ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಪುಸ್ತಕ ಮಾರಾಟ

ಪುಸ್ತಕ ಮಾರಾಟಕ್ಕೆ ಹೊಡೆತ ನೀಡಿದ ‘ಚಿಲ್ಲರೆ’
Last Updated 4 ಡಿಸೆಂಬರ್ 2016, 19:37 IST
ಅಕ್ಷರ ಗಾತ್ರ

ಕೃಷಿ ವಿಶ್ವವಿದ್ಯಾಲಯ ಆವರಣ (ರಾಯ ಚೂರು): ಸಾಹಿತ್ಯ ಸಮ್ಮೇಳನದಲ್ಲಿನ ಪುಸ್ತಕ ಮಳಿಗೆಯವರ ಮುಖದಲ್ಲಿ ಈ ಬಾರಿ ಅಂತಹ ಖುಷಿ ಕಾಣಲಿಲ್ಲ. ಚಿಲ್ಲರೆ ಸೇರಿದಂತೆ  ಹಲವಾರು ಕಾರಣಗಳಿಂದ ತಾವು ತೊಂದರೆ ಎದುರಿಸಬೇಕಾಯಿತು ಎಂದು ಪ್ರಕಾಶಕರು ಹಾಗೂ ಮಾರಾಟ ಗಾರರು ಬೇಸರ ವ್ಯಕ್ತಪಡಿಸಿದರು.

ಮೊದಲ ಎರಡು ದಿನ ನಿರೀಕ್ಷೆ ಯಂತೆ ವಹಿವಾಟು ನಡೆಯಲಿಲ್ಲ. ಕೊನೆ ದಿನವಾದ ಭಾನುವಾರವಾ ದರೂ ಚೇತರಿಕೆ ಕಂಡುಬರುತ್ತದೇನೋ ಎಂಬ ಅವರ ನಿರೀಕ್ಷೆಯೂ ಹುಸಿ ಆಯಿತು.

‘ಹಿಂದಿನ ಸಮ್ಮೇಳನಕ್ಕೆ ಹೋಲಿ ಸಿದರೆ ಈ  ಬಾರಿ ಪುಸ್ತಕ ವ್ಯಾಪಾರ ಕಡಿ ಮೆಯಾಗಿದ್ದು, ಸರಾಸರಿ ಶೇ 35ರಷ್ಟು ವಹಿವಾಟು ನಡೆದಿರಬಹುದು’ ಎಂದು ಅಂದಾಜಿಸಿದರು.ಮಾರಾಟ ವಾದವು ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪುಸ್ತಕ ಗಳು ಪಿಡಿಒ, ಪಿಎಸ್‍ಐ ಆಯ್ಕೆ, ಕೆಎಎಸ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸಂಬಂಧಿಸಿದವುಗಳು’ ಎಂದೂ ಮಾರಾಟಗಾರರು ಹೇಳುತ್ತಾರೆ.

ಹಲವೆಡೆ ಜನರು ಎರಡು ಸಾವಿರ ರೂಪಾಯಿಯ ನೋಟು ಹಿಡಿದು ಬಂದು ನೂರು ರೂಪಾಯಿ ಖರೀದಿಗೆ ಮುಂದಾಗುತ್ತಿದ್ದಾಗ ವಿಧಿ ಇಲ್ಲದೆ ಅವರನ್ನು ಬರಿಗೈಯಲ್ಲಿ ಕಳುಹಿಸಿದ್ದಾಗಿ ಹಲವಾರು ಮಳಿಗೆಯವರು ಒಪ್ಪಿ ಕೊಂಡರು. ಹಲವರ ಬಳಿ ಸ್ವೈಪಿಂಗ್ ಯಂತ್ರ ಇದ್ದರೂ ನೆಟ್‍ವರ್ಕ್ ಸಮಸ್ಯೆ ಯಿಂದಾಗಿ ಕಾರ್ಯ ನಿರ್ವಹಿಸಲಿಲ್ಲ.

ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಬಂದಿದ್ದ ಧಾರವಾಡದ ಕ್ಲಾಸಿಕ್ ಸ್ಟಡಿ ಸರ್ಕಲ್ ತಂಡ ತಮ್ಮ ಮೂರು ಮಳಿಗೆಯಲ್ಲಿ ಕಳೆದ ಎರಡು ದಿನಗಳಲ್ಲಿ ₹ 1.5 ಲಕ್ಷದಷ್ಟು ವಹಿವಾಟು ನಡೆಸಿದೆ. ‘ಅಗತ್ಯವಾದಷ್ಟು ಚಿಲ್ಲರೆ ಹಣವನ್ನು ಇಟ್ಟುಕೊಂಡೇ ಬಂದಿದ್ದರಿಂದ ಗ್ರಾಹಕರಿಗೂ ತಮಗೂ ತೊಂದರೆಯಾ ಗಲಿಲ್ಲ’ ಎಂದು ಸಂಸ್ಥೆಯ ಮಂಜುನಾಥ ಮಠಪತಿ ತಿಳಿಸಿದರು.

ಸಪ್ನ ಬುಕ್ ಹೌಸ್‍ನ ಮಾರಾಟ ವ್ಯವಸ್ಥಾಪಕ ಆರ್. ಕುಮಾರಸ್ವಾಮಿ 'ಎರಡೂ ದಿನ ಅಂದಾಜು ₹ 2.75 ಲಕ್ಷ ವಹಿವಾಟು ನಡೆಸಿರುವುದಾಗಿ ತಿಳಿಸಿದರು. ವಸಂತ ಪ್ರಕಾಶನದ ಉಮಾಶಂಕರ್ ಅವರಿಗೆ ಜನರ ಪ್ರತಿಕ್ರಿಯೆ ಸಮಾಧಾನ ತಂದಿದೆ. ಆದರೆ ಪಾರು ಪ್ರಕಾಶನದ ಶಿವಪುತ್ರಪ್ಪ ಅಂಗಡಿ ಹಾಗೂ ಗದುಗಿನ ಗಣೇಶ ಪ್ರಕಾಶನದ ಬಸವರಾಜ ವಡಕಣ್ಣವರ ಅವರು ಪುಸ್ತಕ ಮಳಿಗೆಗೆ ನೀಡಿದ ಸೌಲಭ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನವಕರ್ನಾಟಕ ಪ್ರಕಾ ಶನದ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಲ್ಲಿ ಸ್ವಂತ ಪ್ರಕಾಶನದ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು ಹೆಚ್ಚು ಮಾರಾಟವಾಗಿರುವುದಾಗಿ ಸುರೇಶ್ ತಿಳಿಸಿದರು.

ಮೈಸೂರಿನಲ್ಲಿ ಮಾಡಿ ತೋರಿಸುತ್ತೇವೆ
‘ಪ್ರಧಾನ ವೇದಿಕೆಯನ್ನು ಸುತ್ತುವರಿ ದಂತೆ ವೃತ್ತಾಕಾರದಲ್ಲಿ ಪುಸ್ತಕ ಮಳಿಗೆ ಇರಬೇಕಿತ್ತು. ಇದರಿಂದ ಮಳಿಗೆಯಲ್ಲಿದ್ದವರಿಗೂ ಸಮ್ಮೇಳನದ ವಾತಾವರಣವನ್ನು ಅನುಭವಿಸಲು ಸಾಧ್ಯವಾಗುತ್ತಿತ್ತು’ ಎಂದವರು ಮೈಸೂರಿನ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್.

‘ಎಷ್ಟೋ ಜನರು ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿಯನ್ನು ವಿಚಾರಿಸಿದರು ಅಂದರೆ ಸಾಹಿತ್ಯದ ಬಗೆಗಿರುವ ಅವರ ಆಸಕ್ತಿ ಅರ್ಥವಾಗುತ್ತದೆ ಎಂದ ಅವರು, ತಮ್ಮ ಮಳಿಗೆಯಲ್ಲಿ  ಕುವೆಂಪು ಹಾಗೂ ಪೂರ್ಣ ಚಂದ್ರ ತೇಜಸ್ವಿಗಳ ಕೃತಿಗಳ ಜೊತೆಗೆ ಬರಗೂರರ ಕಾದಂಬರಿಗಳು ಹೆಚ್ಚು ಮಾರಾಟವಾಗಿವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT