ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು

ನಾಲ್ಕು ಮಸೂದೆಗಳಿಗೆ ಅಂಗೀಕಾರ
Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿ: ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಹೆಸರು ಇನ್ನುಮುಂದೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಬದಲಾಗಲಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳನ್ನು ವಿಧಾನ ಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ವಿವಿ ಮಸೂದೆ ಅನ್ವಯ ಮಹಿಳಾ ವಿವಿ ಹೆಸರು ಬದಲಾಗಲಿದೆ.

ರಾಜ್ಯದ ಹನ್ನೆರಡು ನಗರಗಳ ಹೆಸರುಗಳು ಇನ್ನು ಅಧಿಕೃತವಾಗಿ ಬದಲಾಗಲಿವೆ. ಈ ಕುರಿತ ಕರ್ನಾಟಕದ ಕೆಲವು ಸ್ಥಳಗಳ ಹೆಸರು ಬದಲಾಯಿಸುವ ಮಸೂದೆಗೆ ವಿಧಾನ ಸಭೆ ಒಪ್ಪಿಗೆ ನೀಡಿತು. ಬೆಂಗಳೂರ್ ಇನ್ನು ಮುಂದೆ ಬೆಂಗಳೂರು ಎಂದಾಗಲಿದ್ದು ಮಂಗಳೂರ್-ಮಂಗಳೂರು ಎಂದೂ, ಬೆಳ್ಳಾರಿ- ಬಳ್ಳಾರಿ ಎಂದೂ, ಬಿಜಾಪುರ- ವಿಜಯಪುರ, ಬೆಳಗಾಂ- ಬೆಳಗಾವಿ, ಚಿಕ್ಕಮಗಳೂರ್-ಚಿಕ್ಕಮಗಳೂರು, ಗುಲ್ಬರ್ಗಾ- ಕಲಬುರ್ಗಿ, ಮೈಸೂರ್-ಮೈಸೂರು, ಹೊಸಪೇಟ್-ಹೊಸಪೇಟೆ, ಶಿಮೊಗ-ಶಿವಮೊಗ್ಗ, ಹುಬ್ಳಿ-ಹುಬ್ಬಳ್ಳಿ, ತುಮಕೂರ್-ತುಮಕೂರು ಎಂದು ಬದಲಾಗಿದೆ.

ಅಲ್ಲದೆ, ಸದನದಲ್ಲಿ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆಯನ್ನು ಕೂಡ ಅಂಗೀಕರಿಸಲಾಯಿತು. ಅದರನ್ವಯ ‘ಬೆಂಗಳೂರು ನಗರ ಪುರಸಭಾ – ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ- ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ, ನೈರ್ಮಲ್ಯ ಮಂಡಲಿ ಅಥವಾ ಮಂಡಲ ಪಂಚಾಯ್ತಿ- ಪಟ್ಟಣ ಪಂಚಾಯಿತಿ ಎಂಬ ಪದ ಬಳಕೆಯಾಗಲಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಮಸೂದೆಯನ್ನೂ ಅಂಗೀಕರಿಸಲಾಯಿತು. ಅದರನ್ವಯ ಎಲ್ಲ ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ನೇಮಕಾತಿಗಳು, ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಯನ್ನು ಕೌನ್ಸೆಲಿಂಗ್ ಮೂಲಕವೇ ಮಾಡಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT