ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ಏರಿಕೆ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ಯುರೋಪ್‌ ಮಾರುಕಟ್ಟೆಯಲ್ಲಿ ನಡೆದ ಉತ್ತಮ ವಹಿವಾಟಿನ ಪ್ರಭಾವದಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೋಮವಾರ 102 ಅಂಶ
ಗಳ ಏರಿಕೆ ಕಂಡಿತು. ಮೂರು ವಾರಗಳ ಗರಿಷ್ಠ ಮಟ್ಟವಾದ 28,179 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಚೀನಾದ ಆರ್ಥಿಕ ಚೇತರಿಕೆಗೆ ಹೊಸ ಕ್ರಮ ಜಾರಿಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಇದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ದೇಶದ ಪ್ರಮುಖ ಬ್ಯಾಂಕ್‌ಗಳ ಎರಡನೇ ತ್ರೈಮಾಸಿಕದ ಆರ್ಥಿಕ ಸಾಧನೆ ಮಂಗಳವಾರ ಹೊರಬೀಳಲಿವೆ. ಹೀಗಾಗಿ ಹೂಡಿಕೆದಾರರು ಈ ಷೇರುಗಳಲ್ಲಿ ಬಹಳ ಎಚ್ಚರಿಕೆಯಿಂದ ವಹಿವಾಟು ನಡೆಸಿದರು. ಇದು ಸೂಚ್ಯಂಕವನ್ನು ಹೆಚ್ಚು ಏರಿಕೆ ಕಾಣದಂತೆ ತಡೆಯಿತು. ತೈಲ ಮತ್ತು ಅನಿಲ, ಬ್ಯಾಂಕ್‌ ಮತ್ತು ವಾಹನ ಕಂಪೆನಿಗಳ ಷೇರುಗಳು ಹೆಚ್ಚು ಮಾರಾಟವಾದವು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 16 ಅಂಶ ಏರಿಕೆ ಕಂಡು, 8,709 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಸರ್ಕಾರಿ ಸ್ವಾಮ್ಯದ ಉಕ್ಕು, ವಿದ್ಯುತ್‌ ಮತ್ತು ಮೂಲಸೌಕರ್ಯ ವಲಯದ ಕಂಪೆನಿಗಳ ವಸೂಲಿಯಾಗದ ಸಾಲ ಗರಿಷ್ಠ ಮಟ್ಟದಲ್ಲಿದೆ. ಇದನ್ನು ತಗ್ಗಿಸುವ ಕುರಿತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬ್ಯಾಂಕ್‌ ಅಧಿಕಾರಿಗಳ ಜತೆ ಸಭೆ ನಡೆಸಿದರು. ಆದರೆ, ಸಭೆಗೂ ಮುನ್ನವೇ ಷೇರುಪೇಟೆಯಲ್ಲಿ ಬ್ಯಾಂಕಿಂಗ್‌ ವಲಯದ ಷೇರುಗಳು ಖರೀದಿ ವಹಿವಾಟು ಜೋರಾಗಿ ನಡೆಯಿತು. ಇದು ಸೂಚ್ಯಂಕದ ಏರಿಕೆಗೆ ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT