ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನತಿಟ್ಟಿಗೆ ವಿದೇಶಿ ಅತಿಥಿಗಳು!

ಡಿಸೆಂಬರ್‌ ಅಂತ್ಯಕ್ಕೆ ಪಕ್ಷಿ ಸಂಕುಲದ ಜಾತ್ರೆ
Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಶ್ರೀರಂಗಪಟ್ಟಣ: ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ದೇಶ, ವಿದೇಶಗಳಿಂದ ವಿವಿಧ ಬಗೆಯ ಪಕ್ಷಿಗಳು ವಂಶಾಭಿವೃದ್ಧಿಗಾಗಿ ಬರಲಾರಂಭಿಸಿವೆ. ಪಕ್ಷಿಧಾಮಕ್ಕೆ ಸಾವಿರಕ್ಕೂ ಹೆಚ್ಚು ಹೆಜ್ಜಾರ್ಲೆ (ಪೆಲಿಕಾನ್‌) ಬಂದಿದ್ದು, ಗೂಡು ಕಟ್ಟುವ ಕಾಯಕದಲ್ಲಿ ತೊಡಗಿವೆ.
 
ಒಂದೂವರೆ ಸಾವಿರದಷ್ಟು ಕಾರ್ಮೊರೆಂಟ್‌ಗಳು, 300ಕ್ಕೂ ಹೆಚ್ಚು ಸ್ಪೂನ್‌ಬಿಲ್‌, 200ರಷ್ಟು ಓಪನ್‌ಬಿಲ್‌ ಪಕ್ಷಿಗಳು ಬಂದಿಳಿದಿವೆ. ಆಕರ್ಷಕ ಪೇಂಟೆಡ್‌ ಸ್ಟೋರ್ಕ್‌ ಪಕ್ಷಿಗಳು ಶನಿವಾರದಿಂದ ಬರಲಾರಂಭಿಸಿವೆ. ಇನ್ನು 15 ದಿನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಜಾತಿಯ ಪಕ್ಷಿಗಳು ಬರಲಿವೆ.
 
ಎರಡು ಜತೆ ರಿವರ್‌ ಟರ್ನ್‌, 4 ಜತೆ ಸ್ಟೋನ್‌ ಫ್ಲವರ್‌, ನೈಟ್‌ ಹೆರಾನ್‌, ಗ್ರೇ ಹೆರಾನ್‌ ಪಕ್ಷಿ ಸಂಕುಲವೂ ರಂಗನತಿಟ್ಟಿಗೆ ಬಂದಿವೆ.
 
‘ಚಳಿಗಾಲ ಆರಂಭವಾಗಿರುವುದರಿಂದ ಪಕ್ಷಿಗಳು ವಂಶಾಭಿವೃದ್ಧಿಗೆ ರಂಗನತಿಟ್ಟಿಗೆ ಬರಲಾರಂಭಿಸಿವೆ. ಡಿಸೆಂಬರ್‌ ಅಂತ್ಯಕ್ಕೆ ಪಕ್ಷಿ ಸಂಕುಲದ ಜಾತ್ರೆಯೇ ಸೇರಲಿದೆ. ಮೂರು ತಿಂಗಳವರೆಗೆ ಇಲ್ಲಿ ಪಕ್ಷಿಗಳು ಹೆಚ್ಚು ಕಾಣಸಿಗುತ್ತವೆ. ಪೆಲಿಕಾನ್‌ ಜಾತಿಯ ಪಕ್ಷಿಗಳು ಮಾತ್ರ 7 ತಿಂಗಳವರೆಗೂ ಇಲ್ಲಿರುತ್ತವೆ. ಉಳಿದ ಪಕ್ಷಿಗಳು 4ರಿಂದ 5 ತಿಂಗಳು ಕಾಲ ಇಲ್ಲಿದ್ದು, ಸ್ವಸ್ಥಾನಕ್ಕೆ ಮರಳುತ್ತವೆ’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT