ಬಾಗಲಕೋಟೆ: ಇಲ್ಲಿನ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಸರ್ವಾಂಗ ಅಭ್ಯಂಗ ಚಿಕಿತ್ಸೆ ಪಡೆಯುವಾಗ ಪುರುಷ ಸಹಾಯಕರಿಬ್ಬರ ಗೈರು, ಸ್ತ್ರೀರೋಗ ವಿಭಾಗದ ಅಟೆಂಡರ್ ಆಗಿದ್ದ ವಿಜಯಲಕ್ಷ್ಮಿ ಸರೂರ ಅವರಿಗೆ ಮೇಟಿಯವರೊಂದಿಗೆ ಪರಿಚಯಕ್ಕೆ ಕಾರಣವಾಯಿತು ಎಂಬ ಸಂಗತಿ ಬಯಲಾಗಿದೆ.

ಬೆನ್ನು ನೋವಿನಿಂದ ಬಳಲುತ್ತಿದ್ದ ಮೇಟಿ, ಇಲ್ಲಿನ ನವನಗರದ 34ನೇ ಸೆಕ್ಟರ್ನಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಕಳೆದ ಜನವರಿಯಲ್ಲಿ ಕಟಿ ಬಸ್ತಿ, ಸರ್ವಾಂಗ ಅಭ್ಯಂಗ, ಸರ್ವಾಂಗ ಸ್ವೇದ ಹಾಗೂ ಬಸ್ತಿ ಚಿಕಿತ್ಸೆ ಪಡೆದಿದ್ದರು.

ಮೂಲತಃ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯವರಾದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹೇಶ್ವರ ಎಸ್. ಗುಗ್ಗರಿ ಅವರಿಗೆ ಮೇಟಿ ಮೊದಲಿನಿಂದಲೂ ಪರಿಚಿತರು. ಶಾಸಕರಾಗಿದ್ದ ಮೇಟಿ ಅವರನ್ನು ವೈದ್ಯರು ಕಾರ್ಯನಿಮಿತ್ತ ಭೇಟಿಯಾಗಿದ್ದರು. ಈ ವೇಳೆ ಮೇಟಿ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕೆ ಇಲ್ಲಿಯೇ ಉತ್ತಮ ಚಿಕಿತ್ಸೆ ಲಭ್ಯವಿದ್ದು, ಆಸ್ಪತ್ರೆಗೆ ಬರಲು ವೈದ್ಯರು ಹೇಳಿದ್ದರು. ಮರು ದಿನವೇ ಮೇಟಿ ಚಿಕಿತ್ಸೆಗೆ ಬಂದಿದ್ದರು.

ಆಯುಷ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಮೂವರು ಅಟೆಂಡರ್ಗಳು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ವಿಜಯಲಕ್ಷ್ಮಿ ಸ್ತ್ರೀರೋಗ ವಿಭಾಗದ ಅಟೆಂಡರ್.

‘ಕಳೆದ ವರ್ಷ ಡಿಸೆಂಬರ್ನಲ್ಲಿ ವೇತನ ಬಿಡುಗಡೆ ತಡವಾದ ಕಾರಣ ಇಬ್ಬರು ಪುರುಷ ಅಟೆಂಡರ್ಗಳು ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಹಾಗಾಗಿ ಅಂದು ಚಿಕಿತ್ಸೆಗೆ ಬಂದಿದ್ದ ಮೇಟಿ ಅವರಿಗೆ ಸರ್ವಾಂಗ ಅಭ್ಯಂಗ ಚಿಕಿತ್ಸೆ ನೀಡಲು ವಿಜಯಲಕ್ಷ್ಮಿ ನೆರವು ಪಡೆಯಲಾಗಿತ್ತು. ನನ್ನ ಸಮ್ಮುಖದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು’ ಎಂದು ಡಾ.ಗುಗ್ಗರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕರಾಗಿದ್ದಾಗ ಎರಡು ಬಾರಿ ಚಿಕಿತ್ಸೆಗೆ ಬಂದಿದ್ದ ಅವರು, ಸಚಿವರಾದ ಮೇಲೆ ಒಮ್ಮೆ ಬಂದಿದ್ದರು. ಆಗ ಆಸ್ಪತ್ರೆ ಯಲ್ಲಿ ಇಬ್ಬರ ನಡುವೆ ಆಕ್ಷೇಪಾರ್ಹ ವರ್ತನೆ ಕಾಣಿಸಿರಲಿಲ್ಲ. ಕಳೆದ ಆಗಸ್ಟ್ ಅಂತ್ಯದಲ್ಲಿ ಬೆನ್ನು ನೋವಿಗೆ ಮೇಟಿ ಅವರು ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನಂತರ ಇಲ್ಲಿಗೆ ಬರಲಿಲ್ಲ’ ಎಂದು ತಿಳಿಸಿದರು.

ವಿಚಾರಣೆ ಎದುರಿಸಿದ್ದ ಸಹೋದ್ಯೋಗಿಗಳು:  ‘ಮೇಟಿ ಪರಿಚಿತರಾದ ನಂತರ ವಿಜಯಲಕ್ಷ್ಮಿ ಅವರ ವರ್ತನೆಯೇ ಬದಲಾಯಿತು. ಶಾಸಕರ ಬೆಂಬಲವಿದೆ ಎಂಬ ಕಾರಣಕ್ಕೆ ದರ್ಪ ತೋರಿಸತೊಡಗಿದ್ದರು’ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಾರೆ.

ಜಿಲ್ಲಾಧಿಕಾರಿಗೆ, ಜಿಲ್ಲಾ ಮಹಿಳಾ ದೂರು ನಿವಾರಣಾ ಸಮಿತಿಗೆ, ಆಯುಷ್ ನಿರ್ದೇಶನಾಲಯಕ್ಕೆ ಮೇಲಧಿಕಾರಿ, ಸಹೋದ್ಯೋಗಿಗಳ ವಿರುದ್ಧ ಮಾನಸಿಕ, ದೈಹಿಕ ಕಿರುಕುಳ, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಇದರ ಪರಿಣಾಮ. ಜಿಲ್ಲಾ ಆಯುಷ್ ಅಧಿಕಾರಿ ಸೇರಿದಂತೆ, ಇಬ್ಬರು ವೈದ್ಯರು ಹಾಗೂ ಪ್ರಥಮದರ್ಜೆ ಸಹಾಯಕಿ ಕೂಡ ವಿಚಾರಣೆ ಎದುರಿಸಿದ್ದಾರೆ. ಆಕೆಯ ತೊಂದರೆಯನ್ನು ತಾಳಲಾರದೇ ಕಳೆದ ಆಗಸ್ಟ್ 11ರಂದು ಸ್ವತಃ ಆಯುಷ್ ಅಧಿಕಾರಿಯೇ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ಈ ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪಶ್ನೆ ಮಾಡಲಾಗದೇ ಬಯೊಮೆಟ್ರಿಕ್ ಅಳವಡಿಕೆ! ‘ಆಸ್ಪತ್ರೆ ಸಮಯ ಬೆಳಿಗ್ಗೆ 8.30ರಿಂದ 1 ಗಂಟೆವರೆಗೆ ಇದೆ. ವೈದ್ಯಾ ಧಿಕಾರಿ 8.30ಕ್ಕೆ ಬಂದರೆ ಆಕೆ ಮಾತ್ರ 10 ಗಂಟೆಗೆ ಬರುತ್ತಿದ್ದರು. ಮೇಲಧಿಕಾರಿಗಳು ಪ್ರಶ್ನಿಸಿದರೆ ಏಕವಚನದಲ್ಲಿಯೇ ಪ್ರತಿಕ್ರಿಯಿಸುತ್ತಿದ್ದರು. ಪಂಚಕರ್ಮ ಕೊಠಡಿಯಲ್ಲಿ ಕೆಲಸ ಇದ್ದರೂ ಸ್ವಾಗತಕಾರಿಣಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಮೇಟಿ ಅವರ ಹೆಸರಿನಲ್ಲಿ ನಮ್ಮನ್ನೆಲ್ಲಾ ಬೆದರಿಸುತ್ತಿದ್ದರು. ಗೈರು ಹಾಜರಾದ ದಿನದಂದೂ ಅವರು ಸಹಿ ಮಾಡುತ್ತಿದ್ದರು. ಅದನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಹಾಗಾಗಿ ಆಸ್ಪತ್ರೆಗೆ ಬಯೊಮೆಟ್ರಿಕ್ ಹಾಜರಿ ವ್ಯವಸ್ಥೆಯನ್ನು ಅಳವಡಿಸಲಾಯಿತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಆಕೆಯ ಕಾಟ ತಾಳಲಾರದೆ ಹಿರಿಯ ವೈದ್ಯರೊಬ್ಬರು ಕಲಘಟ ಗಿಯ ತಾಲ್ಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿ ಸಿಕೊಂಡರು. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬರು ವೈದ್ಯೆ ಕೆಲಸ ಬಿಟ್ಟರು. ಆಕೆಗೆ ಗೌರವ ಕೊಡಲಿಲ್ಲ ಎಂಬ ಕಾರಣಕ್ಕೆ ಬೀಳಗಿ ಆಸ್ಪತ್ರೆಯಿಂದ ಬಂದಿದ್ದ ವೈದ್ಯರೊಬ್ಬರ ನಿಯೋಜನೆ ರದ್ದಾಯಿತು. ಅದಕ್ಕೆಲ್ಲಾ ಮಾಜಿ ಸಚಿವರ ಪ್ರಭಾವ ಬಳಕೆಯಾಗಿತ್ತು. ಆಕೆಗೆ ಹಿರಿಯ ಅಧಿಕಾರಿಗಳೂ ಹೆದರುತ್ತಿದ್ದರು’ ಎಂದು ಅವರು ತಿಳಿಸಿದರು.

2012ರಿಂದ ಕೆಲಸ ನಿರ್ವಹಣೆ

‘ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಮೇರೆಗೆ 2012ರ ಜುಲೈನಿಂದ ವಿಜಯಲಕ್ಷ್ಮಿ ಸರೂರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ 11ರಂದು ಅವರು ಕರ್ತವ್ಯಕ್ಕೆ ಬಂದಿದ್ದರು. ಬೆಳಿಗ್ಗೆ 11.30ರ ವೇಳೆ ಆಕೆಗೆ ದೂರವಾಣಿ ಕರೆಯೊಂದು ಬಂತು. ಅನುಮತಿ ಪಡೆಯದೇ ಆಕೆ ಇಲ್ಲಿಂದ ತೆರಳಿದರು. ನಂತರ ಇಲ್ಲಿಯವರೆಗೂ ಬಂದಿಲ್ಲ’ ಎಂದು ಡಾ.ಮಹೇಶ್ವರ ಗುಗ್ಗರಿ ತಿಳಿಸಿದರು.

ಹುಂಡೈ ಕಾರು ಖರೀದಿ: ಮೂರು ತಿಂಗಳ ಹಿಂದೆ ವಿಜಯಲಕ್ಷ್ಮೀ ತಮ್ಮ ಪತಿ ಹೆಸರಿನಲ್ಲಿ ಬಿಳಿ ಬಣ್ಣದ ಹುಂಡೈ ಅಸೆಂಟ್ ಕಾರು ಖರೀದಿಸಿದ್ದಾರೆ. ಆ ದಿನ ಆಸ್ಪತ್ರೆಯಲ್ಲಿ ಎಲ್ಲರಿಗೂ ಪೇಢೆ ಹಂಚಿದ್ದರು ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.