ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ದಿಷ್ಟ ಅವಧಿಯ ಧರಣಿ ಆರಂಭ

Last Updated 23 ಡಿಸೆಂಬರ್ 2016, 8:15 IST
ಅಕ್ಷರ ಗಾತ್ರ

ಬಳ್ಳಾರಿ: ಪರಿಷ್ಕೃತ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಗರ ನೀರು ಸರಬ ರಾಜು ಒಳಚರಂಡಿ ಮಂಡಳಿಯ ಒಳ ಚರಂಡಿ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸಮಾನತೆ ಯೂನಿಯನ್‌ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಧರಣಿ ನಡೆಸಿದರು.

ಸುಮಾರು ಎರಡು ದಶಕದಿಂದ 88 ನೌಕರರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಪರಿಷ್ಕೃತ ವೇತನ ನೀಡಿಲ್ಲ. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ವೇತನ ನೀಡಿಲ್ಲ. ಹೀಗಾಗಿ ಕೂಡಲೇ ಎರಡು ತಿಂಗಳ ವೇತನ ಹಾಗೂ ಎರಡು ತಿಂಗಳ ವೇತನದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸಂಘಟನೆಯ ರಾಜ್ಯ ಸಂಚಾಲಕ ರಾಮಚಂದ್ರ ಆಗ್ರಹಿಸಿದರು.

ಆಗಸ್ಟ್‌ ತಿಂಗಳಲ್ಲಿ ಕಾರ್ಮಿಕ ಇಲಾಖೆ ಪ್ರಕಟಿಸಿರುವ ಅಧಿಸೂಚನೆ ಪ್ರಕಾರ ಪರಿಷ್ಕೃತ ಕನಿಷ್ಠ ವೇತನ ₹ 14,040 ಹಾಗೂ 4 ದಿನಗಳ ರಜೆ ಭತ್ಯೆ ₹ 2,160 ಮತ್ತು ವಿ.ಡಿ.ಎ. ₹ 398 ಸೇರಿಸಿ ಒಟ್ಟು ₹ 16,598 ನೀಡಬೇಕು ಎಂದು ಮಂಡ ಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ಪಾಲಿಕೆ ಹಳೆಯ ಮಾನದಂಡಗಳ ಅಡಿಯಲ್ಲೇ ವೇತನ ನೀಡುತ್ತಿರುವುದ ರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮಂಡಳಿಯ ಅಧಿಕಾರಿಗಳು ಹೇಳುತ್ತಿ ದ್ದಾರೆ. ಸಾಮಾನ್ಯ ಸಭೆಯಲ್ಲಿ ಅನುಮೋ ದನೆ ಪಡೆದು ಪರಿಷ್ಕೃತ ವೇತನ ಜಾರಿ ಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಈ ಪರಿಸ್ಥಿತಿ ಯಲ್ಲಿ ಕಾರ್ಮಿಕರು ಬವಣೆ ಪಡುವಂತಾ ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರದೊಳಗೆ ಪರಿಷ್ಕೃತ ವೇತನ ವನ್ನು ನೀಡಲಾಗುವುದು ಎಂದು ಕೆಲವು ದಿನಗಳ ಹಿಂದೆ ಪಾಲಿಕೆ ಅಧಿಕಾರಿಗಳು ನೀಡಿದ್ದ ಭರವಸೆಯನ್ನೂ ಮರೆತಿದ್ದಾರೆ. ಹೀಗಾಗಿ
ಸಚಿವ ಸಂಪುಟದ ತೀರ್ಮಾನದಂತೆ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿ ಸುವ ರೀತಿಯಲ್ಲಿ ಒಳಚರಂಡಿ ಕಾರ್ಮಿಕ ರನ್ನು ಕಾಯಂಗೊಳಿಸಬೇಕು. ಕಾರ್ಮಿಕ ಇಲಾಖೆ ನಿಗದಿಪಡಿಸಿದ ಅಗತ್ಯ ಸಲ ಕರಣೆ ಮತ್ತು ಸಾಮಗ್ರಿ ಹಾಗೂ ಸಮವಸ್ತ್ರ ಗಳನ್ನು ನೀಡಬೇಕು.  ಪ್ರತಿ 3 ತಿಂಗಳಿಗೆ ಒಮ್ಮೆ ಆರೋಗ್ಯ ಶಿಬಿರ ಏರ್ಪಡಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಮುಖಂಡರಾದ ಹನುಮಂತ, ಮಲ್ಲೇಶ್, ವಿಜಯಕುಮಾರ್, ಮಾರೆಣ್ಣ, ರತ್ನಮ್ಮ, ನಾಗಲಕ್ಷ್ಮೀ, ಪಾರ್ವತಿ, ಬಸಲಿಂಗಮ್ಮ, ಲಕ್ಷ್ಮೀದೇವಿ, ಎನ್.ಹುಲಿಗೆಮ್ಮ ಧರಣಿ ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT