ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಸಾಧನಗಳಲ್ಲಿ ಸ್ಥಳೀಯ ಭಾಷೆ ಅಳವಡಿಕೆ

Last Updated 11 ನವೆಂಬರ್ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಲು ಎಲ್ಲ ಬಗೆಯ ಡಿಜಿಟಲ್‌ ಸಾಧನಗಳಲ್ಲೂ ಸ್ಥಳೀಯ ಭಾಷೆಗಳನ್ನು ಅಳವಡಿಸಬೇಕು ಎಂದು ಕೇಂದ್ರ ಸಂಪರ್ಕ ಮತ್ತು ರೈಲ್ವೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ.

ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ರಾಷ್ಟ್ರಗಳ ಸಂಪರ್ಕ ಸಚಿವರ ಎರಡು ದಿನಗಳ ಸಮಾವೇಶದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಡಿಜಿಟಲ್‌ ಸಾಧನಗಳಲ್ಲಿ ಅಳವ ಡಿಸಲು ಸಾಧ್ಯವಾಗುವಂತೆ ಎಲ್ಲ ಸ್ಥಳೀಯ ಭಾಷೆಗಳಲ್ಲಿ ಕಾರ್ಯಕ್ರಮ ಅಭಿವೃದ್ಧಿಪಡಿಸಬೇಕು ಮತ್ತು  ಡಿಜಿಟಲ್‌ ಕೌಶಲವುಳ್ಳ ಸಾಧನ ಗಳನ್ನೂ ಹೆಚ್ಚಿಸಲು ಬ್ರಿಕ್ಸ್‌ ರಾಷ್ಟ್ರಗಳು ಮಹತ್ವ ನೀಡಬೇಕು ಎಂದರು.

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ  ಕುರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ತೊಡಗಿಸಬೇಕು. ಈ ದಿಸೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು  ಜಂಟಿ ಪ್ರಯತ್ನ ನಡೆಸ ಬೇಕಾಗಿದೆ. ಐದೂ ರಾಷ್ಟ್ರಗಳ ಶಕ್ತಿ ಸಾಮರ್ಥ್ಯಗಳನ್ನು ಪರಸ್ಪರ  ಪೂರಕ ವಾಗಿ ಬಳಸಿಕೊಳ್ಳಬೇಕು. ಇದರಿಂದ ರಫ್ತು ಹೆಚ್ಚುವುದರ ಜೊತೆಗೆ,  ಯುವ ಜನರಿಗೆ ಉದ್ಯೋಗ ಅವಕಾಶಗಳನ್ನೂ ಹೆಚ್ಚಿಸಬಹುದಾ ಗಿದೆ ಎಂದು ಸಿನ್ಹಾ  ಹೇಳಿದರು.

ಬ್ರಿಕ್ಸ್‌ ದೇಶಗಳಿಗಾಗಿ ಮೊಬೈಲ್‌: ಬ್ರಿಕ್ಸ್‌ ರಾಷ್ಟ್ರಗಳ ಪರಸ್ಪರ ಸಹಕಾರ ಮತ್ತು  ಅಲ್ಲಿನ ಮಾಹಿತಿ ಸಂಪರ್ಕ ತಂತ್ರಜ್ಞಾನ ವ್ಯವಸ್ಥೆಗೆ ಪೂರಕವಾ ಗುವ ಲಕ್ಷಣಗಳನ್ನು ಹೊಸ ಮೊಬೈಲ್‌ ತಂತ್ರಜ್ಞಾನದಲ್ಲಿ ಅಳವಡಿಸಲು ಜಂಟಿ ಪ್ರಯತ್ನಗಳನ್ನು ನಡೆಸಬೇಕಾಗಿದೆ ಎಂದರು.

ಬ್ರಿಕ್ಸ್‌ ರಾಷ್ಟ್ರಗಳ ಜನರ ಸಬಲೀ ಕರಣಕ್ಕೆ, ಅಸಮತೋಲನ, ನಿರು ದ್ಯೋಗ  ಡಿಜಿಟಲ್‌ ಕ್ರಾಂತಿ ಫಲ ಎಲ್ಲರಿಗೂ ತಲುಪುವಂತೆ ಮಾಡಲು ಡಿಜಿಟಲ್‌ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಇದಕ್ಕೆ ರಚನಾತ್ಮಕ ಕಾರ್ಯತಂತ್ರ ರಚಿಸಬೇಕಾಗುತ್ತದೆ ಎಂದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT