ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನುಡಿಗಳ ವೈವಿಧ್ಯ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನದ ವೇದಿಕೆಯೊಂದರಲ್ಲಿ ಸ್ವಾಗತ ಭಾಷಣ ಮಾಡುತ್ತಿದ್ದವರು ‘ಆದರ’ ಎಂಬ ಪದವನ್ನು ‘ಹಾದರ’ ಎನ್ನುತ್ತಿದ್ದುದಕ್ಕೆ ಸಭಿಕರು ಆಕ್ಷೇಪವೆತ್ತಿದಾಗ, ಅವರು ಆ ಪದವನ್ನೇ ಕೈಬಿಟ್ಟು ‘ಪ್ರೀತಿಪೂರ್ವಕ/ ಆತ್ಮೀಯ’ ಎಂಬ ಪದಗಳಿಗೆ ಮೊರೆಹೋದರೆಂಬ ಸುದ್ದಿ ವರದಿಯಾಗಿದೆ (ಪ್ರ.ವಾ., ಡಿ.4).

ಕರ್ನಾಟಕದ ಉದ್ದಗಲದಲ್ಲಿ ಕನ್ನಡಿಗರ ದಿನಬಳಕೆಯಲ್ಲಿರುವ ಆಡುಮಾತಿನ ಕನ್ನಡ ನುಡಿಸಾಮಗ್ರಿಗಳಾದ ಧ್ವನಿ/ ಪದ/ ವಾಕ್ಯ/ ಅರ್ಥ ರಚನೆಗಳು ವೈವಿಧ್ಯಮಯವಾಗಿವೆ.ಆದುದರಿಂದಲೇ ಕನ್ನಡ ನುಡಿಸಮುದಾಯದಲ್ಲಿ ಬಹುಬಗೆಯ ಪ್ರಾದೇಶಿಕ ಮತ್ತು ಸಾಮಾಜಿಕ ಒಳನುಡಿಗಳು ಬಳಕೆಯಲ್ಲಿವೆ.

ಕನ್ನಡದ ಕೆಲವು ಪ್ರಾದೇಶಿಕ/ ಸಾಮಾಜಿಕ ಉಪಭಾಷೆಗಳಲ್ಲಿ ‘ಹಾಲು/ ಹಣ್ಣು/ ಹಾವು’ ಎಂಬ ಹಕಾರದಿಂದ ಮೊದಲಾಗುವ ಪದಗಳು ‘ಆಲು/ ಅಣ್ಣು/ ಆವು’ ಎಂಬ ಅಕಾರಾದಿಯಾಗಿ ಉಚ್ಚಾರಣೆಗೊಳ್ಳುತ್ತವೆ.

ಇದೇ ರೀತಿ ಅಕಾರಾದಿಯಾದ  ‘ಅಗುಳು/ ಅಗ್ಗ’ ಎಂಬ ಪದಗಳು ‘ಹಗುಳು/ ಹಗ್ಗ’ ಎಂದು ಹಕಾರಾದಿಯಾಗಿಯೂ ಉಚ್ಚಾರಣೆಗೊಳ್ಳುತ್ತವೆ. ಇಲ್ಲಿ ಉಚ್ಚಾರಣೆಗೊಳ್ಳುವ ಹ/ಅ ಎಂಬ ಮಾತಿನ ಧ್ವನಿಗಳ ಬಗ್ಗೆಯೂ ಭಾಷಾ ವಿಜ್ಞಾನಿಗಳು ವಿಶ್ಲೇಷಣೆ ಮಾಡಿ, ಈ ಎರಡು ಧ್ವನಿಗಳಿಗಿಂತ ಬೇರೆಯಾದ ಮತ್ತೊಂದು ಧ್ವನಿಯು ಈ ಪದಗಳ ಆರಂಭದಲ್ಲಿ ಉಚ್ಚಾರಗೊಳ್ಳುತ್ತಿದೆಯೆಂಬುದನ್ನು ಗಮನಿಸಿ, ಅದರ ಸಂಶೋಧನೆಯಲ್ಲಿ ತೊಡಗಿದ್ದಾರೆ.
-ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT