ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಜೀವನದಲ್ಲಿ ಆರೋಗ್ಯ ಗುಟ್ಟು

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

*ಲೈಂಗಿಕಕ್ರಿಯೆಯನ್ನು ಒಂದು ವ್ಯಾಯಾಮ ಎಂದು ಪರಿಗಣಿಸಬಹುದೇ?
ಹೌದು, ಆದರೆ ಇದೊಂದೇ ಪರಿಪೂರ್ಣ ವ್ಯಾಯಾಮವೇನೂ ಅಲ್ಲ.  ಲೈಂಗಿಕ ಕ್ರಿಯೆಯ ಸರಾಸರಿ ಸಮಯದಲ್ಲಿ ನಿಮ್ಮ ದೈನಂದಿನ ಕ್ಯಾಲೊರಿಯನ್ನು ಕರಗಿಸಲು ಸಾಧ್ಯವಾಗುವುದಿಲ್ಲ. 5ರಿಂದ 15 ನಿಮಿಷಗಳ ಲೈಂಗಿಕ ಕ್ರಿಯೆಯನ್ನು ಊಹಿಸಿ­ಕೊಂಡಾಗ, ಅದು 20 ನಿಮಿಷಗಳಲ್ಲಿ ಒಂದು ಮೈಲಿ ವಾಕಿಂಗ್ ಮಾಡಿದ್ದಕ್ಕೆ ಸಮನಾಗಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಮೇಲಿರುವ ಸಂಗಾತಿಯ ಹೃದಯ ಬಡಿತದ ವೇಗವು  ಸುಮಾರು 120ರಷ್ಟಿದ್ದರೆ, ಕೆಳಗಿರುವ ಸಂಗಾತಿಯು ಸುಮಾರು 110ರಷ್ಟು ಹೃದಯ ಬಡಿತದ ವೇಗವನ್ನು ತಲುಪುತ್ತಾರೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಲೈಂಗಿಕ ಕ್ರಿಯೆಯ ಮೂಲಕ ಹೃದಯ ರಕ್ತನಾಳದ ವ್ಯಾಯಾಮ ಅತ್ಯಂತ ಕಡಿಮೆ ಮಟ್ಟದಲ್ಲಿ ಉಂಟಾಗುತ್ತದೆ. ಇದನ್ನು ನಿಮ್ಮ ಏಕೈಕ ವ್ಯಾಯಾಮ ಮಾರ್ಗವನ್ನಾಗಿ ತೆಗೆದುಕೊಳ್ಳಬೇಡಿ.

*ಹೃದಯದ ಆರೋಗ್ಯಕ್ಕೆ ಲೈಂಗಿಕಕ್ರಿಯೆ ಪೂರಕವೇ?
ಈಗಾಗಲೇ ಹೇಳಿದಂತೆ ಒಂದು  ಲೈಂಗಿಕಕ್ರಿಯೆಯ ಸರಾಸರಿ ಸಮಯದಲ್ಲಿ ನಿಮ್ಮ ದೈನಂದಿನ ಕ್ಯಾಲೊರಿಯನ್ನು ಕರಗಿಸಲು ಸಾಧ್ಯವಿಲ್ಲ.
ಆದರೆ ಇದು ನಿಮ್ಮ ಲೈಂಗಿಕ ಕ್ರಿಯೆಯ ಅವಧಿಯನ್ನು ಅವಲಂಬಿಸಿರುತ್ತದೆ. ಒಂದು ಅಧ್ಯಯನದ ಪ್ರಕಾರ ತಿಂಗಳಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ಪುರುಷರಿಗೆ ಹೋಲಿಸಿದರೆ ವಾರದಲ್ಲಿ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯದ ರೋಗಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂಬುದು ತಿಳಿದು ಬಂದಿದೆ.

ಈ ರೀತಿಯ ಸಂಶೋಧನೆಗಳು ಸಾಮಾನ್ಯವಾಗಿ ಪುರುಷರನ್ನೇ ಕೇಂದ್ರೀಕರಿಸುತ್ತವೆ. ಏಕೆಂದರೆ ಹೃದಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಇವರಲ್ಲಿಯೇ. ಆದರೆ ನಾವು ಇದನ್ನೇ ಮಹಿಳೆಯರಿಗೂ ಅನ್ವಯಿಸುವುದಿದೆ. ಹೀಗಿದ್ದರೂ ಇಂತಹ ಅಧ್ಯಯನಗಳಿಂದ ಲೈಂಗಿಕ ಕ್ರಿಯೆ ಹೃದಯದ ರೋಗಗಳನ್ನು ತಡೆಯುತ್ತದೆ ಎಂದು ಸಾಬೀತು ಮಾಡಲಾಗದು. ಆದರೆ  ಲೈಂಗಿಕಜೀವನ ಒಟ್ಟಾರೆ ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ.

*ಲೈಂಗಿಕಕ್ರಿಯೆ ಆರೋಗ್ಯಕರ ಹೃದಯಕ್ಕೆ ಒಳ್ಳೆಯದು ಎನ್ನುವ ಸಂಗತಿ ಸಾಬೀತಾಗಿದೆಯೇ?
ಬಹುಶಃ ಇಲ್ಲ. ಉದಾಹರಣೆಗೆ, ಅವಲೋಕನ ಅಧ್ಯಯನಗಳು ಈ ಸಂಬಂಧವನ್ನು ಸಾಬೀತುಪಡಿಸುವಲ್ಲಿ ಸಹಾಯಕವಾಗುತ್ತವೆ. ಆದರೆ ಇದನ್ನು ನಿರೂಪಿಸುವುದು ಕಷ್ಟಸಾಧ್ಯ.

ಈ ಬಗ್ಗೆ ಕಾರಣ ಮತ್ತು ಪರಿಣಾಮವನ್ನು ಸಾಬೀತು ಮಾಡಲು, ನೀವು ನಿರ್ದಿಷ್ಟವಾದ ತಜ್ಞವೈದ್ಯರ ಗುಂಪಿನಿಂದ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಅವರು ನಿಮ್ಮ ಲೈಂಗಿಕಜೀವನವನ್ನು ಅವಲೋಕಿಸಿ ಇದನ್ನು ಸಾಬೀತು ಮಾಡಬೇಕಾಗುತ್ತದೆ.  ಆದರೆ ಇದು ಅಸಾಧ್ಯವಾಗಿರುವುದರಿಂದ ಲೈಂಗಿಕ ಜೀವನವು  ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಹೇಳಬಹುದಷ್ಟೇ, ಆದರೆ ಇದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ.

*ಹೃದ್ರೋಗವನ್ನು ಹೊಂದಿರುವವರು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಪಾಯಕಾರಿಯೇ?
ಬಹುತೇಕ ಸಂದರ್ಭಗಳಲ್ಲಿ ಅಪಾಯಕಾರಿ ಅಲ್ಲ. ಹೃದಯಾಘಾತ ಅಥವಾ ಹೃದಯಸಂಬಂಧೀ ರೋಗಗಳಿಂದ ಬಳಲುವವರು ಆಗಾಗ ಈ ಪ್ರಶ್ನೆಯನ್ನು ಕೇಳುವುದಿದೆ.  ಆದರೆ ಲೈಂಗಿಕಜೀವನಕ್ಕೆ ನೀವು ಸಮರ್ಥರು ಎಂದೆನಿಸಿದ್ದಲ್ಲಿ ನಿಮ್ಮನ್ನು ಅಡ್ಡಿಪಡಿಸುವುದಿಲ್ಲ. ಲೈಂಗಿಕ ಕ್ರಿಯೆಯಲ್ಲಿ ಸಾಮಾನ್ಯವಾಗಿ ರಕ್ತದೊತ್ತಡ ಸುಮಾರು 160/90ರಷ್ಟು ಹೆಚ್ಚಾಗುತ್ತದೆ.

ಕೆಲವು ನಿಮಿಷಗಳ  ಚುರುಕಾದ ನಡಿಗೆಯ ಸಮಯದಲ್ಲಿಯೂ ರಕ್ತದ ಒತ್ತಡದಲ್ಲಿ ಇಷ್ಟೇ ವ್ಯತ್ಯಾಸ ಉಂಟಾಗುತ್ತದೆ. ಆದರೆ ಹೃದಯದ ಸಮಸ್ಯೆ ಇರುವವರು  ಅಪರಿಚಿತ ಸಂಗಾತಿಯೊಡನೆ, ಅಂದರೆ ವಿವಾಹೇತರ ಸಂಬಂಧದಲ್ಲಿ ಲೈಂಗಿಕಕ್ರಿಯೆ ಮಾಡಿದಾಗ ಅದು ಅಪಾಯಕಾರಿಯಾಗಿ ಪರಿಣಮಿಸಿದ ಉದಾಹರಣೆಗಳಿವೆ. ಈ ಸಂದರ್ಭದಲ್ಲಿ ಪುರುಷರು ಸಾವಿಗೀಡಾದ ಬಗ್ಗೆಯೂ ಪುರಾವೆಗಳಿವೆ.

*ಲೈಂಗಿಕಜೀವನದಿಂದ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ?
ಹೌದು, ನಿಯಮಿತ ಲೈಂಗಿಕಜೀವನ ಒಟ್ಟಾರೆ ಆರೋಗ್ಯಕರ ಜೀವನಶೈಲಿಗೆ ಲಾಭದಾಯಕ ಎಂದೇ ಹೇಳಬಹುದು. ಇದು ನಿಮ್ಮನ್ನು ಸಂತೋಷವಾಗಿಡುವ ಜೊತೆಗೆ  ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ.
(ಓದುಗರು ತಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
ಇಮೇಲ್‌– bhoomika@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT