿ ಆದೇಶಿಸಿದ ನ್ಯಾಯಾಲಯವು ಒಕ್ಕೂಟ ವ್ಯವಸ್ಥೆಯನ್ನು ಉಳಿಸಬೇಕಾಗಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT