ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ದೇಶಭಕ್ತಿಗೆ ಪಕ್ಷಗಳ ಪಟ್ಟ ಕಟ್ಟಬಾರದು. ಉಗ್ರಗಾಮಿ ವಿರುದ್ಧದ ಸರ್ಜಿಕಲ್ ದಾಳಿಯನ್ನು ಮೆಚ್ಚಲು ಪಕ್ಷ ರಾಜಕೀಯ ಅಡ್ಡಿಯಾಗಬಾರದು’–ಹೀಗೆಂದು ಡಾ.ಬರಗೂರು ರಾಮಚಂದ್ರಪ್ಪ ಶುಕ್ರವಾರ ಬಲವಾಗಿ ಪ್ರತಿಪಾದಿಸಿದರು.

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 50 ನಿಮಿಷ ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು ‘ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚಿದರೆ ನಾವು ಬಿಜೆಪಿಯಾಗುವುದಿಲ್ಲ. ಅನ್ನ ಭಾಗ್ಯ ಯೋಜನೆ ಇಷ್ಟವೆಂದರೆ ಕಾಂಗ್ರೆಸ್ ಆಗುವುದಿಲ್ಲ. ಇಷ್ಟವಾದದನ್ನು ಇಷ್ಟ ಎಂದು ಹೇಳಲು ಬಿಜೆಪಿ ಅಥವಾ ಕಾಂಗ್ರೆಸ್ ಎರಡೂ ಆಗಬೇಕಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

‘ದೇಶಭಕ್ತಿಯ ಬಗ್ಗೆ ಇತ್ತೀಚಿಗೆ ನಡೆಯುತ್ತಿರುವ ಚರ್ಚೆಯಲ್ಲಿನ ಅನ್ಯಾರ್ಥ, ಅಪಾರ್ಥಗಳು ಅನರ್ಥಕ್ಕೆ ಕಾರಣವಾಗುತ್ತಿವೆ. ದೇಶಭಕ್ತಿ ವಿಷಯದಲ್ಲಿ ರಾಜಿಯಾಗಬಾರದು; ದೇಶದ ಪ್ರತಿ ಪ್ರಜೆಯದ್ದೂ ದೇಶಭಕ್ತಿ ಬದ್ಧತೆಯನ್ನೊಳಗೊಂಡ ವ್ಯಕ್ತಿತ್ವವಾಗಿರಬೇಕು. ಯಾವ ಪಕ್ಷ, ಯಾವ ಧರ್ಮ ಎಂದು ನೋಡಿ ದೇಶಭಕ್ತಿಯ ಮಾನದಂಡವನ್ನು ನಿರ್ಧರಿಸಬಾರದು. ಬಹುಮುಖ್ಯವಾಗಿ ನಮ್ಮ ಸೈನಿಕರ ತ್ಯಾಗ ಕಡೆಗಣಿಸುವಷ್ಟು ಕುಬ್ಜರಾಗಬಾರದು. ಸೈನಿಕರು ಗಡಿಕಾಯುತ್ತ ಅನುಭವಿಸುವ ಪರಕೀಯತೆಯ ಅನುಭವವನ್ನು ನಮ್ಮದಾಗಿಸಿಕೊಳ್ಳುವುದರಲ್ಲಿ ಶ್ರೇಷ್ಠ ಮಾದರಿಯ ದೇಶಭಕ್ತಿಯಿದೆಯೆಂದು ನನ್ನ ಭಾವನೆ’ ಎಂದರು.

‘ದೇಶದ ಹೊರಗಿನ ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚುತ್ತಲೇ ದೇಶದ ಒಳಗಿನ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ನಾವು ವಿರೋಧಿಸಬೇಕು. ಶತ ಶತಮಾನದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ಎದುರಿಸಿ ಮಾನವೀಯ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು. ಈ ಬದ್ಧತೆಯನ್ನು ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಕಾಣಬೇಕು. ಸಾಮಾಜಿಕ ಸರ್ಜಿಕಲ್ ದಾಳಿಗೆ ಎದುರಾಗಿ ನಿಂತ ಕನ್ನಡ ಸಂವೇದನೆಯ ಧೀಮಂತ ಮೌಲ್ಯವನ್ನು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಕನ್ನಡ ಸಾಹಿತ್ಯದ ಓದು ವ್ಯರ್ಥವಾಗುತ್ತದೆ’ ಎಂದು ತಮ್ಮ ನಿಲುವನ್ನು ಸ್ಪಷ್ಟವಾಗಿಯೇ ಹೇಳಿದರು.

‘ಇಂದು ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆಗಳು ಒಟ್ಟಿಗೇ ವಿಜೃಂಭಿಸುತ್ತಿವೆ. ನಮಗೆ ಭಯೋತ್ಪಾದನೆಯೂ ಬೇಡ; ಯುದ್ಧೋತ್ಪಾದನೆಯೂ ಬೇಡ. ಧರ್ಮ-ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕುವ ಕೋಮುವಾದವೂ ಬೇಡ’ ಎಂದು ಖಚಿತ ಧ್ವನಿಯಲ್ಲಿ ಹೇಳಿದರು.

ಸರ್ಜಿಕಲ್ ದಾಳಿಗೆ ದಲಿತರು ತುತ್ತು: ‘ಸಾವಿರಾರು ವರ್ಷಗಳ ಸಾಮಾಜಿಕ ಸರ್ಜಿಕಲ್ ದಾಳಿಗೆ ತುತ್ತಾದವರು ಈ ದೇಶದ ದಲಿತರು. ಈಗಲೂ ನಮ್ಮ ದೇಶದಲ್ಲಿ 1.78ಕೋಟಿ ದಲಿತರು ಕೈಯಲ್ಲಿ ಮಲ ಎತ್ತುತ್ತಿದ್ದಾರೆ. 8.82 ಕೋಟಿ ಜನ ದಲಿತರು ಚರಂಡಿ ಇತ್ಯಾದಿಗಳಿಗೆ ಮಲ ಸಾಗಿಸುತ್ತಿದ್ದಾರೆ. ದಲಿತ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದೆ. ಮನುಷ್ಯರನ್ನೇ ಮುಟ್ಟದ ಸಾಮಾಜಿಕ ಸಂವಿಧಾನವನ್ನು ವಿಸ್ತರಿಸುವ ಕಾರ್ಯ ನಿಲ್ಲದೆ ಹೋದರೆ ಅಭಿವೃದ್ಧಿಗೆ ಏನರ್ಥ? ನಮ್ಮ ಸನಾತನ `ಸಾಮಾಜಿಕ ಸಂವಿಧಾನವು’ ಆಧುನಿಕ `ರಾಜಕೀಯ ಸಂವಿಧಾನ’ಕ್ಕೆ ಸವಾಲೊಡ್ಡುವಷ್ಟು ಕೆಟ್ಟ ಶಕ್ತಿ ಪಡೆದಿದೆಯೆಂದ ಮೇಲೆ ಮಾನವೀಯತೆಗೆ ಅಪಮಾನವಲ್ಲವೆ’? ಎನ್ನುತ್ತಲೇ ಸನಾತನಿಗಳಿಗೆ ಕುಟುಕಿದರು.

ಪ್ರತ್ಯೇಕತೆ ಕೇಳುವವರಿಗೆ ವಿವೇಕದ ಮಾತು: ‘ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ’ ಎನ್ನುವ ಮೂಲಕ ಪ್ರತ್ಯೇಕ ರಾಜ್ಯ ಕೇಳುವವರಿಗೆ ವಿವೇಕ ಹೇಳಿದರು.

‘ಜಾತಿ, ವರ್ಣ, ಲಿಂಗತ್ವ ಅಸಮಾನತೆಗಳನ್ನು ಆಧಾರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು; ಪ್ರತ್ಯೇಕ ರಾಜ್ಯವಲ್ಲ. ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು’ ಎಂದು ಆಶಿಸಿದರು.

ಸರ್ಕಾರಕ್ಕೆ ಸಲಹೆ: ‘ತಕ್ಷಣಕ್ಕೆ ಸರ್ಕಾರ ಮಾಡಬೇಕಾದ ಕೆಲಸ ಒಂದಿದೆ. ಕರ್ನಾಟಕದ ಏಕೀಕರಣವಾದ ಈ ಅರವತ್ತು ವರ್ಷಗಳಲ್ಲಿ ವಿವಿಧ ಪ್ರದೇಶಗಳಿಗೆ ಒದಗಿಸಿದ ಹಣ, ಕೈಗೊಂಡ ಯೋಜನೆಗಳು, ಅಭಿವೃದ್ಧಿಯ ಹಂತಗಳು, ಸಾಮಾಜಿಕ ಸಾಂಸ್ಕೃತಿಕ ಪ್ರತಿನಿಧೀಕರಣ, ಮಹಿಳಾ ಪ್ರಾತಿನಿಧ್ಯ ಮುಂತಾದ ಸಮಸ್ತ ಸಂಗತಿಗಳನ್ನು ಒಳಗೊಂಡ ಹೊತ್ತಿಗೆಯೊಂದನ್ನು ಹೊತ್ತಿಗೆ ಸರಿಯಾಗಿ ಸಿದ್ಧಪಡಿಸಿ ಮುಂದಿನ ವಿಶ್ವಕನ್ನಡ ಸಮ್ಮೇಳನದ ವೇಳೆಗೆ ಬಿಡುಗಡೆಗೊಳಿಸಬೇಕು. ನಾನು ಬೇಕಾಗಿಯೇ ಶ್ವೇತಪತ್ರ ಎಂಬ ಪದವನ್ನು ಬಳಸಿಲ್ಲ. ಶ್ವೇತಪತ್ರವೆನ್ನುವುದು ಈಗ ರಾಜಕೀಯ ಪರಿಭಾಷೆಯಾಗಿಬಿಟ್ಟಿದೆ. ಆದ್ದರಿಂದ ನಮಗೆ ಬೇಕಾದ್ದು ಪತ್ರವಲ್ಲ; ಪುಸ್ತಕ; ಈ ಮೂಲಕ ಪ್ರಗತಿ ಪ್ರಾತಿನಿಧ್ಯದ ಕುರಿತ ಚರ್ಚೆ, ಚಿಂತನೆ ನಡೆಯ ಬೇಕು; ಅಸಮತೋಲನ ಮತ್ತು ಅಸಮಾಧಾನಗಳ ಕಾರಣಗಳನ್ನು ಕಂಡುಕೊಂಡು ಕರ್ನಾಟಕದ ಏಕೀಕರಣಕ್ಕೆ ಆರ್ಥಿಕತೆಯನ್ನಷ್ಟೇ ಅಲ್ಲ ಸಾರ್ಥಕತೆಯನ್ನು ತಂದುಕೊಡಬೇಕು. ಸಾಮಾಜಿಕ ನ್ಯಾಯ ನೆಲೆಗೊಳ್ಳ ಬೇಕು; ಸಮತೆಯ ಸಂವೇದನೆ ನಮ್ಮ ಬಲವಾಗಬೇಕು’ ಎಂದು ಪ್ರತಿಪಾದಿಸಿರು.

ಸಚಿವಾಲಯ ವಿಕೇಂದ್ರಿಕರಣ ಸಲಹೆ: ಅಭಿವೃದ್ಧಿಯ ಅಸಮತೋಲನವನ್ನು ತಪ್ಪಿಸಲು, ಜನಮುಖಿ ನ್ಯಾಯದ ವೇಗವನ್ನು ವೃದ್ಧಿಸಲು, ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕ ರಣಗೊಳಿಸಬೇಕು. ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ಸಚಿವಾಲಯಗಳನ್ನು ಸ್ಥಾಪಿಸಬೇಕು. ಈ ಮೂಲಕ ಅಲ್ಲಿಯ ಜನರಿಗೆ ಹತ್ತಿರ ಆಗಲು ಸಾಧ್ಯ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎನ್ನುವುದೇ ಆದರೆ, ಕರ್ನಾಟಕದಲ್ಲಿ ನಾಲ್ಕು ಸಚಿವಾಲಯಗಳನ್ನು ಮಾಡಿ, ಈ ಭಾಗದ ಜನರು ನರಳುವುದರಿಂದ ಹೊರತರಬೇಕು’ ಎಂದ ಬರಗೂರು, ‘ಬೆಂಗಳೂರಿನಲ್ಲಿ ಮೇಲು ಸೇತುವೆಗಳನ್ನು ನಿರ್ಮಾಣ ಮಾಡುತ್ತೇವೆ. ಮೇಲು ಸೇತುವೆಗಳ ಜೊತೆಗೆ ಇಡೀ ಕರ್ನಾಟಕದಲ್ಲಿ ಮನೋಸೇತುವೆಗಳನ್ನು ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿದ್ದೇವೆ. ಮನೋ ಸೇತುವೆ ನಿರ್ಮಾಣ ಮಾಡಿದರೆ, ಈ ಭಾಗದ ಜನರ ಪರಕೀಯತೆ ನಾಶವಾಗುತ್ತದೆ’ ಎಂದಾಗ ಸಭಿಕರಿಂದ ಭಾರೀ ಚಪ್ಪಾಳೆಯೊಂದಿಗೆ ಅನುಮೋದಿಸಿದರು.

ರಾಜ್ಯಕ್ಕೆ ಶೈಕ್ಷಣಿಕ, ಆರ್ಥಿಕ ಸ್ವಾಯತ್ತೆ ಇರಬೇಕು. ಅಂಥ ಸನ್ನಿವೇಶವನ್ನು ಸೃಷ್ಟಿ ಮಾಡಲು ಪಕ್ಷಾತೀತ ರಾಜಕೀಯ ಹಕ್ಕೊತ್ತಾಯ ಬೇಕು. ರಾಜ್ಯಗಳ ಸ್ವಾಯತ್ತೆ ಮತ್ತು ರಾಜ್ಯದೊಳಗಿನ ಸ್ವಾಯತ್ತೆಯೂ ಬೇಕು. ರಾಜ್ಯಗಳ ಸ್ವಾಯತ್ತೆ ಕಂಡುಕೊಂಡ ಮೇಲೆ, ರಾಜ್ಯದೊಳಗಿನ ಸ್ವಾಯತ್ತೆ ಹೊಂದಬೇಕು. ಇದರಿಂದ ಬೇರೆ ಬೇರೆ ಭಾಗದ ಜನರು ಪರಕೀಯತೆಯಿಂದ ನರಳುವುದು ತಪ್ಪುತ್ತದೆ ’ಎಂದರು.

ಮಾತೃಭಾಷೆ ಅಥವಾ ರಾಜ್ಯಭಾಷಾ ಶಿಕ್ಷಣ ಮಾಧ್ಯಮ: ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಘಟನಾವಳಿಗಳಲ್ಲಿ ಉದಾಹರಿಸಲೇಬೇಕಾದ ಇತ್ತೀಚಿನ ಮುಖ್ಯ ಪ್ರಕರಣ- ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮದ ಅಳವಡಿಕೆ ಸಂಬಂಧಿಸಿದೆ. ಕರ್ನಾಟಕ ಶಿಕ್ಷಣ ಅಧಿನಿಯಮದ ಮೂರನೇ ಪರಿಚ್ಛೇದವು ಸಾಮಾನ್ಯ ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲ ಹಂತದ ಶಿಕ್ಷಣವನ್ನು ಕ್ರಮಬದ್ಧಗೊಳಿ ಸುವ ಅಧಿಕಾರವನ್ನು ರಾಜ್ಯಸರ್ಕಾರಕ್ಕೆ ನೀಡಿದೆ. ಇದೇ ಅಧಿನಿಯಮದ ಏಳನೇ ಪರಿಚ್ಛೇದವು ಯಾವುದೇ ರೀತಿಯ ಪಠ್ಯಕ್ರಮವನ್ನು ನಿಗದಿಗೊಳಿಸುವ ಅಧಿಕಾರವನ್ನೂ ರಾಜ್ಯಸರ್ಕಾರಕ್ಕೆ ನೀಡಿದೆ. ಇದು ರಾಜ್ಯದ ವಿಧಾನ ಮಂಡಲವು ಅಂಗೀಕರಿಸಿದ ಕಾಯಿದೆ. ಆದರೂ ಇದರ ಅನುಷ್ಠಾನಕ್ಕೆ ಅನೇಕ ಅಡ್ಡಿಗಳು ಎದುರಾಗುತ್ತಿದೆ. ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮವನ್ನೂ ರಾಜ್ಯ ಸರ್ಕಾರವು ನಿರ್ಧರಿಸಲಾಗ ದಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿಬಿಟ್ಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿರು.

ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಸರ್ಕಾರವು ಕಡ್ಡಾಯಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಇದು ದೇಶದ ಎಲ್ಲ ಮಾತೃಭಾಷೆ ಹಾಗೂ ರಾಜ್ಯ ಭಾಷೆಗಳಿಗೆ ಆಘಾತಕಾರಿಯಾಗುವ ತೀರ್ಪು. ಕರ್ನಾಟಕ ಸರ್ಕಾರವು ರಾಜ್ಯದ ಉಚ್ಚನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ಬಗ್ಗೆ ನೀಡಿದ ಈ ತೀರ್ಪು ಇಡೀ ದೇಶದ ಪ್ರಾಥಮಿಕ ಶಿಕ್ಷಣ ಮತ್ತು ರಾಜ್ಯಗಳ ಹಕ್ಕಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ. ವಿಶೇಷ ಮತ್ತು ವಿಚಿತ್ರವೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆಯ ಮಾಧ್ಯಮ ಕಡ್ಡಾಯವಾಗಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಹೋರಾಡಿದ ಏಕೈಕ ರಾಜ್ಯವೆಂದರೆ ಕರ್ನಾಟಕ’ ಅಭಿಮಾನಪಟ್ಟರು.

ವೇದನೆ, ಸಂವೇದನೆ
‘ನನ್ನ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ `ವೇದನೆ’ಯಿದೆ’ ಎನ್ನುತ್ತಲೇ ಬರಗೂರು ತಮ್ಮ ಭಾಷಣವನ್ನು ಆರಂಭಿಸಿದರು.

‘ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು. ಅಂದು ಆಗಸ್ಟ್ 30-2015ರ ಬೆಳಿಗ್ಗೆ. ಸಾಂಸ್ಕೃತಿಕ ಲೋಕ ದಿಗ್ಭ್ರಮೆಗೊಂಡು ಮೂಕವಾದ ಮುಂಜಾವು. ಅದಕ್ಕೆ ಕಾರಣ ಎಂ.ಎಂ. ಕಲಬುರ್ಗಿಯವರ ಸಾವು. ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ನಿಧಾನದ್ರೋಹದ ಕಳಂಕದಿಂದ ಮುಕ್ತವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಹತ್ಯೆ ಆರೋಪಿಗಳ ಪತ್ತೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಬಂಡಾಯದ ಸಂಕೇತ!: ಡಾ.ಬರಗೂರು ರಾಮಚಂದ್ರಪ್ಪ ಬಂಡಾಯ ಸಾಹಿತಿ ಎಂದೇ ಹೆಸರಾದವರು. ಇದನ್ನು ಅಭಿವ್ಯಕ್ತಪಡಿಸಲೋ ಏನೋ ಎನ್ನುವಂತೆ ಕಪ್ಪುಬಣ್ಣದ ಶರ್ಟ್ ಧರಿಸಿದ್ದರು. ಇದನ್ನು ಗಮನಿಸಿದ ಕೆಲವರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

ಸ್ನೇಹಿತರೇ ನನ್ನ ಸಂಪತ್ತು: ಬರಗೂರು
ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಮಾಹಿತಿ ಸಿಕ್ಕ ಕೂಡಲೇ ನನ್ನ ನೆನಪಿಗೆ ಬಂದವರು- ನನಗೆ ಅಕ್ಷರ ಕಲಿಸಿದ ಗುರುಗಳು ಮತ್ತು ಶಾಲೆಗೆ ಸೇರಿಸಿದ ತಾಯಿ, ತಂದೆ ಆನಂತರ ನನ್ನನ್ನು ಬೆಳೆಸಿದ ಪ್ರಗತಿ ಪರ ಚಳವಳಿಗಳು, ಸಾರ್ವಜನಿಕ ಬದುಕಿನ ಬವಣೆ ಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬ ವರ್ಗ ಮತ್ತು ಸ್ನೇಹಿತರು. ಒಂದೇ ವಾಕ್ಯ ದಲ್ಲಿ ಹೇಳುವುದಾದರೆ ‘ಸ್ನೇಹಿತರೇ ನನ್ನ ಸಂಪತ್ತು’.

ನೂರಾರು ಕವಿತೆಗಳನ್ನು ಬದುಕಿದಳು
‘ನಮ್ಮ ಸಮಾಜಕ್ಕೆ ತಾಯ್ತನ ಬೇಕು. ಸರ್ಕಾರಕ್ಕೆ ತಾಯ್ತನ ಬೇಕು. ಸಾಹಿತ್ಯ - ಸಂಸ್ಕೃತಿಗೆ ತಾಯ್ತನ ಬೇಕು. ನಾವೆಲ್ಲ ತಾಯೀಕರಣಗೊಳ್ಳ ಬೇಕು. ತಾಯಿಯೆಂದರೆ ಮಮತೆ ಮತ್ತು ಸಮತೆ. ಈ ಸಮತಾಮಯಿ ತಾಯಿ ಸಂಕಟಪಡುತ್ತಾಳೆ; ಸಂತಳಾಗುತ್ತಾಳೆ; ಸಿಟ್ಟಾಗುತ್ತಾಳೆ; ಸ್ಫೋಟಿಸುತ್ತಾಳೆ. ಅಂತಃಕರಣವಾಗುತ್ತಾಳೆ. ಜಾತೀಕರಣ ಮತ್ತು ಜಾಗತೀಕರಣಕ್ಕೆ ಎದುರಾಗುವ ‘ತಾಯೀ ಕರಣ’ವಾಗುತ್ತಾಳೆ. ನನಗೀಗ ಖಲೀಲ್ ಗಿಬ್ರಾನ್ ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. ಆತ ಹೇಳಿದ: ’ನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ. ಆದರೆ ನೂರಾರು ಕವಿತೆಗಳನ್ನು ಬದುಕಿದಳು. ನಿಜ, ನಮ್ಮಲ್ಲೂ ಬರೆಯದ ಬರಹಗಾರರಿದ್ದಾರೆ. ನರ್ತಿಸದ ನೃತ್ಯಗಾರರಿದ್ದಾರೆ. ಹಾಡದ ಹಾಡುಗಾರರಿದ್ದಾರೆ; ಅಭಿನಯಿಸದ ಕಲಾವಿದರಿದ್ದಾರೆ. ಆದರೆ ಇವರೆಲ್ಲ ನೂರಾರು ಕವಿತೆಗಳನ್ನು ಬದುಕುತ್ತಿದ್ದಾರೆ’ ಎಂದು ಬರಗೂರು ಭಾವುಕರಾಗಿ ನುಡಿದರು.

‘ಸಾಂಸ್ಕೃತಿಕ ಕ್ಷೇತ್ರದ ನಾವು ನೂರಾರು ಕವಿತೆಗಳನ್ನು ಬದುಕುವ ಈ ಭಾವ ಬಂಧುಗಳನ್ನು ಬದುಕಿಸಿಕೊಳ್ಳಬೇಕು. ಸಾವಿರಾರು ಕವಿತೆಗಳನ್ನು ಬದುಕುವ ಕರ್ನಾಟಕವನ್ನು ಕಟ್ಟಬೇಕು; ಕರ್ನಾಟಕ ತಾಯೀಕರಣಗೊಳ್ಳಬೇಕು. ಕನ್ನಡ ಸಂವೇದನೆಯಲ್ಲಿ ಸಮತೆಯ ಸಾಮಾಜಿಕ ಆಯಾಮ ಸದಾ ಇರಬೇಕು. ತಾಯೀಕರಣಗೊಂಡ ಸಮತೆಯ ಕರ್ನಾಟಕ ನಮ್ಮದಾಗಬೇಕು’ ಎಂದು ಬಯಸಿದರು.

ಸಮ್ಮೇಳನದಲ್ಲಿ ಸ್ವಾರಸ್ಯ
ನನ್ನ ಸುದೈವ: ತನ್ವೀರ್
‘2005ರಲ್ಲಿ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವಾಗಿದ್ದೆ. ಆ ವರ್ಷದ ಮೈಸೂರು ದಸರಾವನ್ನು ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದ್ದರು. ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವ. ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅವರೇ ವಹಿಸಿದ್ದಾರೆ. ಹೀಗಾಗಿ ನಾನು ಸುದೈವಿ’ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.

ಕಾಲಿಗೆ ಬಿದ್ದ ಶಾಸಕ
ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಸ್ವಲ್ಪ ತಡವಾಗಿ ಬಂದರು. ಮುಖ್ಯಮಂತ್ರಿ ಅವರ ಕೈಕುಲುಕಿದರು. ಸಮ್ಮೇಳನದ ಸರ್ವಾಧ್ಯಕ್ಷ ಬರಗೂರು ಅವರ ಕಾಲಿಗೆ ಎರಗಿ ನಮಸ್ಕರಿಸಿ, ಆಸೀನರಾದರು.

ಸನ್ಮಾನಕ್ಕೆ ಆಕ್ಷೇಪ
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳ ಸನ್ಮಾನ ಸಮಾ ರಂಭ ನಡೆಯುತ್ತಿತ್ತು. ಇದು ಸುದೀರ್ಘವಾಯಿತು ಎಂದು ಸಭಿ ಕರು ಗದ್ದಲ ಆರಂಭಿಸಿದರು. ಸಭಿಕರ ಆಕ್ಷೇಪಕ್ಕೆ ಮಣಿದ ಸಂಘಟಕರು ಕಾರ್ಯಕ್ರಮ ಮೊಟಕುಗೊಳಿಸಿದರು.

ಆರಿದ ದೀಪ ಬೆಳಗಿಸಿದರು
ಉದ್ಘಾಟನೆಯ ನಂತರ ದೀಪ ವನ್ನು ವೇದಿಕೆಯ ಮಧ್ಯಭಾಗದಿಂದ ತೆರವುಗೊಳಿಸ ಲಾಗುತ್ತಿತ್ತು. ಆಗ, ದೀಪ ವಾಲಿ ಎಣ್ಣೆ ಸೋರಿತು. ದೀಪ ನಂದಿತು. ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಅಲ್ಲಿಗೆ ದೌಡಾಯಿಸಿದ ಸಚಿವೆ ಉಮಾಶ್ರೀ ದೀಪದ ಬತ್ತಿಗಳನ್ನು ಸರಿಪಡಿಸಿದರು. ಸಚಿವ ತನ್ವೀರ್ ಸೇಠ್ ದೀಪ ಬೆಳಗಿಸಿದರು.

ಸೀನಿಗೂ ಕೇಕೆ!
ಉದ್ಘಾಟನಾ ಭಾಷಣ ಮಾಡುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ ಸೀನಿದರು.. ಸಭಿಕರು ಆಗಲೂ ಕೇಕೆ ಹಾಕುವ ಮೂಲಕ ನಗೆಯ ಅಲೆ ಎಬ್ಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.