ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ ಪ್ರಕ್ರಿಯೆಗಳು

Last Updated 4 ಡಿಸೆಂಬರ್ 2016, 19:57 IST
ಅಕ್ಷರ ಗಾತ್ರ

ಜನರು ಪಾಲ್ಗೊಂಡಿದ್ದಾರೆ
ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ಇಂಥ ಸಮ್ಮೇಳನಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ. ಇಲ್ಲಿ ಎಲ್ಲ ಗೋಷ್ಠಿಗಳಲ್ಲೂ ಜನರ ಪಾಲ್ಗೊಳ್ಳುವಿಕೆ ಇತ್ತು. ಹಿರಿಯ ಸಾಹಿತಿಗಳನ್ನು ಕರೆಸುವ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲ. ಇಲ್ಲಿ ಭಾಷೆಯ ಸಮಸ್ಯೆ ಇಲ್ಲ. ಕನ್ನಡ ತೆಲುಗು, ಉರ್ದು ಭಾಷೆಯನ್ನು ಸಹಜವಾಗಿಯೇ ಮಾತನಾಡುತ್ತಾರೆ. ಇಲ್ಲಿನ ಸಮಸ್ಯೆಗಳು ಹೆಚ್ಚು ಆದ್ಯತೆ ಪಡೆಯಬೇಕಿತ್ತು. ಇಲ್ಲಿ ಕೆಲವೊಂದು ಅಂಶಗಳನ್ನು ಪ್ರಸ್ತಾಪಿಸಿದ್ದೇನೆ. ಇನ್ನೂ ಕೆಲವು ಸಲಹೆಗಳಿವೆ. ಅವುಗಳನ್ನು ಲಿಖಿತವಾಗಿ ತಿಳಿಸುತ್ತೇನೆ.
–ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

***
ಜಾತ್ರೆಯಂಥ ಸಮ್ಮೇಳನ

ಸಮ್ಮೇಳನ ಕೇವಲ ಜಾತ್ರೆಯಂತೆ ಇತ್ತು. ಸಾಹಿತ್ಯಿಕ ವಲಯದ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಈ ಪ್ರಾಂಗಣದಲ್ಲಿ ದೂಳು ನಿಯಂತ್ರಿಸುವ ವ್ಯವಸ್ಥೆ ಇರಲಿಲ್ಲ. ಊಟದ ವ್ಯವಸ್ಥೆಯಂತೂ ಏನೇನೂ ಸರಿ ಇರಲಿಲ್ಲ. ನಗದು ಸಮಸ್ಯೆಯಿಂದಾಗಿ ಪುಸ್ತಕ ವ್ಯಾಪಾರ ಬಹಳಷ್ಟು ಕುಗ್ಗಿದೆ.
ಸಾಗರ್ ಪಂಡಿತ್, ಪುಸ್ತಕ ವ್ಯಾಪಾರಿ ಮೈಸೂರು


***
ಗಡಿಭಾಗದ ಸಮ್ಮೇಳನವಿದು

ಆಂಧ್ರಕ್ಕೆ ಹತ್ತಿರದ ಪ್ರದೇಶದಲ್ಲಿ ಸಮ್ಮೇಳನ ಆಗಿರುವುದರಿಂದ ಈ ಭಾಗದ ಕನ್ನಡಾಭಿಮಾನಿಗಳಿಗೆ ಹೆಚ್ಚು ಸಂತೋಷ ಆಗಿದೆ. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಇಷ್ಟವಾಯಿತು. ಬಿಸಿಲು ನಾಡು, ಬರದ ನಾಡು ಎಂದೆಲ್ಲಾ ಹಣೆಪಟ್ಟಿ ಹೊತ್ತಿರುವ ಜಿಲ್ಲೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಸಾಹಿತ್ಯಾಸಕ್ತರು ಬಂದು ಈ ಭಾಗವನ್ನು ನೋಡುವಂತಾಯಿತು.

ಈ ಭಾಗದಲ್ಲಿ ಸಾಹಿತ್ಯ ಇನ್ನಷ್ಟು ಬೆಳೆಯುತ್ತಿದೆ. ಕನ್ನಡ ಶಾಲೆಗಳು ಅಭಿವೃದ್ಧಿ ಆಗಬೇಕು. ಆಗ ನಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳುಹಿಸಬಹುದು. ನನಗೆ ಸೇರಿದಂತೆ ಕನ್ನಡಾಭಿಮಾನಿಗಳಿಗೆ ಈ ಸಮ್ಮೇಳನ ತುಂಬಾ ಸಂತೋಷ ತಂದಿದೆ. 
–ಶಿಲ್ಪಾ ಸುಂಕದ್, ಸಿಂಧನೂರು,


***
ಭಿನ್ನ  ಗೋಷ್ಠಿಗಳು

ಗೋಷ್ಠಿಗಳು ತುಂಬಾ ಭಿನ್ನವಾಗಿದ್ದವು. ವೈಚಾರಿಕ ವಿಷಯಗಳನ್ನು ಒಳಗೊಂಡಿದ್ದವು. ಬರಗೂರರ ಭಾಷಣ, ವಿಚಾರಗಳು ಸೂಕ್ತವಾಗಿದ್ದವು. ಹಲವು ಸಮ್ಮೇಳನಗಳನ್ನು ನೋಡಿದ್ದೇನೆ. ಇದು ತುಂಬಾ ಅದ್ದೂರಿ ಅನಿಸಿತು. ಸಹಜವಾಗಿ ಇದು ಜಾತ್ರೆಯ ರೀತಿ ಅನಿಸಿದೆ. ಅದು ಬದಲಾಗಬೇಕು.
ವಿಜಯ ಬಡಿಗೇರ, ನಿವೃತ್ತ ಪ್ರಾಂಶುಪಾಲ, ಖಾನಾಪುರ

***
ಗಂಭೀರ ಚರ್ಚೆಗಳು ಬೇಕಿತ್ತು

ಒಟ್ಟಾರೆ ಸಮ್ಮೇಳನ ಆಯೋಜನೆ ಚೆನ್ನಾಗಿತ್ತು. ಅರ್ಥಪೂರ್ಣ ಸಮ್ಮೇಳನ. ಆದರೆ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಬಗ್ಗೆ ಇನ್ನಷ್ಟು ಗಂಭೀರ ಚರ್ಚೆಗಳು ಆಗಬೇಕಿತ್ತು. ಇನ್ನು ಸಂವಿಧಾನದ ತಿದ್ದುಪಡಿ ಕಲಂ 371 (ಜೆ) ಕುರಿತು ಮಾತನಾಡಲು ಈ ಭಾಗದ ಹೊರತಾದವರನ್ನು ಕರೆಸಿದರು. ಅವರೂ ಬರಲಿಲ್ಲ.

ಕೊನೆಗೂ ಇಲ್ಲಿನವರನ್ನೇ ಮಾತನಾಡಲು ಕೊನೆಯ ಕ್ಷಣದಲ್ಲಿ ನಿರ್ಧರಿಸಿದರು. ಇದು ಸರಿಯೆನಿಸಲಿಲ್ಲ. ಸಣ್ಣ ಪುಟ್ಟ ಅವ್ಯವಸ್ಥೆ ಹೊರತುಪಡಿಸಿದರೆ ಸಮ್ಮೇಳನ ಖುಷಿ ತಂದಿದೆ.ಸಮ್ಮೇಳನದಿಂದಾಗಿ ಈ ಭಾಗವನ್ನು ಬೇರೆಯವರು ತಿರುಗಿ ನೋಡುವಂತಾಗಿದೆ. ಸಮ್ಮೇಳನದ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡುವ ಕೆಲಸ ಇನ್ನಾದರೂ ಗಂಭೀರವಾಗಿ ಆಗಲಿ. 
–ಮಂಜುನಾಥ ಅಂಗಡಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT