ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಿಸಬಹುದಾದ ಗ್ಯಾಜೆಟ್‌ಗಳು

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸುಲಭವಾಗಿ ಧರಿಸಬಹುದಾದ ಗ್ಯಾಜೆಟ್‌ಗಳ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ ಎಂದು ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೊರೇಷನ್‌  (ಐಡಿಸಿ)   ನಡೆಸಿರುವ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. ಕಳೆದ ತ್ರೈಮಾಸಿಕ ವಹಿವಾಟಿನಲ್ಲಿ  (ಜುಲೈ–ಸೆಪ್ಟೆಂಬರ್‌) ಶೇ 3.1ರಷ್ಟು ಪ್ರಗತಿ ಕಂಡುಬಂದಿದೆ ಎಂದು ಐಡಿಸಿ ತಿಳಿಸಿದೆ.

ಸುಲಭವಾಗಿ ಧರಿಸಬಹುದಾದ ಗ್ಯಾಜೆಟ್‌ಗಳು ಅಂದರೆ ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್‌ ಬ್ರೇಸ್‌ಗಳು, ಸ್ಮಾರ್ಟ್‌ಬೆಲ್ಟ್‌ಗಳು, ಸ್ಮಾರ್ಟ್‌ಗಾಗಲ್‌, ಸ್ಮಾರ್ಟ್‌ನೆಕ್‌ಲೆಸ್‌ ಸೇರಿದಂತೆ ಇತ್ಯಾದಿ ಧರಿಸುವ ಗ್ಯಾಜೆಟ್‌ಗಳ ವಹಿವಾಟಿನಲ್ಲಿ  ಏರಿಕೆ ಕಂಡುಬಂದಿದೆ.  ಸ್ಯಾಮ್ಸಂಗ್‌, ಶಿಯೋಮಿ, ಗಾರ್ಮಿನ್‌, ಆ್ಯಪಲ್‌ ಕಂಪೆನಿಯ ಉತ್ಪನ್ನಗಳು ಹೆಚ್ಚು ಮಾರಾಟವಾಗಿವೆ ಎಂದು ಐಡಿಸಿ ತಿಳಿಸಿದೆ.

ಗ್ರಾಹಕರು ಸ್ಮಾಟ್‌ಫೋನ್‌, ಮೊಬೈಲ್‌, ನೋಟ್‌ಗಳ ಬದಲಾಗಿ ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ ಬ್ರೇಸ್‌ಗಳತ್ತ  ಆಕರ್ಷಿತರಾಗಿರುವುದಾಗಿ ಐಡಿಸಿ ದತ್ತಾಂಶಗಳಿಂದ ತಿಳಿದು ಬಂದಿದೆ. ಹಲವು ಸ್ಮಾರ್ಟ್‌ ಸಾಧನಗಳನ್ನು ಬಳಸುವುದಕ್ಕಿಂತ ಒಂದೇ ಸಾಧನದಲ್ಲಿ ಬಹೂಪಯೋಗಿ ಅಪ್ಲಿಕೇಷನ್‌ಗಳಿರುವ ಒಂದೇ ಸಾಧನವನ್ನು ಬಳಸಲು ಯುವಕರು ಆಸಕ್ತಿ ತೋರುತ್ತಿದ್ದಾರೆ ಎಂದು ಐಡಿಸಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಧರಿಸಬಲ್ಲ ಗ್ಯಾಜೆಟ್‌ಗಳ ವಹಿವಾಟು ಶೇ 10 ರಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT