ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಸುಳಿಯಲ್ಲಿ ಹೈಟೆಕ್‌ ಶೌಚಾಲಯ

ಅತ್ಯಾಧುನಿಕ ಯಂತ್ರಗಳು ಪ್ರದರ್ಶನಕ್ಕಷ್ಟೇ ಸೀಮಿತ: ದೂಳು ಹಿಡಿದು ಹಾಳಾಗುವ ಆತಂಕ
Last Updated 26 ಡಿಸೆಂಬರ್ 2016, 5:21 IST
ಅಕ್ಷರ ಗಾತ್ರ

ಗದಗ: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ನಿರ್ಮಿಸಿದ್ದ ಹೈಟೆಕ್‌ ಶೌಚಾಲಯ ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿವೆ. ಒಂದು ವರ್ಷದ ಹಿಂದೆ ಸುಮಾರು ₹ 2 ಕೋಟಿ ವೆಚ್ಚದಲ್ಲಿ ಗದಗ– ಬೆಟಗೇರಿ ಅವಳಿ ನಗರದ 29ನೇ ವಾರ್ಡ್‌ನ ಎಪಿಎಂಸಿ ಹಮಾಲರ ಪ್ಲಾಟ್‌ನಲ್ಲಿ ಹಾಗೂ ರಾಜೀವ್‌ ಗಾಂಧಿ ನಗರ ವ್ಯಾಪ್ತಿಯಲ್ಲಿ ಒಟ್ಟು ಮೂರು ಹೈಟೆಕ್‌ ಶೌಚಾಲಯ ಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಾರ್ಡ್‌ ನಲ್ಲಿ 6 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಆದರೆ, ಈ ಶೌಚಗೃಹಗಳನ್ನು ಬೆರಳೆಣಿಕೆಯಷ್ಟು ಜನ ಮಾತ್ರ ಬಳಸುತ್ತಿದ್ದಾರೆ.

ಬಡವರ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶೇ 75 ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಶೇ 25 ಅನುದಾನದಿಂದ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿತ್ತು.

ಹೈಟೆಕ್‌ ಶೌಚಗೃಹದಲ್ಲಿ ಏನಿದೆ: ಹೈಟೆಕ್‌ ಶೌಚಾ ಲಯದಲ್ಲಿ ಬಿಸಿ ನೀರು, ತಣ್ಣೀರಿನ ಶವರ್‌ ಸ್ನಾನ, ಶೌಚಕ್ಕೆ ದೇಶಿ ಮತ್ತು ಪಾಶ್ಚಿಮಾತ್ಯ ಕಮೋಡ್, ಶೂ ಪಾಲಿಶ್ ಯಂತ್ರ, ಹೇರ್ ಡ್ರೈಯರ್, ಅಕ್ವಾ ಗಾರ್ಡ್‌ ನೀರಿನ ಯಂತ್ರ, ಡ್ರೆಸ್ಸಿಂಗ್ ಟೇಬಲ್, ವಾರ್ಡ್‌ ರೋಬ್, ವಾಷಿಂಗ್ ಮಶಿನ್, ಸ್ಯಾನಿಟರಿ ನ್ಯಾಪಕಿನ್ ಡಿಸ್ಟ್ರೊಯ್ ಯಂತ್ರ ಹಾಗೂ ಅಲಂಕಾರ ಮಾಡಿ ಕೊಳ್ಳಲು ಡ್ರೆಸ್ಸಿಂಗ್ ಟೇಬಲ್ ವ್ಯವಸ್ಥೆ ಇದೆ. ಇಲ್ಲಿ ರುವ ಬಹುತೇಕ ಯಂತ್ರಗಳನ್ನು ಬಳಸದೇ ಇರುವು ದರಿಂದ ಪ್ರದರ್ಶನಕ್ಕೆ ಇಟ್ಟಂತೆ ಕಾಣುತ್ತವೆ.

ಇಲ್ಲಿದೆ ಸಮಸ್ಯೆಗಳ ಸರಮಾಲೆ: ರಾಜೀವ್‌ ಗಾಂಧಿ ನಗರದ ಬಡಾವಣೆ ಠಾಣೆ ಪಕ್ಕದಲ್ಲಿರುವ ಹಾಗೂ ಎಪಿಎಂಸಿ ಹಮಾಲರ ಪ್ಲಾಟ್‌ನಲ್ಲಿರುವ  ಹೈಟೆಕ್‌ ಶೌಚಗೃಹಗಳನ್ನು ಪ್ರತಿನಿತ್ಯ 150ರಿಂದ 200 ಜನ ಬಳಸುತ್ತಿದ್ದಾರೆ. ಇನ್ನೂ ಸರ್ಕಾರಿ ಪ್ರೌಢಶಾಲೆ ಹತ್ತಿರದಲ್ಲಿರುವ ಗೌರವ ಘಟಕವನ್ನು ಕೇವಲ 50 ಸಾರ್ವಜನಿಕರು ಬಳಸುತ್ತಿದ್ದಾರೆ.

ಮೊದಲು ಕೆಲ ತಿಂಗಳವರೆಗೆ ನಾಲ್ವರು ಸದಸ್ಯರಿರುವ ಕುಟುಂಬಕ್ಕೆ ಮಾಸಿಕ ₹100 ನಿಗದಿ ಪಡಿಸಲಾಗಿದೆ. ಸದ್ಯ ನಗರ ಸಭೆ ಹೈಟೆಕ್‌ ಶೌಚಾಲಯ ಬಳಕೆದಾರರಿಗೆ ನಿಗದಿ ಪಡಿಸಿದ್ದ ಶುಲ್ಕವನ್ನು ಕಡಿತಗೊಳಿಸಿದೆ. ಅಷ್ಟಾದರೂ ಬೆರಳೆಣಿಯಷ್ಟೇ ಜನ ಉಪಯೋಗಿಸುತ್ತಿದ್ದಾರೆ. ಪ್ರತಿ ತಿಂಗಳಿಗೆ ಒಂದು ಗೌರವ ಘಟಕದ ನಿರ್ವ ಹಣೆ ಹಾಗೂ ವಿದ್ಯುತ್‌ ಮತ್ತು ಸಿಬ್ಬಂದಿ ವೇತನ ಸೇರಿ₹ 12 ಸಾವಿರ ವೆಚ್ಚವಾಗುತ್ತಿದೆ ಎಂಬುದು ಗಮ ನಾರ್ಹ ಅಂಶ.

‘ಹೈಟೆಕ್‌ ಶೌಚಾಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಮೊದಲು ದರ ನಿಗದಿ ಪಡಿಸಿ ದ್ದಾಗ ಜನರು ಚೆನ್ನಾಗಿ ಬಳಕೆ ಮಾಡುತ್ತಿದ್ದರು. ಸದ್ಯ ವಾರ್ಡ್‌ ನಿವಾಸಿಗಳಿಗೆ ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಿರುವುದರಿಂದ ಜನರು ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತಿದ್ದಾರೆ. ಸೋಲಾರ್ ಟ್ಯಾಂಕ್ ಬಿರುಕು ಬಿಟ್ಟಿರುವುದರಿಂದ ಬಿಸಿ ನೀರು ಬರುತ್ತಿಲ್ಲ. ಹೇರ್ ಡ್ರೈಯರ್, ಅಕ್ವಾ ಗಾರ್ಡ್‌ ನೀರಿನ ಯಂತ್ರ, ವಾಷಿಂಗ್ ಮಶಿನ್ ಕೆಟ್ಟಿವೆ. ಈ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಎಪಿಎಂಸಿ ಹಮಾಲರ ಪ್ಲಾಟ್‌ನ ಗೌರವ ಘಟಕದ ನಿರ್ವಹಣೆ ಗಾರ ಗಾಳಪ್ಪ ಡಂಬಳ.
- ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT