ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಯನ್ನು ಮೀರಿದ ಕಾರಂತರು

ಸಾಲಿಗ್ರಾಮದಲ್ಲಿ ಕಾರಂತ ಕಲಾ ಕುಟೀರ ಉದ್ಘಾಟಿಸಿ ಎಂ.ಎಸ್‌. ಮೂರ್ತಿ
Last Updated 12 ಅಕ್ಟೋಬರ್ 2016, 5:46 IST
ಅಕ್ಷರ ಗಾತ್ರ

ಸಾಲಿಗ್ರಾಮ(ಬ್ರಹ್ಮಾವರ): ಸಮಾಜದಲ್ಲಿ ಹೇಗೆ ಬಾಳಬೇಕು ಎನ್ನುವುದನ್ನು ತಮ್ಮ ಕೃತಿಗಳ ಮೂಲಕ ತೋರಿಸಿಕೊಟ್ಟ ಡಾ.ಶಿವರಾಮ ಕಾರಂತರ ಮಾನವೀಯ ಮೌಲ್ಯಗಳು ಇಂದಿನ ಸಮಾಜದ ಎಲ್ಲರಿ ಗೂ ಆದರ್ಶಪ್ರಾಯವಾಗಿದೆ ಎಂದು  ಕರ್ನಾಟಕ ಲಲಿತಕಲಾ ಅಕಾಡೆಮಿಯ ಅ ಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು.

ಸಾಲಿಗ್ರಾಮದ ಡಾ.ಶಿವರಾಮ ಕಾ ರಂತ ರಂಗರಥ ಮಾನಸದಲ್ಲಿ ಡಾ. ಕೋಟ ಶಿವರಾಮ ಕಾರಂತ ಸಂಶೋ ಧನ ಮತ್ತು ಅಧ್ಯಯನ ಸಂಸ್ಥೆಯ ವತಿಯಿಂದ ಭಾನುವಾರ ಕಾರಂತರ 114ನೇ ಜನ್ಮದಿನದ ಪ್ರಯುಕ್ತ ಕಾರಂತ ಸಂಸ್ಮರಣೆ, ವಿಶೇಷ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಯವನ್ನು ಮೀರಿ ಆಲೋಚನೆ ಮಾಡುವ ವ್ಯಕ್ತಿತ್ವ ಕಾರಂತರದ್ದು. ಅವರು ಗಾಂಧಿಯನ್ನು ಮೀರಿದವರು. ಕಾರಂತರ ಕೃತಿಗಳು ರಂಜನೀಯವಾಗಿರಲಿಲ್ಲ. ಜೀವನ ಮತ್ತು ಸಮಾಜದ ಎಲ್ಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ತಮ್ಮ ಕೃತಿಗಳ ಮೂಲಕ ಹೊರಹಾಕಿದ್ದರು. ಅವರ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅದರಿಂದ ಮುಂದಿನ ಪೀಳಿಗೆಗೆ ಪ್ರೇರಣೆ ಸಿಗುವಂತಾಗಬೇಕು ಎಂದು ಅವರು ಹೇಳಿದರು.

ಡಾ. ಕಾರಂತರ ಸಂಸ್ಮರಣೆ ಮಾಡಿದ ಪತ್ರಕರ್ತ ಚ.ಹ.ರಘುನಾಥ್‌ ಸಮಾಜ ದಲ್ಲಿ ಇಂದು ನಾವು ಕೃತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆಯೇ ಹೊರತು ವ್ಯಕ್ತಿಗೆ ಅಲ್ಲ.

ಸರ್ಕಾರವಾಗಲೀ, ಯಾವುದೇ ಪರಿಷತ್‌ ಆಗಲೀ ಕಾರಂತರನ್ನು ಗುರುತಿಸದೇ ಇರುವು ದರಿಂದ ಕಾರಂತರು ಕೇವಲ ಕರಾವಳಿ ಜಿಲ್ಲೆಗೆ ಸೀಮಿತವಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ಮಣೂರಿನ ಉದ್ಯಮಿ ಎಂ.ಸುಬ್ರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲೇಖಕ ಹಾಗೂ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯಾಯ ಉಪಸ್ಥಿತ ರಿದ್ದರು. ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಬಿ.ಮಾಲಿನಿ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಘುರಾಮ್ ಬೈಕಾಡಿ ಅತಿಥಿಗಳನ್ನು ಪರಿಚಯಿಸಿದರು. ನಂತರ ಡಾ.ಶ್ರೀಪಾದ್ ಭಟ್ ಅವರ ನಿರ್ದೇ ಶನದಲ್ಲಿ ‘ಚಿತ್ರಾ’ ನೃತ್ಯ ನಾಟಕ ನಡೆಯಿತು.

ಕಾರಂತ ಕಲಾ ಕುಟೀರ
ರಂಗನಟ ಕಾರಂತರು ವಿವಿಧ ಪಾತ್ರಗಳಲ್ಲಿ ಮಿಂಚಿದ ವಿವಿಧ ಭಂಗಿಗಳ ಛಾಯಾಚಿತ್ರಗಳು ಮತ್ತು ಕಾರಂತರ ಕುಂಚದಿಂದ ಅರಳಿದ ಆಯ್ದ ವರ್ಣರಂಜಿತ ಛಾಯಾಚಿತ್ರಗಳ ಪ್ರದರ್ಶನ ಶಾಲೆ ಕಾರಂತ ಕಲಾ ಕುಟೀರವನ್ನು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಉದ್ಘಾಟಿಸಿದರು.

***
ಸಮಾಜದ ಎಲ್ಲ ಕ್ಷೇತ್ರಗಳನ್ನು ಒಂದುಗೂಡಿಸಿದ ಅಪರೂಪದ ಸಾಹಿತಿಯಾದ ಕಾರಂತರಲ್ಲಿ ಪ್ರಾಮಾಣಿಕತೆ, ಸ್ವಾಭಿಮಾನ, ಪರಿಸರ ಕಾಳಜಿ, ಸಮಾಜದ ಸಮಸ್ಯೆಗಳ ಬಗ್ಗೆ ಅರಿವು ಇತ್ತು
-ಚ.ಹ ರಘುನಾಥ,ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT