ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಫಿ ಪದ್ಯಗಳ ಕನ್ನಡ ಪುಟ

ಸೋಷಿಯಲ್ ಮೀಡಿಯಾ
Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದೇವರು ಇದ್ದಾನೋ ಇಲ್ಲವೋ, ಆದರೆ ನಮ್ಮದೊಂದು ಕೋರಿಕೆ, ಗೋಗರೆತ ಇದ್ದೇ ಇರುತ್ತದೆ. ದುಃಖ– ಖುಷಿಯನ್ನು ಯಾರ ಜತೆಗೂ ಹಂಚಿಕೊಳ್ಳಲು ಸಾಧ್ಯವಾಗದಾಗ ನಮಗೆ ನಾವೇ, ಆತ್ಮದೊಂದಿಗೆ ಸಂಭಾಷಿಸುತ್ತೇವೆ. ಎದೆಯ ನೋವೇ ಹಾಡಾಗುತ್ತದೆ.

ಅಧ್ಯಾತ್ಮ, ತತ್ವಜ್ಞಾನದ ರಸಗಳು ನಮ್ಮನ್ನು ಎಚ್ಚರಿಸುತ್ತಾ, ಎಲ್ಲವನ್ನು ಮರೆಸುವ ಕಾಲವಾಗುತ್ತದೆ. ಅನಂತರದಲ್ಲಿ  ಭಾವಗಳೊಂದಿಗೆ ವಿಹರಿಸುವಾಗ ಬದುಕು ಕಾವ್ಯಮಯವಾಗುತ್ತದೆ. ಇಂತಹ ಅಧ್ಯಾತ್ಮಿಕ ಅನುಭೂತಿಯ ಜನಪ್ರಿಯ ಕಾವ್ಯ ರೂಪ ‘ಸೂಫಿ’ ಪದ್ಯಗಳು.

‘ಸೂಫಿಜಂ’ ಎಂಬ ಈ ಅಧ್ಯಾತ್ಮ ಕಾವ್ಯ ಕವಲೊಡೆದ ದಾರಿಗಳು ಕೌತುಕ ಹುಟ್ಟಿಸುತ್ತವೆ. ಈ ಪದ್ಯಗಳು ಇಂದಿನ 4ಜಿ ಕಾಲಕ್ಕೂ ಜನಪ್ರಿಯಗೊಳ್ಳುತ್ತಿರುವುದು ಖುಷಿಯ ಸಂಗತಿ. 

‘ಸೂಫಿ ನೋಟ’ ಈ ಹೆಸರಿನ ಪುಟ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಆರಂಭಗೊಂಡಿದೆ. ರಾಬಿಯಾ ಅಲ್ ಅದವಿಯಾ,  ಲಲ್ಲಾ ಆರೀಫಾ, ಬಾಬಾ ಷೇಕ್ ಫರೀದ್, ಬಾಬಾ ತಾಹೀರ, ಜಲಾಲುದ್ದೀನ್ ರೂಮಿ, ಬಾಬಾ ಷೇಕ್ ಫರೀದ್, ಸನಾಯಿ ಅವರಂತಹ ಹೆಸರಾಂತ ಕವಿಗಳ ಪದ್ಯಗಳ ಕನ್ನಡಾನುವಾದ ‘ಸೂಫಿ ನೋಟ’ದಲ್ಲಿ ಲಭ್ಯ. ಕೇವಲ 400 ಲೈಕ್‌ಗಳನ್ನು ಪಡೆದಿದ್ದರೂ, ಪುಟವನ್ನು ಗ್ರಹಿಸಿರುವವರು ಗಂಭೀರವಾಗಿ ಪದ್ಯಗಳನ್ನು ಆಸ್ವಾದಿಸುತ್ತಿದ್ದಾರೆ.

ಕೆಲ ಕವನದ ಹೂರಣದೊಳಗೆ ಬರುವ ಒಂದು ಎಳೆ ಹಸಿ ಪ್ರೇಮ, ಒಣ ಕಣ್ಣೀರು, ಬೊಗಸೆ ನೋವು ಇವೆಲ್ಲವೂ ರೂಪಕವಾಗಿ ಬಂದು ಹೋಗುವಾಗ ಉರ್ದು ಭಾಷೆಯ ಭಾವಾನುವಾದ ಸಾರ್ಥಕವಾಗಿ ಕನ್ನಡೀಕರಣವಾಗಿದೆ.

ಪುಟದ ಕೊಂಡಿ– facebook.com/ಸೂಫಿ-ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT