ನವದೆಹಲಿ: ಅಬಕಾರಿ ಸಚಿವ ಎಚ್.ವೈ. ಮೇಟಿ ಅವರು ಭಾಗಿಯಾಗಿರುವ ರಾಸಲೀಲೆಯ ಸಿ.ಡಿ. ಇರುವ ವಿಷಯ ಒಂದೂವರೆ ತಿಂಗಳ ಹಿಂದೆಯೇ ಬಹಿರಂಗಗೊಂಡಿತ್ತು. ಆಡಳಿತ ಮತ್ತು ವಿರೋಧ ಪಕ್ಷದಲ್ಲಿರುವ ಪ್ರಮುಖರು ರಾಸಲೀಲೆಯ ಸಂದರ್ಭ ಚಿತ್ರೀಕರಿಸಿರುವ ವಿಡಿಯೊ ತುಣುಕುಗಳನ್ನು ನೋಡಿದ್ದರು.

ಇಷ್ಟು ಮಾತ್ರವಲ್ಲದೆ, ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಸಲೀಲೆಯಲ್ಲಿ ಭಾಗಿಯಾಗಿದ್ದ ಮಹಿಳೆ, ಚಿತ್ರೀಕರಣಕ್ಕೆ ಸಹಕರಿಸಿದ್ದ ಮೇಟಿ ಅವರ ಅಂಗರಕ್ಷಕ ಹಾಗೂ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಅವರನ್ನು ಎಂಟು ದಿನಗಳ ಕಾಲ ಅಪಹರಿಸಲಾಗಿತ್ತು ಎಂಬ ಆಶ್ಚರ್ಯಕರ ವಿಷಯ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಕೆಲವು ಹಿರಿಯ ಸಚಿವರು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿರುವ ಹಿರಿಯ ಕಾಂಗ್ರೆಸ್ ಮುಖಂಡರು ರಾಸಲೀಲೆಯ ತುಣುಕುಗಳನ್ನು ವೀಕ್ಷಿಸಿದ್ದರಲ್ಲದೆ, ಈ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ಅಗತ್ಯವಿರುವ ಕ್ರಮ ಕೈಗೊಂಡು ಮರ್ಯಾದೆ ಉಳಿಸಿಕೊಳ್ಳುವಂತೆಯೂ ಎಚ್.ವೈ. ಮೇಟಿ ಅವರಿಗೆ ಸಲಹೆ ನೀಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

ದೊಡ್ಡ ಮೊತ್ತಕ್ಕೆ ಮೇಟಿ ಅವರಿಗೆ ಬೇಡಿಕೆ ಇರಿಸಲಾಗಿತ್ತು. ಹಣ ಕೊಡದಿದ್ದರೆ ಸಿ.ಡಿ. ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಅಂತೆಯೇ ಮೇಟಿ ಬೆಂಬಲಿಗರು ಗುಪ್ತ ಸ್ಥಳವೊಂದಕ್ಕೆ ಬರುವಂತೆ ತಿಳಿಸಿ, ಬ್ಲ್ಯಾಕ್ಮೇಲ್ ಮಾಡಿದ್ದ ಎಲ್ಲರನ್ನೂ ಅಪಹರಿಸಿ ಹೈದರಾಬಾದ್ನಲ್ಲಿ ಇರಿಸಿದ್ದರು. ಸಿ.ಡಿ. ಬಿಡುಗಡೆಗೊಳಿಸುವುದಿಲ್ಲ ಎಂದು ಒಪ್ಪಿದ ನಂತರವಷ್ಟೇ, ಬೇಡಿಕೆ ಇಟ್ಟಿದ್ದಕ್ಕಿಂತ ಕಡಿಮೆ ಹಣ ಕೊಟ್ಟು ಕಳುಹಿಸಲಾಯಿತು. ಆದರೆ, ಸಿ.ಡಿ. ಹೊಂದಿದ್ದ ತಂಡದಲ್ಲಿ ಆ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ‘ಸಾಮರಸ್ಯ’ ಮೂಡದ್ದರಿಂದ ಅವರಲ್ಲೇ ಒಬ್ಬರ ಬಳಿ ಇದ್ದ ಸಿ.ಡಿ. ಈಗ ಬಹಿರಂಗಗೊಂಡಿದೆ ಎಂದೂ ಹೇಳಲಾಗುತ್ತಿದೆ.

ಅಪಹರಣ ಪ್ರಹಸನ, ಹಣದ ಬೇಡಿಕೆ, ಬ್ಲ್ಯಾಕ್ಮೇಲ್ ಮತ್ತಿತರ ವಿಷಯಗಳನ್ನು ಮುಚ್ಚಿಟ್ಟು ಪ್ರಾಣ ಬೆದರಿಕೆ, ಫೋನ್ ಕದ್ದಾಲಿಕೆ ಎಂಬ ಆರೋಪದಲ್ಲಿ ತೊಡಗಲಾಗಿತ್ತು ಎಂದೂ ಹೇಳಲಾಗುತ್ತಿದೆ.

ಒಂದು ಹಂತದಲ್ಲಿ ಸಿ.ಡಿ. ಬಹಿರಂಗಗೊಳ್ಳದಂತೆ ‘ಮ್ಯಾನೇಜ್’ ಮಾಡಿದ್ದ ಮೇಟಿ ಮತ್ತವರ ಬೆಂಬಲಿಗರು, ‘ರಾಸಲೀಲೆಯಂತಹ ಯಾವುದೇ ಘಟನೆ ನಡೆದಿಲ್ಲ. ಒಂದೊಮ್ಮೆ ಸಿ.ಡಿ. ಇದ್ದಲ್ಲಿ ಬಿಡುಗಡೆ ಮಾಡಲಿ ಎಂದೇ ಬಹಿರಂಗ ಹೇಳಿಕೆ ನೀಡಿದ್ದರು. ಸಿ.ಡಿ. ಹೊಂದಿದವರ ನಡುವೆ ಸಾಮರಸ್ಯ ಮೂಡದ್ದರಿಂದಲೇ ಕೊನೆಗೆ ಎಲ್ಲವೂ ಬಹಿರಂಗಗೊಳ್ಳುವಂತಾಯಿತು’ ಎಂದು ಪ್ರಕರಣವನ್ನು ಆರಂಭದಿಂದಲೂ ಬಲ್ಲವರು ಹೇಳುತ್ತಿದ್ದಾರೆ.

ಅಷ್ಟಿಷ್ಟು ಹಣ ಕೊಟ್ಟು ಕಳುಹಿಸಿದ ನಂತರವೂ ವಿಷಯವು ಮಾಧ್ಯಮಗಳಿಗೆ ಗೊತ್ತಾಗಿ, ರಾಸಲೀಲೆ ನಡೆದಿದೆ ಎಂಬ ಸುದ್ದಿ ಪ್ರಸಾರವಾಗಿದ್ದರಿಂದ ಪೊಲೀಸರು ಕೆಲವರ ಮೇಲೆ ನಿಗಾ ಇರಿಸಿದ್ದಾರೆ. ಅವರ ಫೋನ್ ಸಂಭಾಷಣೆಯನ್ನು ಕದ್ದು ಆಲಿಸಲಾಗಿದೆ. ಅವರ ಇರುವಿಕೆ, ಸಂಪರ್ಕದಲ್ಲಿದ್ದವರ ವಿವರವನ್ನು ಸಂಗ್ರಹಿಸಲಾಗಿದೆ ಎಂಬ ಆರೋಪವೂ ಈಗ ಕೇಳಿಬರುತ್ತಿದೆ.

‘ಕೆಲವು ದಿನಗಳ ಹಿಂದೆಯೇ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ನಾವು ಸಿ.ಡಿ. ನೋಡಿದ್ದೇವೆ. ಆದರೆ, ಸಂತ್ರಸ್ತ ಮಹಿಳೆಯು ಯಾವುದೇ ರೀತಿಯ ದೂರನ್ನು ನೀಡಲು ಮುಂದಾಗಲಿಲ್ಲ. ಹಾಗಾಗಿ ಮಹಿಳೆಗೆ ಅನ್ಯಾಯ ಆಗಿದ್ದನ್ನು ವಿರೋಧಿಸಿ ನಾವು ಹೋರಾಟಕ್ಕೆ ಇಳಿಯುವುದಕ್ಕೆ ಸಾಧ್ಯವಾಗಲಿಲ್ಲ. ಒಂದೊಮ್ಮೆ ಆ ಮಹಿಳೆ ಸಿದ್ಧವಿದ್ದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬಹುದಿತ್ತು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಸದರೊಬ್ಬರು ಖಚಿತಪಡಿಸಿದರು.

ಹೈಕಮಾಂಡ್ ಭೇಟಿಗೆ ಯತ್ನ: ಮಂಗಳವಾರ ರಾತ್ರಿ ನವದೆಹಲಿಗೆ ಬಂದಿರುವ ರಾಜಶೇಖರ್ ಮುಲಾಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ಯತ್ನಿಸಿದರಲ್ಲದೆ, ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್ ಅವರ ಭೇಟಿಗೂ ಪ್ರಯತ್ನಿಸಿದರು.

‘ಸಿ.ಡಿ. ಬಿಡುಗಡೆ ಮಾಡಿದ್ದು ನಾನಲ್ಲ. ಬೇರೆ ಯಾರೋ ಅದನ್ನು ಬಹಿರಂಗಗೊಳಿಸಿದ್ದಾರೆ’ ಎಂದು ಅವರು ಹೇಳಿಕೆ ನೀಡಿದರಾದರೂ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ವತಃ ರಾಜಶೇಖರ್ ಸಮ್ಮುಖದಲ್ಲೇ ‘ರಾಜಶೇಖರ್ ಅವರೇ ಸಿ.ಡಿ. ಬಿಡುಗಡೆ ಮಾಡಿದ್ದಾರೆ’ ಎಂದು ನವದೆಹಲಿಯಲ್ಲಿ ಸುದ್ದಿಗಾರರಿಗೆ ಹೇಳಿದರು.

‘ಮೇಟಿ ಅವರ ರಾಸಲೀಲೆಯ ಸಿ.ಡಿಯನ್ನು ರಾಜಶೇಖರ್ ಮುಲಾಲಿ ಅವರು ಬಿಡುಗಡೆ ಮಾಡುವ ಮೂಲಕ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ರಾಜ್ಯದಲ್ಲಿ ನಡೀಬಾರದ್ದು ನಡೆಯುತ್ತಿದೆ. ರಾಜಶೇಖರ್ ಮತ್ತು ಆ ಮಹಿಳೆಯನ್ನು ಹೆದರಿಸಿ ಒತ್ತಡ ತರಲಾಗಿದೆ. ಇಡೀ ಪ್ರಕರಣ ಬೆಳಕಿಗೆ ಬರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಂಪಯ್ಯ ಒತ್ತಡ ತಂದಿದ್ದರು. ತನ್ವೀರ್ ಸೇಟ್ ಪ್ರಕರಣದಲ್ಲಿ ಸರ್ಕಾರ ಪಾಠ ಕಲಿಯಲಿಲ್ಲ. ಸಿದ್ದರಾಮಯ್ಯ ಅವರು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು

ಅಂಗೈ ಹುಣ್ಣಿಗೆ ಕನ್ನಡಿಯೇಕೆ?.

ನವದೆಹಲಿ: ಎಚ್.ವೈ. ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸುವ ಅಗತ್ಯವಿರಲಿಲ್ಲ ಎಂದು ರಾಜಶೇಖರ ಮುಲಾಲಿ ಅಭಿಪ್ರಾಯಪಟ್ಟರು.

ಬುಧವಾರ ಮಧ್ಯಾಹ್ನ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂದು ಕೇಳಿದರಲ್ಲದೆ, ‘ತನಿಖೆ ನಡೆಸುವ ಮೂಲಕ ನನ್ನನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.

‘ಕರ್ನಾಟಕದಲ್ಲಿ ನನಗೆ ಪ್ರಾಣ ಬೆದರಿಕೆ ಇದೆ. ಕಳೆದ 25 ದಿನಗಳಿಂದ ನನ್ನ ಚಲನವಲನದ ಮೇಲೆ ನಿಗಾ ಇರಿಸುವ ಮೂಲಕ ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿಯವರು ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಫೋನ್ ಅನ್ನೂ ಕದ್ದಾಲಿಸಲಾಗಿದೆ’ ಎಂದು ಅವರು ದೂರಿದರು.
‘ಸರ್ಕಾರದಲ್ಲಿರುವ ಸಚಿವರು, ಶಾಸಕರಿಂದ ಅಧಿಕಾರದ ದುರುಪಯೋಗ ಆಗುತ್ತಿದೆ. ಜನರಿಂದ ಆಯ್ಕೆಯಾದವರು ಮೋಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಕುರಿತ ಅಹವಾಲು ಸ್ವೀಕರಿಸಲು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಆಸಕ್ತಿ ಇಲ್ಲ. ಅಂತೆಯೇ ನಾನು ಕಾಂಗ್ರೆಸ್ ಹೈಕಮಾಂಡ್ಗೆ ಈ ಕುರಿತ ದೂರು ಸಲ್ಲಿಸಲು ರಾಷ್ಟ್ರದ ರಾಜಧಾನಿಗೆ ಧಾವಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಚಿವರ ರಾಸಲೀಲೆ ಪ್ರಕರಣದಿಂದ ರಾಜ್ಯದ ಮಾನ ಹರಾಜಾಗಿದೆ. ಇದಕ್ಕೆ ಮುಖ್ಯಮಂತ್ರಿಯೇ ಹೊಣೆ. ಇನ್ನೂ ಅನೇಕ ಹಗರಣಗಳು ನಡೆದಿವೆ. ಇನ್ನೂ ಮೂವರು ಸಚಿವರು, ಇಬ್ಬರು ಶಾಸಕರು ಭ್ರಷ್ಟಾಚಾರ, ರಾಸಲೀಲೆಯಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ. ಸಿಕ್ಕ ನಂತರ ಬಹಿರಂಗಪಡಿಸುತ್ತೇನೆ’ ಎಂದು ಅವರು ತಿಳಿಸಿದರು.

‘ರಾಸಲೀಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಈ ಪ್ರಕರಣದ ಸಂತ್ರಸ್ತರು ನನ್ನನ್ನು ಸಂಪರ್ಕಿಸಿ ನ್ಯಾಯ ದೊರಕಿಸಿ ಕೊಡುವಂತೆ ಕೋರಿದರು. ನಾನು ಅವರ ಬಳಿಯಿದ್ದ ವಿಡಿಯೊ ತುಣುಕು ವೀಕ್ಷಿಸಿದ್ದೆ. ನಂತರ ಎರಡು ದಿನ ನನಗೆ ನಿದ್ದೆ ಬಂದಿರಲಿಲ್ಲ. ಅದು ಅಷ್ಟು ಕೆಟ್ಟದಾಗಿದೆ. ಇಂದು ಆ ವಿಡಿಯೊವನ್ನು ನಾನು ಬಿಡುಗಡೆ ಮಾಡಿಲ್ಲ. ನನ್ನ ಗಮನಕ್ಕೆ ತಂದವರೇ ಅದನ್ನು ಬಿಡುಗಡೆ ಮಾಡಿರಬಹುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.