ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿಂಗಳಾಂತ್ಯಕ್ಕೆ ‘ಗಿಳಿವಿಂಡು’ ಉದ್ಘಾಟನೆ’

Last Updated 5 ಡಿಸೆಂಬರ್ 2016, 5:24 IST
ಅಕ್ಷರ ಗಾತ್ರ

ಮಂಗಳೂರು:  ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ‘ಗಿಳಿವಿಂಡು’ ಕಾಮಗಾರಿ ಭರದಿಂದ ನಡೆದಿದ್ದು, ಇದೇ 29 ಅಥವಾ 30 ರಂದು ಉದ್ಘಾಟನೆ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಮೆಮೋರಿ ಯಲ್‌ ಟ್ರಸ್ಟ್‌ ಅಧ್ಯಕ್ಷ ವೀರಪ್ಪ ಮೊಯಿಲಿ ಹೇಳಿದರು.

ಗೋವಿಂದ ಪೈ ಅವರ ನಿವಾಸವಿ ರುವ ಕಾಸರಗೋಡು ಜಿಲ್ಲೆಯ ಮಂಜೇ ಶ್ವರದಲ್ಲಿ ಭಾನುವಾರ ಪತ್ರಿಕಾಗೋ ಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉದ್ಘಾಟನಾ ಸಮಾರಂಭಕ್ಕೆ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯ ಮಂತ್ರಿಗಳು ಬರಲಿದ್ದಾರೆ ಎಂದರು.

ಮಂಜೇಶ್ವರದಲ್ಲಿರುವ ಗೋವಿಂದ ಪೈ ಅವರ ನಿವಾಸ ಶಿಥಿಲಾವಸ್ಥೆಗೆ ತಲುಪಿತ್ತು. ಇದನ್ನು ಗಮನಿಸಿ, ಮಂಜೇಶ್ವರ ನಿವಾಸ ಹಾಗೂ ಸುತ್ತಲಿನ ಪ್ರದೇಶಗಳ ಪುನಶ್ಚೇತನಕ್ಕಾಗಿ 2005 ರಲ್ಲಿ ಸಭೆ ಕರೆಯಲಾಗಿತ್ತು. ಪ್ರೊ. ಬಿ.ಎ. ವಿವೇಕ್‌ ರೈ ನೇತೃತ್ವದಲ್ಲಿ ಡಿ.ಕೆ. ಚೌಟ, ಡಾ. ಪಿ. ದಯಾನಂದ ಪೈ, ಎಂ.ಜೆ. ಕಿಣಿ, ಬಿ. ಕಕ್ಕಿಲಾಯ, ಎಂ. ವೆಂಕಟೇಶ್ ಪೈ, ಧರ್ಮರಾಜ್‌, ಕೆ. ತೇಜೋಮಯ ಅವರನ್ನು ಒಳಗೊಂಡ ಸಮಿತಿಯು, ಸಮಗ್ರ ವರದಿಯನ್ನು ತಯಾರಿಸಿದ್ದು, ಇದಕ್ಕೆ ಗಿಳಿವಿಂಡು ಎಂದು ಹೆಸರಿಸ ಲಾಯಿತು ಎಂದು ವಿವರಿಸಿದರು.

ಗಿಳಿವಿಂಡು ಯೋಜನೆಯ ಕಾರ್ಯ ಗತಗೊಳಿಸಲು 2008 ರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್‌ ಟ್ರಸ್ಟ್‌ ರಚನೆ ಮಾಡಲಾಯಿತು. ಇದೀಗ ಒಟ್ಟು ₹5ಕೋಟಿ ವೆಚ್ಚದಲ್ಲಿ ಪೈ ಅವರ ಮನೆ ಪುನಶ್ಚೇತನ, ಸಭಾಂಗಣ, ಅತಿಥಿಗೃಹ, ಬಯಲು ರಂಗಮಂದಿರ, ಕಲಾತ್ಮಕ ಕಾಂಪೌಂಡ್‌ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊ ಳ್ಳಲಾಗಿದೆ ಎಂದು ಹೇಳಿದರು.

ಗೋವಿಂದ ಪೈ ಅವರ ಮನೆಯ ಒಂದು ಭಾಗದಲ್ಲಿ ಯಕ್ಷಗಾನ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾ ಗಿದೆ. ಇದರ ಪಕ್ಕದಲ್ಲಿ ಪಾರ್ತಿ ಸುಬ್ಬ ಯಕ್ಷ ವೇದಿಕೆ ನಿರ್ಮಿಸಲಾಗಿದೆ. ಇದರ ಜತೆಗೆ ಪಾರಂಪರಿಕ ವಸ್ತುಗಳ ಸಂಗ್ರಹಾಲಯ, ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಪೈ ಅವರ ಮನೆಯ ಪಕ್ಕದಲ್ಲಿ ಸುಮಾರು 800 ಆಸನದ ವ್ಯವಸ್ಥೆಯುಳ್ಳ ಬೃಹತ್‌ ಸಭಾಂಗಣ ನಿರ್ಮಾಣ ಮಾಡಲಾಗಿದೆ. ವೈಶಾಖಿ, ಸಾಕೇತ ಎಂಬ ಎರಡು ಅತಿಥಿ ಗೃಹಗಳ ನಿರ್ಮಾಣ ಪೂರ್ಣಗೊಂಡಿ ದ್ದು, ಆನಂದ ಹೆಸರಿನ ಇನ್ನೊಂದು ವಸತಿ ಗೃಹ ನಿರ್ಮಾಣ ಮಾಡಲಾಗು ವುದು ಎಂದು ತಿಳಿಸಿದರು.

ಗೋವಿಂದ ಪೈ ಅವರ ಕಂಚಿನ ಪುತ್ಥಳಿಯನ್ನು ಡಿ.ಕೆ. ಚೌಟ ಅವರು ಸ್ವಂತ ಖರ್ಚಿನಲ್ಲಿ ಮಾಡಿಸುತ್ತಿದ್ದು, ಅದನ್ನು ಅವರ ನಿವಾಸದ ಎದುರು ಪ್ರತಿಷ್ಠಾಪಿಸ ಲಾಗುವುದು ಎಂದರು.

ಕರ್ನಾಟಕ ಸರ್ಕಾರ ಈಗಾಗಲೇ ₹1.75 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇನ್ನೂ ₹50 ಲಕ್ಷ ಮಂಜೂರು ಮಾಡುವುದಾಗಿ ಮುಖ್ಯ ಮಂತ್ರಿ ಭರವಸೆ ನೀಡಿದ್ದಾರೆ. ಕೇರಳ ರಾಜ್ಯ ಸರ್ಕಾರವೂ ₹50 ಲಕ್ಷ ಬಿಡುಗಡೆ ಮಾಡಿದ್ದು, ಇನ್ನೂ ₹1 ಕೋಟಿ ನೀಡಲಿದೆ. ಭಾರತ ಪೆಟ್ರೋಲಿಯಂ ಕಂಪೆನಿಯು ₹1.25 ಕೋಟಿ ಅನುದಾನ ನೀಡಿದೆ. ಒಎನ್‌ಜಿಸಿ ಸಹ ₹35 ಲಕ್ಷ ನೀಡಿದೆ ಎಂದ ಮೊಯಿಲಿ, ಸಭಾಂಗ ಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಇನ್ನೂ ₹1.5 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದರು.  ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಡಿ.ಕೆ. ಚೌಟ, ಕಾಸರಗೋಡು ಜಿಲ್ಲಾಧಿಕಾರಿ ಜೀವನ ಬಾಬು ಕೆ., ಜಂಟಿ ಕಾರ್ಯದರ್ಶಿ ಎಂ.ಜೆ. ಕಿಣಿ, ಕೋಶಾಧ್ಯಕ್ಷ ಬಿ.ವಿ. ಕಕ್ಕಿಲಾಯ, ಪಿ. ದಯಾನಂದ ಪೈ, ತೇಜೋಮಯ ಇತರರು ಇದ್ದರು.

ಡಿಜಿಟಲ್ ಗ್ರಂಥಾಲಯ
ಗೋವಿಂದ ಪೈ ಅವರು ಬರೆದ ಹಾಗೂ ಸಂಗ್ರಹಿಸಿದ ಸುಮಾರು 4,500 ಪುಸ್ತಕಗಳು ಸದ್ಯಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೋವಿಂದ ಪೈ ಅಧ್ಯಯನ ಕೇಂದ್ರದಲ್ಲಿವೆ. ಅವುಗಳ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ 300 ಪುಸ್ತಕಗಳ ಡಿಜಿಟಲೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ವೀರಪ್ಪ ಮೊಯಿಲಿ ತಿಳಿಸಿದರು.

ಪುಸ್ತಕಗಳ ಡಿಜಿಟಲೀಕರಣಕ್ಕೆ ವಿಶ್ವ ಕೊಂಕಣಿ ಕೇಂದ್ರದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಇದರ ಜತೆಗೆ ಅವರ ಪುಸ್ತಕಗಳನ್ನು ಮರು ಮುದ್ರಿಸಿ, ಗಿಳಿವಿಂಡು ಗ್ರಂಥಾಲಯದಲ್ಲಿ ಇರಿಸಲಾಗುವುದು. ಇಲ್ಲಿ ಡಿಜಿಟಲ್‌ ಪುಸ್ತಕಗಳು ಲಭ್ಯವಾಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT