ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಭೂತಪೂರ್ವವಾಗಿ ಮುಗಿದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಶ್ರಮಿಸಿದವರಲ್ಲಿ ಕನ್ನಡದವರ ಜತೆಗೆ ಅನ್ಯ ಭಾಷಿಗರದ್ದೂ ಸಿಂಹಪಾಲಿತ್ತು.

ಸ್ವಯಂ ಸೇವಕರಾಗಿ ನಿಯೋಜಿತರಾಗಿದ್ದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಲ್ಲಿ ಬಹುತೇಕರ ಮನೆಮಾತು ತೆಲುಗು ಭಾಷೆಯಾಗಿದ್ದರೂ ಕನ್ನಡದ ಕೈಂಕರ್ಯದಲ್ಲಿ ಉತ್ಸಾಹದಿಂದ ತೊಡಗಿದ್ದರು. ಮುಸ್ಲಿಂ ಸಮುದಾಯವರು ಕೂಡ ಸಕ್ರಿಯವಾಗಿ ಭಾಗವಹಿಸಿದ್ದರು. ಮುಸ್ಲಿಂ ವಿದ್ಯಾರ್ಥಿಗಳು ಸಹ ತಮ್ಮ ಮನೆಗಳಿಂದ ಖಡಕ್ ರೊಟ್ಟಿಯನ್ನು ತಂದು ಕೊಟ್ಟು ತಮ್ಮ ಕನ್ನಡ ಪ್ರೇಮವನ್ನು ತೋರಿದರು.

ಸಾರ್ವಜನಿಕರ ಊಟೋಪಚಾರದ ಹೊಣೆ ಹೊತ್ತಿದ್ದ ಹುಬ್ಬಳ್ಳಿಯ ಭೈರೂ ಕೇಟರಿಂಗ್ ಅವರು ಗುಜರಾತ್ ಮೂಲದವರು. ಈ ತಂಡದಲ್ಲಿದ್ದ ಬಾಣಸಿಗರು ಮತ್ತು ಊಟ ಬಡಿಸುವವರಲ್ಲಿ ಅರ್ಧದಷ್ಟು ಜನರು ಅನ್ಯ ಭಾಷಿಗರು. ಮೆರವಣಿಗೆಯಲ್ಲಿ ನೀರಿನ ಪ್ಯಾಕೆಟ್, ಮಜ್ಜಿಗೆ, ಪೆಪ್ಪರಮೆಂಟ್ಗಳನ್ನು ಮಾರ್ವಾಡಿ ಸಮುದಾಯದವರು ಹಂಚಿದರು.

ಗಣ್ಯರ ಊಟದ ವ್ಯವಸ್ಥೆ ವಹಿಸಿಕೊಂಡಿದ್ದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ತೆಲಂಗಾಣದ ನಾರಾಯಣಪೇಟೆ ಕ್ಷೇತ್ರ ಶಾಸಕ ಎಸ್.ಆರ್. ರೆಡ್ಡಿ, ಶಿಲ್ಪಾ ಮೆಡಿಕರ್ ಮಾಲೀಕರು ಸಹ ಅನ್ಯ ಭಾಷಿಗರು. ತೆಲುಗು ಭಾಷಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು ಅಕ್ಕಿಗಿರಣಿದಾರರ ಅಸೋಸಿಯೇಷನ್ ಸಮ್ಮೇಳನಕ್ಕೆ ₹ 10 ಲಕ್ಷ ದೇಣಿಗೆ ನೀಡಿದೆ. ಜೊತೆಗೆ ವಿವಿಧ ರೀತಿಯಲ್ಲಿ ದೇಣಿಗೆ ನೀಡಿದವರಲ್ಲಿ ಅನ್ಯ ಭಾಷಿಗರು ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿದೆ.

ಸಮ್ಮೇಳನದ ನಿಮಿತ್ತ ರಚಿಸಿದ್ದ ಉಪಸಮಿತಿಗಳಲ್ಲಿದ್ದವರಲ್ಲಿ ಅನೇಕರ ಮನೆಮಾತು ತೆಲುಗು. ಹಿರಿಯ ಅಧಿಕಾರಿಗಳಿಂದ ಹಿಡಿದು ಸಭಾಂಗಣ ನಿರ್ಮಾಣ ಮಾಡಿದ ಕಾರ್ಮಿಕರವರೆಗೂ ಅನ್ಯಭಾಷಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದರು.

ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಲು ಅಹರ್ನಿಶಿ ದುಡಿದ ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್ ಇವರೆಲ್ಲರೂ ಕನ್ನಡ ತೇರನ್ನು ಎಳೆಯುವ ಕೈಂಕರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

‘ನೆಲ– ಜಲ– ಭಾಷೆಯ ಋಣವನ್ನು ತೀರಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರೂ ಸೇರಿ ಎಲ್ಲರೂ ಈ ಕೆಲಸವನ್ನು ಸಮರ್ಪಕವಾಗಿ ಮಾಡಿದ್ದಾರೆ’
-ಎನ್.ಎಸ್.ಬೋಸರಾಜು, ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.