ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ನಿಧನ ವಾರ್ತೆ ತಳ್ಳಿಹಾಕಿದ ಅಪೋಲೊ ಆಸ್ಪತ್ರೆ

Last Updated 5 ಡಿಸೆಂಬರ್ 2016, 13:07 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿರುವ ಸುದ್ದಿ ಸತ್ಯಕ್ಕೆ  ದೂರವಾದುದು ಎಂದು ಅಪೋಲೊ ಆಸ್ಪತ್ರೆ ಹೇಳಿದೆ.

ಜಯಾ ಅವರ ಪ್ರಾಣ ಉಳಿಸುವ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ಎಂದು ಅಪೋಲೊ ಆಸ್ಪತ್ರೆ ಟ್ವೀಟ್ ಮಾಡಿದೆ.

ಕೆಲವು ಮಾಧ್ಯಮಗಳು ಜಯಲಲಿತಾ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿವೆ. ಇದು ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾದುದು. ನಾವು ಜಯಾ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಅಪೋಲೊ ಆಸ್ಪತ್ರೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಅರ್ಧಕ್ಕಿಳಿಸಿ ಮೇಲೇರಿದ ಪಕ್ಷದ ಧ್ವಜ

ಸುದ್ದಿವಾಹಿನಿಗಳಲ್ಲಿ ಜಯಲಲಿತಾ ನಿಧನರಾಗಿದ್ದಾರೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಐಎಡಿಎಂಕೆ ಕಚೇರಿಯಲ್ಲಿ ಧ್ವಜವನ್ನು ಅರ್ಧಕ್ಕಿಳಿಸಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಸುದ್ದಿ ವಾಹಿನಿಗಳು ಜಯಾ ಬದುಕಿದ್ದಾರೆ ಎಂಬ ಸುದ್ದಿ ಪ್ರಕಟಿಸಿದಾಗ ಅರ್ಧಕ್ಕಿಳಿಸಿದ್ದ  ಧ್ವಜವನ್ನು ಮೇಲಕ್ಕೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT