ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಆಂಬುಲೆನ್ಸ್‌ ಚಾಲಕನ ಕನ್ನಡ ಪ್ರೇಮ!

ವ್ಯಕ್ತಿ
Last Updated 4 ಡಿಸೆಂಬರ್ 2016, 19:42 IST
ಅಕ್ಷರ ಗಾತ್ರ

-ಜಗನ್ನಾಥ ಡಿ.ಶೇರಿಕಾರ

ರಾಯಚೂರು: ‘ಕನ್ನಡ ನುಡಿಯ ಪ್ರೇಮವೇ ನಮ್ಮ ಕುಟುಂಬದ ಅನ್ನ’–ಇದು ಬೆಂಗಳೂರಿನ ಶಂಕರ್ ಅವರ ಮಾತು. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಧ್ವಜ, ಬ್ಯಾಡ್ಜ್‌, ಶಲ್ಯಗಳನ್ನು ಮಾರಾಟ ಮಾಡುತ್ತಿರುವ ಇವರು, ಬೆಂಗಳೂರಿನ ಭಿಕ್ಷುಕರ ಕಾಲೋ  ನಿಯ ಕುಷ್ಠರೋಗಿಗಳ ಆಸ್ಪತ್ರೆಯ ಆಂಬುಲೆನ್ಸ್‌ನ ಚಾಲಕರಾಗಿದ್ದಾರೆ. ಎಲ್ಲಿಯೇ ಆಗಲಿ,  ಕನ್ನಡ ಉತ್ಸವ ಇರುವುದು ಗೊತ್ತಾದರೆ ಸಾಕು; ಅಲ್ಲಿ ಕುಟುಂಬ ಸಮೇತರಾಗಿ ಹಾಜರಾಗುತ್ತಾರೆ.

‘ಇಲ್ಲಿ ಕನ್ನಡಿಗರು ಧ್ವಜ, ಬ್ಯಾಡ್ಜ್‌, ಶಲ್ಯಗಳನ್ನು ಖರೀದಿಸಲು ಚೌಕಾಸಿ ಮಾಡುತ್ತಾರೆ, ತೆಲುಗು ಭಾಷಿಕರು ಕೇಳಿದಷ್ಟು ಹಣ ನೀಡಿ ಖರೀದಿಸಿದ್ದಾರೆ’ ಎಂದು ಹೇಳಿದರು.‘ನಾವು ಮಾರಾಟ ಮಾಡುವ ಧ್ವಜ, ಕೊರಳಪಟ್ಟಿ, ಬ್ಯಾಡ್ಜ್‌ಗಳನ್ನು ಮನೆಯಲ್ಲಿಯೇ ತಯಾರಿಸುತ್ತೇವೆ. ಕನ್ನಡ ನುಡಿಯ ಅಭಿಮಾನವೇ ನಮ್ಮ ಅನ್ನಕ್ಕೆ ಆಧಾರವಾಗಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT