ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಭಾಷೆ ವ್ಯಕ್ತಿ ಬದುಕಿನ ಅನಾವರಣ

ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದಲ್ಲಿ ಎ.ವಿ.ನಾವಡ
Last Updated 14 ಡಿಸೆಂಬರ್ 2016, 5:01 IST
ಅಕ್ಷರ ಗಾತ್ರ

ಬದಿಯಡ್ಕ: ತುಳು ಭಾಷೆಯು ಸಂಸ್ಕೃತಿ ಹಾಗೂ ಸಾಹಿತ್ಯದಿಂದ ಹೊರತಾದ ವ್ಯಕ್ತಿ ಬದುಕಿನ ಅನಾವರಣವಾಗಿದೆ. ತುಳು ಭಾಷೆಯ ಪ್ರಗತಿಯಿಂದ ಇತರ ಪ್ರಾದೇ ಶಿಕ ಭಾಷೆಗಳೂ ಬೆಳವಣಿಗೆ ಹೊಂದು ತ್ತದೆ. ಪಾಡ್ದನಗಳಲ್ಲಿ ಅನೇಕ ತುಳು ಶಬ್ದಗಳಿದ್ದು, ಅವುಗಳನ್ನು ನಿತ್ಯ ಜೀವನದಲ್ಲಿ ತುಳುವರು ಬಳಸಬೇಕು’ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎ.ವಿ.ನಾವಡ ಹೇಳಿದರು.

ಅವರು ಮಂಗಳವಾರ ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಕಾರ್ಯ ಕ್ರಮದಲ್ಲಿ ನಡೆದ ತುಳು ಭಾಷೆಯ ಪ್ರಗತಿಗೆ ಹೊಸ ಸವಾಲುಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಸರ್ವೋ ತ್ತಮ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಬಾಬು ಶಿವಪೂಜಾರಿ ಅವರು,’ತುಳು ಭಾಷೆಯು ಅತ್ಯಂತ ಪ್ರಾಚೀನವಾಗಿದ್ದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರುವ ಜತೆಗೆ ಅದಕ್ಕೆ ಶಾಸ್ತ್ರೀಯ ಸ್ಥಾನಮಾನವೂ ದೊರೆಯ ಬೇಕು. ದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಎತ್ತರದ ಸ್ಥಾನವಿದೆ.

ವಿದೇಶಗಳಲ್ಲೂ ಕೂಡಾ ತುಳುವಿನ ಪ್ರಾಚೀನತೆಗೆ ಪುಷ್ಟಿ ದೊರೆಯುತ್ತದೆ ಎಂದು ಹೇಳಿದರು. ಸಭೆಯಲ್ಲಿ ಕುದಿ ವಸಂತ ಶೆಟ್ಟಿ, ಯದು ಪತಿ ಗೌಡ, ವಿ.ಕೆ.ಯಾದವ್ ಮತ್ತಿತರರು ಇದ್ದರು. ಪ್ರೊ.ಶ್ರೀನಾಥ್ ಸ್ವಾಗತಿಸಿ, ಕೆ ಭಾಸ್ಕರ ವಂದಿಸಿದರು. ಡಾ.ರಾಜೇಶ್‌ ಆಳ್ವ ನಿರೂಪಿಸಿದರು. ಈ ಸಂದರ್ಭದಲ್ಲಿ ತುಳು ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ ಹಾಗೂ ಡಾ.ಯು ಪಿ ಉಪಾಧ್ಯಾಯರನ್ನು ತುಳು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಭ್ರಮದ ಸಾಹಿತ್ಯ ಗೋಷ್ಠಿ: ವಿಶ್ವ ತುಳುವೆರೆ ಆಯನೊದ ಬಹುಭಾಷಾ ಸಂಗಮ ವೇದಿಕೆಯಲ್ಲಿ ಮಂಗಳವಾರ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಿತು.ವಿಚಾರಗೋಷ್ಠಿಯ ಅಧ್ಯಕ್ಷತೆ ಯನ್ನು ಚೆನ್ನಪ್ಪ ಅಳಿಕೆ ವಹಿಸಿದ್ದರು.

ಗೋಷ್ಠಿಯಲ್ಲಿ ತುಳು ಜನಪದ ಸಾಹಿತ್ಯದ ಬಗ್ಗೆ ಮಂಗಳೂರಿನ ರಾಜಶ್ರೀ ರೈ, ತುಳು ಯಕ್ಷಗಾನ ಸಾಹಿತ್ಯದ ಬಗ್ಗೆ ತಾರಾನಾಥ ವರ್ಕಾಡಿ, ತುಳು ಪತ್ರಿಕೋ ದ್ಯಮ ಕುರಿ ತಾಗಿ ಸತೀಶ್‌ ಸಾಲಿಯಾನ್ ವಿಚಾರ ಮಂಡಿಸಿದರು. ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಧ್ಯಕ್ಷತೆಯನ್ನು ಸುಮಾರು 30ಕ್ಕೂ ಮಿಕ್ಕಿದ ಕವಿಗಳು ತುಳು ಕವಿತೆಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT