ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲುವನ ಕಾಪಾಡಲು ರಾಜೇಶ್ವರಿ ತೇಜಸ್ವಿ ಮನವಿ

Last Updated 8 ಡಿಸೆಂಬರ್ 2016, 20:09 IST
ಅಕ್ಷರ ಗಾತ್ರ

ಮೂಡಿಗೆರೆ: ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿದ್ದ ನವಿಲುವನವನ್ನು ಖಾಸಗಿ ವ್ಯಕ್ತಿಯೊಬ್ಬರು ನೆಲಸಮಗೊಳಿಸಿ ರಿಯಲ್‌ ಎಸ್ಟೇಟಿನವರಿಗೆ ಕೊಟ್ಟು, ಸಾ ಮೀಲ್‌ ಅಳವಡಿಸುವ ಪ್ರಯತ್ನ ನಡೆಸುತ್ತಿದ್ದು, ಕೂಡಲೇ ಪ್ರಕೃತಿಯ ಮೇಲಾಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಸಾಹಿತಿ ರಾಜೇಶ್ವರಿ ತೇಜಸ್ವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಇಂದು ಗುಡ್ಡದ ಒಡೆತನವಿರುವ  ಸುಬ್ರಮಣ್ಯ ಎಂಬುವವರು ಜಮೀನಿನಲ್ಲಿದ್ದ ಎಲ್ಲಾ ಮರಗಳನ್ನು ಕಡಿದು, ಇಡೀ ಗುಡ್ಡವನ್ನೇ ಜೇಸಿಬಿ ಯಂತ್ರಗಳಿಂದ ನೆಲಸಮಗೊಳಿಸಿ, ಅಲ್ಲಿದ್ದ ಪ್ರಾಣಿ ಪಕ್ಷಿ, ಜೀವ ಸಂಕುಲಗಳು ನಿರ್ಣಾಮವಾಗುವಂತೆ ಮಾಡಿದ್ದಾರೆ. ಅಲ್ಲದೇ ಈ ಪ್ರದೇಶವನ್ನು ರಿಯಲ್‌ ಎಸ್ಟೇಟಿನವರಿಗೆ ಕೊಟ್ಟು ಸಾಮಿಲನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ.

ಇದಲ್ಲದೇ ಹೊಸದಾಗಿ ಮಲೆನಾಡಿನಲ್ಲಿ ಬ್ರೆಜಿಲ್‌ನ ಮಾನೋಕ್ರಾಪ್‌ ಮಾದರಿಯಲ್ಲಿ ಕಾಫಿ ಬೆಳೆಯಲು ಮುಂದಾಗುತ್ತಿದ್ದು, ಕಾಫಿ ತೋಟಗಳಲ್ಲಿದ್ದ ಮರಗಳನ್ನೆಲ್ಲಾ ನೆಲಸಮ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಾಣಿ ಪಕ್ಷಿಗಳು ಅಳಿಯುತ್ತಿವೆ.

ನಮ್ಮ ಸುತ್ತಮುತ್ತಲಿನಲ್ಲಿಯೇ ಈ ರೀತಿ ಪ್ರಕೃತಿಯ ಮೇಲೆ ಅನ್ಯಾಯವಾಗುತ್ತಿದ್ದು, ಕೂಡಲೇ ಇಂತಹ ಕ್ರಮವನ್ನು ತಡೆಹಿಡಿದು, ನಮ್ಮೊಂದಿಗೆ ಪ್ರಾಣಿ ಪಕ್ಷಿ, ಜೀವ ಸಂಕುಲಗಳು ಬದುಕಲು ಅವಕಾಶ ಕಲ್ಪಿಸುವುದಲ್ಲದೇ, ಪರಿಸರ ಉಳಿಸಲು ಅಧಿಕಾರಿಗಳಿಗೆ ಸೂಚಿಸಿ ನೆರವಾಗಿ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT