ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಳಿತ ಸಾಧ್ಯತೆ

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ದೇಶದ ಪ್ರಮುಖ ಕಂಪೆನಿಗಳು  ಪ್ರಕಟಿಸಲಿರುವ ತ್ರೈಮಾಸಿಕ  ಹಣಕಾಸು ಸಾಧನೆಯು ಈ ವಾರ ಷೇರುಪೇಟೆಯ ಭವಿಷ್ಯ ನಿರ್ಧರಿಸಲಿದೆ. ಈ ವಾರ ಎಚ್‌ಡಿಎಫ್‌ಸಿ ಬ್ಯಾಂಕ್‌, ಎನ್‌ಟಿಪಿಸಿ, ಐಟಿಸಿ, ಮಾರುತಿ ಸುಜುಕಿಯಂತಹ  ಪ್ರಮುಖ ಕಂಪೆನಿಗಳು ತಮ್ಮ ಎರಡನೇ ತ್ರೈಮಾಸಿಕ (ಜುಲೈ–ಸೆಪ್ಟೆಂಬರ್‌) ಅವಧಿಯ ಹಣಕಾಸು ವಹಿವಾಟಿನ ಫಲಿತಾಂಶ ಪ್ರಕಟಿಸಲಿವೆ. 

ಹೀಗಾಗಿ ಈ ವಾರ ಷೇರುಪೇಟೆ ವಿವಿಧ ಕಂಪೆನಿಗಳ ತ್ರೈಮಾಸಿಕ ಫಲಿತಾಂಶದ ಮೇಲೆ ಅವಲಂಬಿತವಾಗಿರಲಿದ್ದು ಹೆಚ್ಚು ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಅದಾನಿ ಪವರ್‌, ಆ್ಯಕ್ಸಿಸ್‌ ಬ್ಯಾಂಕ್‌, ಐಡಿಯಾ ಸೆಲ್ಯುಲರ್‌, ಏಷಿಯನ್‌ ಪೇಂಟ್ಸ್‌, ರಿಲಯನ್ಸ್‌ ಕ್ಯಾಪಿಟಲ್‌, ಭಾರ್ತಿ ಏರ್‌ಟೆಲ್‌, ಡಾ.ರೆಡ್ಡೀಸ್‌ ಲ್ಯಾಬ್‌, ಹೀರೊ ಮೋಟೊ ಕಾರ್ಪ್‌, ಹಿಂದೂಸ್ತಾನ್‌ ಲೀವರ್ ಲಿಮಿಡೆಟ್‌ (ಎಚ್‌ಯುಎಲ್‌) ಐಒಸಿ, ಒಎನ್‌ಜಿಸಿ ಕೂಡ ಆರ್ಥಿಕ ಸಾಧನೆ ಮಂಡಿಸಲಿವೆ.

ಈ ಸಂಗತಿ ಹೊರತುಪಡಿಸಿದರೆ ವಿದೇಶಿ ಹೂಡಿಕೆ, ಡಾಲರ್‌ ಎದುರು ರೂಪಾಯಿ ಮೌಲ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿದ್ಯಮಾನಗಳು   ಮಾರುಕಟ್ಟೆ ಏರಿಳಿತಕ್ಕೆ ಕಾರಣವಾಗಲಿವೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT